ಹೈದರಾಬಾದ್, ಜ. 7- ತೆಲುಗು ಚಿತ್ರರಂಗದ ಖ್ಯಾತ ಚಿತ್ರನಟ ಅಲ್ಲು ಅರ್ಜುನ್ ಅವರು ಪುಷ್ಪ 2 ಚಿತ್ರ ಪ್ರದರ್ಶನದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಬಾಲಕನನ್ನು ಭೇಟಿಯಾಗಿ ಯೋಗ ಕ್ಷೇಮ ವಿಚಾರಿಸಿದ್ದಾರೆ.
ಡಿ. 4 ರಂದು ಪುಷ್ಪ 2 ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ತೀವ್ರವಾಗಿ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ಒಂಬತ್ತು ವರ್ಷದ ಶ್ರೀತೇಜ್ ಅವರನ್ನು ನಟ ಅಲ್ಲು ಅರ್ಜುನ್ ಇಂದು ಭೇಟಿ ಮಾಡಿದರು.
ಶ್ರೀ ತೇಜ್ ಅವರ ತಾಯಿ ರೇವತಿ ಕಾಲ್ತುಳಿತದಲ್ಲಿ ಸಾವನ್ನಪ್ಪಿದರು. ಬಾಲಕನ ತಂದೆ ಬಾಸ್ಕರ್ ಅವರಿಗೆ ಸಾಂತ್ವನ ಹೇಳಿದ ಅಲ್ಲು ಅರ್ಜುನ್ ಅವರು ಕುಟುಂಬಕ್ಕೆ ಬೆಂಬಲ ನೀಡುವ ಭರವಸೆ ನೀಡಿದರು.
ಪುಷ್ಪಾ 2 ಕಾಲ್ತುಳಿತ ಪ್ರಕರಣದಲ್ಲಿ ನಟನಿಗೆ ನಿಯಮಿತ ಜಾಮೀನು ದೊರೆತ ನಂತರ ಈ ಭೇಟಿ ಬಂದಿದೆ. ಪುಷ್ಪಾ 2 ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಡಿಸೆಂಬರ್ 13 ರಂದು ಬಂಧಿಸಲಾಗಿತ್ತು.