Friday, September 20, 2024
Homeಅಂತಾರಾಷ್ಟ್ರೀಯ | Internationalಅಕ್ಕ ಸಮ್ಮೇಳನಕ್ಕೆ ಅದ್ಧೂರಿ ಸಿದ್ಧತೆ

ಅಕ್ಕ ಸಮ್ಮೇಳನಕ್ಕೆ ಅದ್ಧೂರಿ ಸಿದ್ಧತೆ

Akka Conference

ವಾಷಿಂಗ್ಟನ್‌, ಆ.28– ಅಮೇರಿಕಾದ ವರ್ಜೀನಿಯಾ ರಾಜ್ಯದ ರಿಚಂಡ್‌ ನಗರದಲ್ಲಿ ಇದೇ ಆ.30, 31 ಮತ್ತು ಸೆ.1 ರಂದು ನಡೆಯಲಿರುವ ಅಮೆರಿಕಾ ಕನ್ನಡ ಕೂಟಗಳ ಆಗರ (ಅಕ್ಕ) 2024ರ ಸಮೇಳನಕ್ಕೆ ಅದ್ಧೂರಿ ಸಿದ್ಧತೆ ನಡೆಸಲಾಗುತ್ತಿದೆ ಎಂದು ಸಮೇಳನದ ಅಧ್ಯಕ್ಷರಾದ ರವಿ ಬೋರೆಗೌಡ ಅವರು ತಿಳಿಸಿದ್ದಾರೆ.

ಅಮೇರಿಕಾದ 50ಕ್ಕೂ ಹೆಚ್ಚು ರಾಜ್ಯಗಳ ಕನ್ನಡ ಸಂಘಗಳು ಒಟ್ಟಾಗಿ ಸೇರಿ ಪ್ರತೀ ಎರಡು ವರ್ಷಗಳಿಗೊಮೆ ಈ ಸಮೇಳನವನ್ನು ಆಯೋಜಿಸುತ್ತವೆ. ಕೋವಿಡ್‌ ಕಾರಣದಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಮುಂದೂಡಲಾಗಿತ್ತು.

ಈ ವರ್ಷದ ಸಮೇಳನವು ಕನ್ನಡಿಗರಿಗೆ ಒಂದು ಸಂಭ್ರಮದ ಹಬ್ಬ ವಾಗಿದ್ದು, ಕನ್ನಡ ಮತ್ತು ಕರ್ನಾಟಕದ ಸಂಸ್ಕೃತಿಯನ್ನು ಅಮೇರಿಕಾದ ಕನ್ನಡಿಗರಿಗೆ ಮತ್ತೊಮೆ ಸವಿಯುವಂತಹ ಒಂದು ಅಪೂರ್ವ ಅವಕಾಶವಾಗಿದೆ.ಈ ಸಮೇಳನಕ್ಕಾಗಿ 6 ರಿಂದ 8 ಸಾವಿರ ಕನ್ನಡಿಗರು ನೊಂದಾಯಿಸಿಕೊಂಡಿದ್ದು, ಮೂರು ದಿನಗಳ ಕಾಲ ಕನ್ನಡ ಡಿಂಡಿಮ ರಿಚಂಡ್‌ ನಗರದಲ್ಲಿ ಪ್ರತಿಧ್ವನಿಸಲಿದೆ.

ಕಾರ್ಯಕ್ರಮದ ಆಕರ್ಷಣೆಗಳಾಗಿ ಜಾನಪದ ಗೀತಗಾಯನ, ನಾಟಕ, ನೃತ್ಯ, ಫ್ಯಾಶನ್ ಶೋ, ಆರ್ಟ್ ಫೆಸ್ಟಿವಲ್ , ಕ್ರೀಡಾ ಚಟುವಟಿಕೆಗಳು, ಸ್ಥಳೀಯ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಫಿಲ್ ೆಸ್ಟಿವಲ್, ಬುಸಿನೆಸ್

ೇರಂ, ಅಪ್ಪು ನೈಟ್, ವಿಧ್ಯಾಭೂಷಣರ ಸಂಗೀತ, ನವೀನ್ ಸಜ್ಜು ಮತ್ತು ತಂಡದವರಿಂದ ಜಾನಪದ ಗೀತೆ, ಗುರುಕಿರಣ್ ನೈಟ್ ಹಾಗು ಕರ್ನಾಟಕದ ಕಲಾವಿದರಿಂದ ವಿವಿಧ ಜಾನಪದ ಕಾರ್ಯಕ್ರಮಗಳು ನಡೆಯಲಿವೆ.ಕರ್ನಾಟಕದಿಂದ ವಿಶೇಷ ಆಹ್ವಾನಿತರಾಗಿ ಆದಿಚುಂಚನಗಿರಿಯ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ವಚನಾನಂದ ಸ್ವಾಮೀಜಿ, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್‌ ತಂಗಡಗಿ, ಕೃಷಿ ಸಚಿವ ಚೆಲುವರಾಯಸ್ವಾಮಿ ಹಾಗೂ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮಾಧ್ಯಮ ಸಂಪರ್ಕ, ಮಂಜುನಾಥ್, 91-9980765001 ಇವರನ್ನು ಸಂಪರ್ಕಿಸಲು ಕೋರಿದ್ದಾರೆ.

RELATED ARTICLES

Latest News