ಬೆಂಗಳೂರು: ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ (ಎಎಂ/ಎನ್ಎಸ್ ಇಂಡಿಯಾ) ಇಂದು ಕರ್ನಾಟಕದಲ್ಲಿ ತನ್ನ ಪ್ರೀಮಿಯಂ ಬಣ್ಣ-ಲೇಪಿತ ಉಕ್ಕಿನ ಪೋರ್ಟ್‌ಫೋಲಿಯೊ ಆಪ್ಟಿಗಲ್® ನಲ್ಲಿ ಎರಡು ವಿಶ್ವ ದರ್ಜೆಯ, ಉನ್ನತ-ಕಾರ್ಯಕ್ಷಮತೆಯ ಉತ್ಪನ್ನಗಳಾದ ಆಪ್ಟಿಗಲ್® ಪ್ರೈಮ್ ಮತ್ತು ಆಪ್ಟಿಗಲ್® ಪಿನ್ನಾಕಲ್ ಗಳು ಮಾರುಕಟ್ಟೆಗೆ ಪ್ರವೇಶಿಸಿವೆ.
ಕರ್ನಾಟಕದ ಭೌಗೋಳಿಕತೆ ವಿಶಿಷ್ಟವಾಗಿದೆ. ಮಂಗಳೂರಿನಂತಹ ತೇವಾಂಶ ಹೆಚ್ಚಿರುವ ಕರಾವಳಿ ಪ್ರದೇಶಗಳಿವೆ ಬೆಂಗಳೂರು ಮತ್ತು ಬಳ್ಳಾರಿಯಂತಹ ಕೈಗಾರಿಕಾ ಶಕ್ತಿ ಕೇಂದ್ರಗಳಿವೆ. ಇಲ್ಲಿನ ಹವಾಮಾನ ಗುಣಗಳಿಂದ ಮೂಲಸೌಕರ್ಯಕ್ಕೆ ಬೇಗ ತುಕ್ಕು ಹಿಡಿಯುತ್ತದೆ. ಹಾಗಾಗಿ ಇಲ್ಲಿ ಪರಿಸರದ ಕಾಠಿಣ್ಯವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾದ C4 ಮಟ್ಟದ ಸುಧಾರಿತ ಉಕ್ಕಿನ ಪರಿಹಾರಗಳಿಗೆ ಬಹಳ ಬೇಡಿಕೆ ಇದೆ. ಕರ್ನಾಟಕ ರಾಜ್ಯ: ವಿಮಾನ ನಿಲ್ದಾಣಗಳು, ಬಂದರುಗಳು ಮತ್ತು ಲಾಜಿಸ್ಟಿಕ್ಸ್ ಪಾರ್ಕ್‌ಗಳಲ್ಲಿ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸುತ್ತಿರುವುದರಿಂದ; ದೀರ್ಘಾವಧಿ ಕಾರ್ಯಕ್ಷಮತೆ ಮತ್ತು ಕಡಿಮೆ ನಿರ್ವಹಣಾ ವೆಚ್ಚ ಸಾಧಿಸಲು ಬಾಳಿಕೆ ಬರುವ, ತುಕ್ಕು-ನಿರೋಧಕ ನಿರ್ಮಾಣ ಸಾಮಗ್ರಿಗಳ ಬಳಕೆ ಅತ್ಯಗತ್ಯ.
ಇದಕ್ಕೆ ಪರಿಹಾರ ಸೃಷ್ಟಿಸಿರುವ ಎಎಂ/ಎನ್ಎಸ್ ಇಂಡಿಯಾ, ಕರ್ನಾಟಕದಲ್ಲಿ ಆಪ್ಟಿಗಲ್® ಪ್ರೈಮ್ ಮತ್ತು ಪಿನ್ನಾಕಲ್ ಅನ್ನು ಪ್ರಾರಂಭಿಸಿದೆ. ಇದು, ಬಿಲ್ಡರ್‌ಗಳು ಮತ್ತು ಪ್ರಾಜೆಕ್ಟ್ ಮಾಲೀಕರಿಗೆ ಹೊಸ ಪರಿಹಾರಗಳನ್ನು ನೀಡುತ್ತದೆ. ಜೊತೆಗೆ, ಕಂಪನಿಯು ಹಿಂದೆ ದೇಶೀಯ ತಯಾರಕರು ತಯಾರಿಸದಿದ್ದ ವಿಶೇಷ ಉಕ್ಕಿನ ಅನ್ವಯಿಕೆಗಳ ಹೊಸ ವಿಭಾಗವನ್ನು ಪ್ರವರ್ತಿಸುತ್ತಿದೆ. ಈ ಉನ್ನತ ಕಾರ್ಯಕ್ಷಮತೆಯ ವಿಭಾಗದಲ್ಲಿ ಭಾರತ ಏಕೈಕ ಉತ್ಪಾದಕ ಎಂಬುದು ಹೆಮ್ಮೆಯ ಸಂಗತಿ.
