Monday, March 31, 2025
Homeಮನರಂಜನೆಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಕಾರಿಗೆ ಬಸ್ ಡಿಕ್ಕಿ

ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಕಾರಿಗೆ ಬಸ್ ಡಿಕ್ಕಿ

Aishwarya Rai Bachchan Car Accident - Actress Was Not Inside Car

ಮುಂಬೈ,ಮಾ.27-ಬಾಲಿವುಡ್ ನಟಿ ಐಶ್ವರ್ಯಾ ಅವರ ಐಷಾರಾಮಿ ಕಾರಿಗೆ ಬಸ್ ಡಿಕ್ಕಿ ಹೊಡೆದ ಘಟನೆ ಇಲ್ಲಿನ ಜುಹು ಉಪನಗರದಲ್ಲಿ ನಡೆದಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈನ ಎಲೆಕ್ನಿಕ್ ಸಪ್ಪೆ ಅಂಡ್ ಟ್ರಾನ್ಸ್ ಪೋರ್ಟ್ ಸಂಸ್ಥೆಯ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಸಂದರ್ಭದಲ್ಲಿ ನಟಿ ಕಾರಿನಲ್ಲಿ ಇರಲಿಲ್ಲ. ಆದ್ರೆ ನಂಬರ್ ಪ್ಲೇಟ್ ಪರಿಶೀಲಿಸಿದಾಗ ಅದು ಐಶ್ವರ್ಯ ರೈ ಅವರದ್ದೇ ಕಾರು ಎಂಬುದು ಹೊತ್ತಾಗಿದೆ ಎಂದು ವರದಿಗಳು ತಿಳಿಸಿವೆ.

ಅಪಘಾತದ ಬಳಿಕ ಅಮಿತಾಬ್ ಬಚ್ಚನ್ ಅವರ ನಿವಾಸದ ಬೌನ್ಸರ್ ಬಸ್ ಚಾಲಕನಿಗೆ ಕಪಾಳಕ್ಕೆ ಬಾರಿಸಿದ್ದಾನೆ ಎಂದು ಬೆಸ್ಟ್ ಸಂಸ್ಥೆಯ ಅಧಿಕಾರಿ ತಿಳಿಸಿದ್ದಾರೆ. ನಂತರ ಒಂದಿಷ್ಟು ಹೈಡ್ರಾಮಾ ಬಳಿಕ ಬೌನ್ಸರ್ ಪೊಲೀಸರ ಎದುರು ಚಾಲಕನಿಗೆ ಕ್ಷಮೆ ಕೋರಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ಅಪಘತದ ದೃಶ್ಯ ಸಾಮಜಿಕ ತಾಣದಲ್ಲಿ ವೈರಲ್‌ ಆಗಿದೆ.

RELATED ARTICLES

Latest News