ಬೆಂಗಳೂರು,ಮೇ.24- ಎಣ್ಣೆ ಪ್ರಿಯರಿಗೆ ಬ್ಯಾಡ್ ನ್ಯೂಸ್! ಜೂ.1 ರಿಂದ 6ರವರೆಗೆ ನಗರದಲ್ಲಿ ಮದ್ಯ ಸಿಗೋದಿಲ್ಲ. ಇದೆನಪ್ಪಾ ಅರು ದಿನ ಮದ್ಯ ಏಕೆ ಸಿಗೊಲ್ಲ ಅಂತಾ ಯೋಚನೆ ಮಾಡ್ತಿದ್ದಿರಾ ಅದಕ್ಕೆ ಲೋಕಸಭಾ ಚುನಾವಣಾ ಫಲಿತಾಂಶ ಹಾಗೂ ಎಂಎಲ್‌ಸಿ ಚುನಾವಣೆ ನಡೆಯುತ್ತಿರುವುದೆ ಕಾರಣವಾಗಿದೆ.
ಎಂಎಲ್ ಸಿ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿರುವುದರಿಂದ ಜೂ.5 ಹೊರತುಪಡಿಸಿ ಜೂ.1 ರಿಂದ 6ರವರೆಗೆ ನಗರದಲ್ಲಿರುವ ಮದ್ಯದಂಗಡಿಗಳು ಕ್ಲೋಸ್ ಆಗಿರುತ್ತವೆ.ಜೂನ್ 3 ರಂದು ಪದವೀಧರ ಕ್ಷೇತ್ರದ ಮತದಾನದ ಹಿನ್ನೆಲೆಯಲ್ಲಿ ಜೂನ್ 1 ರ ಮಧ್ಯಾಹ್ನ 4 ಗಂಟೆಯಿಂದ ಜೂನ್ 3 ರ ವರೆಗೆ ನಗರದಲ್ಲಿರುವ ಎಲ್ಲಾ ಮದ್ಯದಂಗಡಿಗಳನ್ನು ಕ್ಲೋಸ್ ಮಾಡುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಅದೇ ರೀತಿ ಜೂನ್ 4 ರಂದು ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆಯುವುದರಿಂದ ಅಂದು ಸಹ ಇಡೀ ರಾಜ್ಯದಲ್ಲಿ ಎಲ್ಲ ಮಾದರಿಯ ಬಾರ್ ಅಂಡ್ ರೆಸ್ಟೋರೆಂಟ್ ವೈನ್‌ಸ್ಟೋರ್‌ಗಳನ್ನು ಬಂದ್ ಮಾಡಲಾಗುತ್ತಿದೆ. ಐದರಂದು ಮಾತ್ರ ಎಣ್ಣೆ ಅಂಗಡಿ ಓಪನ್ ಆಗಿರುತ್ತದೆ ಮತ್ತೆ ಜೂನ್ 6 ರಂದು ಎಂಎಲ್‌ಸಿ ಚುನಾವಣೆಯ ಮತ ಎಣಿಕೆ ಇರೋದಿಂದ ಅಂದು ಸಹ ಮದ್ಯದಂಗಡಿಗಳನ್ನು ಬಂದ್ ಮಾಡಲಾಗುತ್ತಿದೆ.
ಜೂನ್ ಮೊದಲ ವಾರದ ಮೊದಲ ಆರು ದಿನದಲ್ಲಿ ಜೂ.5ರಂದು ಹೊರತುಪಡಿಸಿದರೆ ಉಳಿದ ದಿನಗಳಲ್ಲಿ ಎಣ್ಣೆ ಸಿಗುವುದಿಲ್ಲ ಹೀಗಾಗಿ ಈಗಲೇ ಸ್ಟಾಕ್ ಮಾಡಿಕೊಳ್ಳಿ ಇಲ್ಲದಿದ್ದರೆ ಅಂದು ನಿಮಗ್ ಡ್ರೈ ಡೇ ಆಗಿರಲಿದೆ ಇರಲಿ ಎಚ್ಚರ.