ಮಾನ್ಯ ಪ್ರಧಾನ ಮಂತ್ರಿಗಳ ‘ವಿಕಸಿತ ಭಾರತ’ ಯೋಜನೆ ಅಡಿಯಲ್ಲಿ ಮೂಲಸೌಕರ್ಯಗಳ ತ್ವರಿತ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಅದಕ್ಕೆ ಈ ಪ್ರಯತ್ನಗಳು ಪೂರಕವಾಗಿವೆ. ಎಎಂ/ಎನ್ಎಸ್ ಇಂಡಿಯಾ ದೇಶದಲ್ಲಿ, ವಿಶೇಷವಾಗಿ ದಕ್ಷಿಣ ಪ್ರದೇಶದಲ್ಲಿ ಬಣ್ಣ-ಲೇಪಿತ ಉಕ್ಕಿನ ಕ್ಷೇತ್ರದಲ್ಲಿ ಪ್ರಮುಖ ಪಾಲನ್ನು ಪಡೆಯುವ ಗುರಿಯನ್ನು ಹೊಂದಿದೆ. ದಕ್ಷಿಣ ಭಾರತ ಗುಣಮಟ್ಟ-ಪ್ರಜ್ಞೆಯ ಮಾರುಕಟ್ಟೆಯಾಗಿದ್ದು, ಸರಿಸುಮಾರು 3.4 ಮಿಲಿಯನ್ ಟನ್‌ಗಳಷ್ಟಿರುವ ರಾಷ್ಟ್ರೀಯ ಬಣ್ಣ-ಲೇಪಿತ ಉಕ್ಕಿನ ಮಾರುಕಟ್ಟೆಯಲ್ಲಿ ಅಂದಾಜು 0.6 ಮಿಲಿಯನ್ ಟನ್‌ಗಳ ಪಾಲನ್ನು ಹೊಂದಿದೆ.
15 ವರ್ಷಗಳ ಗ್ಯಾರಂಟಿ ನೀಡುವ ಆಪ್ಟಿಗಲ್® ಪ್ರೈಮ್, ನಗರಗಳಲ್ಲಿನ ಮತ್ತು ಸಾಧಾರಣ ತುಕ್ಕುಹಿಡಿಸುವಂತಹ ಪರಿಸರಕ್ಕಾಗಿ ವಿನ್ಯಾಸಗೊಂಡಿದೆ. ಸಿಲಿಕಾನ್ ಮಾರ್ಪಡಿಸಿದ ಪಾಲಿಯೆಸ್ಟರ್ (ಎಸ್.ಎಂ.ಪಿ.), ಸೂಪರ್ ಡ್ಯೂರಬಲ್ ಪಾಲಿಯೆಸ್ಟರ್ (ಎಸ್.ಡಿ.ಪಿ.), ಮತ್ತು ಪಾಲಿವಿನೈಲಿಡೀನ್ ಫ್ಲೋರೈಡ್ (ಪಿವಿಡಿಪಿ) ಗಳಂತಹ ಸುಧಾರಿತ ಫಿನಿಶ್ ಗಳು ಲಭ್ಯವಿದೆ; ಇದು ಛಾವಣಿ, ಹೊದಿಕೆ ಮತ್ತು ವ್ಯಾಪಕ ಶ್ರೇಣಿಯ ವಾಸ್ತುಶಿಲ್ಪದ ಬಳಕೆಗಳಿಗೆ ಸೂಕ್ತವಾಗಿದೆ.
ಆಪ್ಟಿಗಲ್® ಪಿನ್ನಾಕಲ್ ನ ಉನ್ನತ-ಶ್ರೇಣಿಯ ರೂಪಾಂತರವನ್ನು ಕರಾವಳಿ ಮತ್ತು ಭಾರೀ ಕೈಗಾರಿಕಾ ಪ್ರದೇಶಗಳಲ್ಲಿ ಕಂಡುಬರುವ ಹೆಚ್ಚಿನ ತುಕ್ಕುಹಿಡಿಸುವ C4 ಪರಿಸರಗಳಿಗೆಂದೇ ವಿನ್ಯಾಸಗೊಳಿಸಲಾಗಿದೆ. 25 ವರ್ಷಗಳ ಗ್ಯಾರಂಟಿ ಇರುವ ಇದು ತೇವಾಂಶ ಯುವಿ ವಿಕಿರಣ ಮತ್ತು ತೀವ್ರ ತಾಪಮಾನಗಳಿಗೆ ಉತ್ತಮ ಪ್ರತಿರೋಧವನ್ನು ಒದಗಿಸುವ ದೃಢವಾದ ಪಿಯು/ಪಿಎ ಲೇಪನಗಳನ್ನು ಹೊಂದಿದ್ದು ವಿಮಾನ ನಿಲ್ದಾಣಗಳು, ಗೋದಾಮುಗಳು, ಬಂದರುಗಳು ಮತ್ತು ಸಮುದ್ರ-ಸಂಬಂಧಿ ಮೂಲಸೌಕರ್ಯಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ.