Wednesday, April 2, 2025
Homeರಾಷ್ಟ್ರೀಯ | Nationalವಿಮಾನ ಹಾರಾಟ ರದ್ದಿಗೆ ಕಾರಣರಾದ 25 ಸಿಬ್ಬಂದಿಗಳನ್ನು ವಜಾಗೊಳಿಸಿದ ಏರ್‌ ಇಂಡಿಯಾ

ವಿಮಾನ ಹಾರಾಟ ರದ್ದಿಗೆ ಕಾರಣರಾದ 25 ಸಿಬ್ಬಂದಿಗಳನ್ನು ವಜಾಗೊಳಿಸಿದ ಏರ್‌ ಇಂಡಿಯಾ

ನವದೆಹಲಿ, ಮೇ 9 (ಪಿಟಿಐ) ಅನಾರೋಗ್ಯದ ನೆಪವೊಡ್ಡಿ ಸಾಮೂಹಿಕ ರಜೆ ಹಾಕುವ ಮೂಲಕ 90ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಿಗೆ ಕಾರಣಕರ್ತರು ಎನ್ನಲಾದ ಸುಮಾರು 25 ಕ್ಯಾಬಿನ್‌ ಸಿಬ್ಬಂದಿಗಳನ್ನು ಏರ್‌ ಇಂಡಿಯಾ ಸಂಸ್ಥೆ ವಜಾಗೊಳಿಸಿದೆ ಎಂದು ಏರ್‌ಲೈನ್‌ ಮೂಲಗಳು ತಿಳಿಸಿವೆ.

ಟಾಟಾ ಗ್ರೂಪ್‌ ಒಡೆತನದ ವಿಮಾನಯಾನ ಸಂಸ್ಥೆಯು ಉಳಿದ ಕ್ಯಾಬಿನ್‌ ಸಿಬ್ಬಂದಿಗಳಿಗೆ ಇಂದು ಸಂಜೆ 4 ಗಂಟೆಯೊಳಗೆ ಮತ್ತೆ ಕರ್ತವ್ಯಕ್ಕೆ ಹಾಜರಾಗಬೇಕು ಇಲ್ಲದಿದ್ದರೆ ನಿಮನ್ನು ವಜಾಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಕ್ಯಾಬಿನ್‌ ಸಿಬ್ಬಂದಿಯ ಲಭ್ಯತೆಯಿಲ್ಲದ ಕಾರಣ ಏರ್‌ ಇಂಡಿಯಾ ಸಂಸ್ಥೆ ಕನಿಷ್ಠ 60 ವಿಮಾನ ಯಾನಗಳನ್ನು ರದ್ದುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ ಮತ್ತು ಕ್ಯಾಬಿನ್‌ ಸಿಬ್ಬಂದಿಯ ಒಂದು ವಿಭಾಗದಿಂದ ಸಾಮೂಹಿಕ ರಜೆಗಳು ಪ್ರಯಾಣಿಕರಿಗೆ ಅಪಾರ ಅನಾನುಕೂಲತೆಯನ್ನು ಉಂಟುಮಾಡಿದೆ.

ಏರ್‌ಲೈನ್‌ನಲ್ಲಿ ಹಿರಿಯ ಮಟ್ಟದಲ್ಲಿ ಸುಮಾರು 500 ಮಂದಿ ಸೇರಿದಂತೆ ಸುಮಾರು 1,400 ಕ್ಯಾಬಿನ್‌ ಸಿಬ್ಬಂದಿ ಇದ್ದಾರೆ.90 ಕ್ಕೂ ಹೆಚ್ಚು ವಿಮಾನಗಳ ರದ್ದತಿಗೆ ಕಾರಣವಾದ ಏರ್‌ಲೈನ್‌ನಲ್ಲಿನ ದುರುಪಯೋಗದ ವಿರುದ್ಧ ಪ್ರತಿಭಟಿಸಲು 200 ಕ್ಕೂ ಹೆಚ್ಚು ಕ್ಯಾಬಿನ್‌ ಸಿಬ್ಬಂದಿ ಮಂಗಳವಾರ ರಾತ್ರಿಯಿಂದ ಅಸ್ವಸ್ಥರಾಗಿದ್ದಾರೆಂದು ವರದಿ ಮಾಡಲು ಪ್ರಾರಂಭಿಸುವ ಮೂಲಕ ಸಾಮೂಹಿಕ ರಜೆ ಹಾಕಿದ್ದರಿಂದ ಇಂತಹ ಸನ್ನಿವೇಶ ನಿರ್ಮಾಣವಾಗಿತ್ತು.

RELATED ARTICLES

Latest News