Friday, October 18, 2024
Homeರಾಜ್ಯ14 ಲಕ್ಷ ಅಕ್ರಮ ಸಕ್ರಮ ಅರ್ಜಿಗಳು ಬಂದಿದ್ದು, ಶೇ.95ರಷ್ಟ ವಿಲೇವಾರಿ : ಸಚಿವ ಕೃಷ್ಣಭೈರೇಗೌಡ

14 ಲಕ್ಷ ಅಕ್ರಮ ಸಕ್ರಮ ಅರ್ಜಿಗಳು ಬಂದಿದ್ದು, ಶೇ.95ರಷ್ಟ ವಿಲೇವಾರಿ : ಸಚಿವ ಕೃಷ್ಣಭೈರೇಗೌಡ

ಬೆಂಗಳೂರು,ಜು.22- ಅಕ್ರಮ ಸಕ್ರಮ ಯೋಜನೆಯ 94 ಸಿ ಮತ್ತು 94 ಸಿಸಿ ಅಡಿ 14 ಲಕ್ಷ ಅರ್ಜಿಗಳು ಬಂದಿದ್ದು, ಶೇ.95ರಷ್ಟನ್ನು ವಿಲೇವಾರಿ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.
ವಿಧಾನಸಭೆಯ ಪರಶ್ನೋತ್ತರದ ಅವಧಿಯಲ್ಲಿ ಅಗರಿ ಬೊಮ್ಮನಹಳ್ಳಿಯ ಶಾಸಕ ನೇಮಿರಾಜ ನಾಯಕ್ ತಮ್ಮ ಕ್ಷೇತ್ರದಲ್ಲಿರುವ ಸರ್ಕಾರಿ ಜಮೀನುಗಳ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ.

ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ ನೀಡಬೇಕೆಂದು ಒತ್ತಾಯಿಸಿದಾಗ ಉತ್ತರಿಸಿದ ಸಚಿವರು, 2016ರಲ್ಲಿ ಸಿದ್ದರಾಮಯ್ಯನವರ ಸರ್ಕಾರ ಎರಡು ಬಾರಿ, ಹಿಂದಿನ ಬಿಜೆಪಿ ಸರ್ಕಾರ ಸೇರಿ 2023ರವರೆಗೂ ಏಳೆಂಟು ವರ್ಷಗಳ ಕಾಲ ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.
ಅಗರಿಬೊಮ್ಮನಹಳ್ಳಿಯಲ್ಲಿ 94 ಸಿ ಎರಡು, 94 ಸಿಸಿ ಅಡಿ 50ಕ್ಕೂ ಹೆಚ್ಚು ಅರ್ಜಿಗಳು ಬಾಕಿ ಉಳಿದಿವೆ. ಅರ್ಜಿ ಸಲ್ಲಿಸಿದ್ದರೆ ಮಾತ್ರ ಬಾಕಿ ಎಂದು ಪರಿಗಣಿಸಲಾಗುವುದು ಎಂದರು.

ಶಾಸಕರು ಪದೇ ಪದೇ ಮತ್ತೆ ಅರ್ಜಿಗಳನ್ನು ಆಹ್ವಾನಿಸುವಂತೆ ಒತ್ತಾಯಿಸಿದಾಗ ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು, ಸರ್ಕಾರಿ ಜಾಗವನ್ನು ಬಡವರಿಂದ ಒತ್ತುವರಿ ಮಾಡಿಕೊಂಡು ಅದರಿಂದ ಲಾಭ ಮಾಡಿಕೊಳ್ಳಲು ರಿಯಲ್ ಎಸ್ಟೇಟ್ ವ್ಯವಹಾರದವರು ಲಾಭ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಎಲ್ಲದಕ್ಕೂ ಅಧಿವೇಶನದಲ್ಲೇ ಉತ್ತರ ನೀಡಲಾಗುವುದಿಲ್ಲ ಎಂದು ತಿಳಿ ಹೇಳಿದರು.

ಸಚಿವ ಕೃಷ್ಣಭೈರೇಗೌಡ ಅಗರಿಬೊಮ್ಮನಹಳ್ಳಿಯಲ್ಲಿ 70 ಸಾವಿರಕ್ಕೂ ಹೆಚ್ಚು ಎಕರೆ ಸರ್ಕಾರಿ ಭೂಮಿ ಇತ್ತು ಎಂದು ಶಾಸಕರು ಹೇಳುತ್ತಿದ್ದಾರೆ. ಆದರೆ ಹಂಚಿಕೆ ಮಾಡಿ ಈಗ ಉಳಿದಿರುವುದು 38 ಸಾವಿರ ಮಾತ್ರ. ರಾಜ್ಯ ಸರ್ಕಾರ, ಸರ್ಕಾರಿ ಜಮೀನುಗಳನ್ನು ಗುರುತಿಸಿ, ನಿಗಾವಹಿಸಿ ಸಂರಕ್ಷಿಸಲು ಆನ್‍ಲೈನ್ ಆಪ್ ವ್ಯವಸ್ಥೆ ಮಾಡಿದೆ. ಅದರ ಅನುಸಾರ 14.5 ಲಕ್ಷ ಜಾಗದಲ್ಲಿ ಸರ್ಕಾರಿ ಭೂಮಿ ಗುರುತಿಸಲಾಗಿದೆ. ಅವುಗಳಲ್ಲಿ ಲ್ಯಾಂಡ್ ಬೀಟ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಆಪ್‍ನಲ್ಲಿ ಭೂಮಿಯ ಸರ್ವೇ ನಂಬರ್ ಮತ್ತು ಆಕಾರ್ ಹಾಗೂ ನಕ್ಷೆಯ ವಿರಗಳಿರುತ್ತವೆ.

ಕಂದಾಯ ಅಧಿಕಾರಿಗಳು ನಕ್ಷೆ ಆಧರಿಸಿ ಸರ್ಕಾರಿ ಭೂಮಿಯಲ್ಲಿ ನಡೆದು, ಒತ್ತುವರಿಯಾಗಿದೆ ಎಂದು ಗುರುತಿಸಿ ತಹಸೀಲ್ದಾರ್‍ಗೆ ವರದಿ ಮಾಡಬೇಕು. ಒತ್ತುವರಿಯಾಗಿದ್ದರೆ ಅದನ್ನು ತಕ್ಷಣವೇ ತೆರವು ಮಾಡಿ ಬೇಲಿ ಹಾಕಿ ಸಂರಕ್ಷಿಸಬೇಕು ಎಂದು ಸೂಚಿಸಿರುವುದಾಗಿ ತಿಳಿಸಿದರು. ಸ್ಮಶಾನ ಸೇರಿದಂತೆ ಇತರ ಭೂಮಿಯನ್ನು ಸಂರಕ್ಷಿಸುವ ಉಸ್ತುವಾರಿಯನ್ನು ಸರ್ಕಾರವೇ ನಿಗಾವಹಿಸುತ್ತಿದೆ ಎಂದು ಹೇಳಿದರು.

RELATED ARTICLES

Latest News