Friday, July 25, 2025
Homeರಾಷ್ಟ್ರೀಯ | Nationalಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ತಾಂತ್ರಿಕ ದೋಷ, ಟೇಕ್ ಆಫ್ ಸ್ಥಗಿತ

ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ತಾಂತ್ರಿಕ ದೋಷ, ಟೇಕ್ ಆಫ್ ಸ್ಥಗಿತ

Air India Express flight suffers technical snag, aborts takeoff

ನವದೆಹಲಿ,ಜು.24- ಸುಮಾರು 160 ಪ್ರಯಾಣಿಕರೊಂದಿಗೆ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು ತಾಂತ್ರಿಕ ದೋಷದಿಂದಾಗಿ ಸ್ಥಗಿತಗೊಂಡ ಘಟನೆ ಇಲ್ಲಿ ನಡೆದಿದೆ.

ದಿಲ್ಲಿಯಿಂದ ಹೊರಟಿದ್ದ ವಿಮಾನದಲ್ಲಿ ಪೈಲೆಟ್ ತಾಂತ್ರಿಕ ಸಮಸ್ಯೆ ಗುರುತ್ತಿಸಿದ ನಂತರ ಸುರಕ್ಷತಾ ದೃಷ್ಟಿಯಿಂದ ಮೇಲೆ ಹಾರುವ ಸಂದರ್ಭದಲ್ಲಿ ನಿಂತಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ತಿಳಿಸಿದ್ದಾರೆ.

ಕಾಕ್‌ ಪಿಟ್‌ನಲ್ಲಿ ವೇಗದ ನಿಯತಾಂಕಗಳನ್ನು ಪ್ರದರ್ಶಿಸುವ ಪರದೆಗಳಲ್ಲಿ ದೋಷ ಕಂಡುಬಂದ ಕಾರಣ ಪೈಲಟ್ ಟೇಕ್‌ ಆಫ್ ಅನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ ಎಂದು ಮೂಲವೊಂದು ತಿಳಿಸಿದೆ.

ಪ್ರಯಾಣಿಕರನ್ನು ಕೆಳಗಿಳಿಸಿ ಮುಂಬೈಗೆ ಹೊರಟಿದ್ದ ಪರ್ಯಾಯ ವಿಮಾನದಲ್ಲಿ ಕಳುಹಿಸಲಾಯಿತು ಎಂದು ವಕ್ತಾರರು ತಿಳಿಸಿದ್ದಾರೆ. ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸುತ್ತಾ ಸುರಕ್ಷತೆ ಅತ್ಯಂತ ಮುಖ್ಯ ಎಂದು ವಿಮಾನಯಾನ ಸಂಸ್ಥೆ ಪುನರುಚ್ಚರಿಸಿದೆ.

RELATED ARTICLES

Latest News