ಚೆನ್ನೈ, ಅ.11-ಖಾಸಗಿ ವಿಮಾನವೊಂದು ಮಧುರೈನಿಂದ 76 ಪ್ರಯಾಣಿಕರನ್ನು ಚೆನ್ನೈಗೆ ಕರೆತರುತ್ತಿರುವಾಗ ಪೈಲೆಟ್ ಮುಂದಿನ ಕಿಟಿಕಿ ಗಾಜು ಒಡೆದು ಹೋದ ಘಟನೆ ಕಳೆದ ರಾತ್ರಿ ನಡೆದಿದೆ.
ವಿಮಾನ ಇಳಿಯುವ ಮುನ್ನ ಪೈಲಟ್ ಕಿಟಕಿ ಗಾಜು ಬಿರುಕು ಬಿಟ್ಟಿರುವುದನ್ನು ಪೈಲಟ್ ಗಮನಿಸಿ ವಿಮಾನ ನಿಲ್ದಾಣದ ವಾಯು ಸಂಚಾರ ನಿಯಂತ್ರಕರಿಗೆ ಮಾಹಿತಿ ನೀಡಿದರು.
ಮಾಹಿತಿ ಪಡೆದ ನಂತರ, ಚೆನ್ನೈ ವಿಮಾನ ನಿಲ್ದಾಣದಲ್ಲಿ ತುರ್ತು ವ್ಯವಸ್ಥೆ ಮಾಡಲಾಯಿತು ಮತ್ತು ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು ಎಂದು ಅವರು ಅಧಿಕಾರಿಯೊಬ್ಬರು ಹೇಳಿದರು.
ನಂತರ ವಿಮಾನವನ್ನು ಪ್ರತ್ಯೇಕ ಸ್ಥಳಕ್ಕೆ (ಬೇ ಸಂಖ್ಯೆ 95) ಕೊಂಡೊಯ್ಯಲಾಯಿತು ಮತ್ತು ನಂತರ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಯಿತು. ಪ್ರಸ್ತುತ, ಕಿಟಕಿ ಗಾಜು(ವಿಂಡ್ಶೀಲ್ಡ್)ನ್ನು ಬದಲಾವಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಮರ್ಗ ಮಧ್ಯ ಈ ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅವರು ಹೇಳಿದರು. ದುರಸ್ಥಿ ವಿಳಂಬದ ಹಿನ್ನಲೆಯಲ್ಲಿ ಮತ್ತೆ ಮಧುರೈಗೆ ವಿಮಾನದ ಹಿಂತಿರುಗುವ ಪ್ರಯಾಣವನ್ನು ರದ್ದುಗೊಳಿಸಲಾಗಿದೆ ಎಂದು ಅವರು ಹೇಳಿದರು.