Monday, March 10, 2025
Homeರಾಷ್ಟ್ರೀಯ | Nationalಬಾಂಬ್ ಬೆದರಿಕೆ : ನ್ಯೂಯಾರ್ಕ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮುಂಬೈಗೆ ವಾಪಸ್

ಬಾಂಬ್ ಬೆದರಿಕೆ : ನ್ಯೂಯಾರ್ಕ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮುಂಬೈಗೆ ವಾಪಸ್

Air India New York-bound flight returns to Mumbai after bomb scare

ನವದೆಹಲಿ, ಮಾ.10-ಮುಂಬೈನಿಂದ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಇಂದು ಬೆಳಗ್ಗೆ ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಮುಂಬೈಗೆ ಮರಳಿದೆ ಒಟ್ಟು 320 ಕ್ಕೂ ಹೆಚ್ಚು ಜನರನ್ನು ಹೊತ್ತ ವಿಮಾನವು ಮುಂಬೈನಲ್ಲಿ ಸುರಕ್ಷಿತವಾಗಿ ಇಳಿಯಿತು ಮತ್ತು ಭದ್ರತಾ ಸಿಬ್ಬಂದಿ ತಪಾಸಣೆಗೆ ನಡೆಸಿದ್ದಾರೆ.

ಮುಂಬೈ-ನ್ಯೂಯಾರ್ಕ್ ನಡುವಿನ ಎಐ 119 ವಿಮಾನ ಹಾರಾಟದ ಮಧ್ಯ ಬಾಂಬ್ ಬೆದರಿಕೆ ಬಂದಿದ್ದು ಅಗತ್ಯ ನಿಯಮ ಅನುಸರಿಸಿದ ನಂತರ, ವಿಮಾನವು ವಿಮಾನದಲ್ಲಿದ್ದ ಎಲ್ಲರ ಸುರಕ್ಷತೆ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಮುಂಬೈಗೆ ಮರಳಿತು ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.

ವಿಮಾನದ ಶೌಚಗೃಹವೊಂದರಲ್ಲಿ ಬಾಂಬ್ ಬೆದರಿಕೆ ಇದ್ದು, ಒಂದು ಚೀಟಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಬೋಯಿಂಗ್ 777-300 ಇಆರ್ ವಿಮಾನದಲ್ಲಿ 19 ಸಿಬ್ಬಂದಿ ಸೇರಿದಂತೆ 322 ಜನರಿದ್ದರು ಎಂದು ಮೂಲವೊಂದು ತಿಳಿಸಿದೆ.

RELATED ARTICLES

Latest News