ಬೆಳಗಾವಿ,ಜ.30-ಮಹಾಕುಂಭಮೇಳದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಮೃತಪಟ್ಟಿದ್ದ ಬೆಳಗಾವಿ ಮೂಲದ ನಾಲ್ವರ ಮೃತದೇಹವನ್ನು ಏರ್ ಲಿಫ್ಟ್ ಮಾಡಲು ಇಂದು ಸಿದ್ಧತೆ ನಡೆದಿದೆ. ಪ್ರಯಾಗ್ ರಾಜ್ ನಿಂದ ಆಂಬುಲೆನ್ಸ್ ಮೂಲಕ ನವದೆಹಲಿಗೆ ಮೃತದೇಹಗಳನ್ನು ತಂದು ಅಲ್ಲಿಂದ ಬೆಳಗಾವಿಗೆ ಸಂಜೆ ವೇಳೆ ಇಂಡಿಗೋ ವಿಶೇಷ ವಿಮಾನದಲ್ಲಿ ಅಲ್ಲಿರುವವರನ್ನು ಕರೆತರಲು ತೀರ್ಮಾನ ಮಾಡಲಾಗಿದೆ.
ಬಹುತೇಕ ಇಂದು ಸಂಜೆ ಮೃತದೇಹಗಳ ಜೊತೆ ಕುಟುಂಬ ಸದಸ್ಯರು ಬೆಳಗಾವಿ ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ.. ವಡಗಾವಿ ನಿವಾಸಿಗಳಾದ ಜ್ಯೋತಿ ಹತ್ತರವಾಠ, ಮೇಘಾ ಹತ್ತರವಾಠ, ಶೆಟ್ಟಿಗಲ್ಲಿ ನಿವಾಸಿ ಅರುಣ ,ಶಿವಾಜಿ ನಗರದ ನಿವಾಸಿ ಮಹಾದೇವಿ ಎಂಬುವವರು ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿರುವುದು ದೃಢಪಟ್ಟಿದ್ದು,ಗಾಯಾಳುಗಳ ಬಗ್ಗೆ ಮಾಹಿತಿ ಸಿಕ್ಕಿಲ್ಲ . ಅಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಲಾಗಿದ್ದು ವಾಪತ್ತೆಯಾದವರು ,ಗಾಯಾಳುಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತಿದೆ ಎಂದು ಕಂದಾಯ ಸಚಿವ ಕೃಷ್ಣಾಬೈರೇಗೌಡ ತಿಳಿಸಿದ್ದಾರೆ.