ನವದೆಹಲಿ, ಅ. 7 ಪಿಟಿಐ)- ಛತ್ತಿಸ್‌ಗಢದ ಅರಣ್ಯದಲ್ಲಿ 31 ನಕ್ಸಲರನ್ನು ಹತ್ಯೆಗೈದ ಪ್ರಕರಣದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಕ್ಸಲ್ ಪೀಡಿತ ರಾಜ್ಯಗಳ ಮುಖ್ಯಮಂತ್ರಿ ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ.
ಛತ್ತೀಸ್‌ಗಢ, ಒಡಿಶಾ, ತೆಲಂಗಾಣ, ಮಹಾರಾಷ್ಟ್ರ, ಜಾರ್ಖಂಡ್, ಬಿಹಾರ, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶಗಳು ನಕ್ಸಲ್‌ಪೀಡಿತ ಪ್ರದೇಶಗಳಾಗಿವೆ.
ನಕ್ಸಲ್-ವಿರೋಧಿ ಕಾರ್ಯಾಚರಣೆಗಳು ಮತ್ತು ಪೀಡಿತ ಪ್ರದೇಶಗಳಲ್ಲಿ ಕೈಗೊಂಡ ಅಭಿವದ್ಧಿ ಉಪಕ್ರಮಗಳ ಕುರಿತು ಚರ್ಚಿಸಿದ ನಿರ್ಣಾಯಕ ಸಭೆಯು ಇತ್ತೀಚಿನ ದಿನಗಳಲ್ಲಿ ಅವರ ವಿರುದ್ಧದ ಅತ್ಯಂತ ಯಶಸ್ವಿ ಕಾರ್ಯಾಚರಣೆಗಳಲ್ಲಿ ಒಂದಾದ ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳಿಂದ ಕನಿಷ್ಠ 31 ನಕ್ಸಲೀಯರನ್ನು ಹೊಡೆದುರುಳಿಸಿದ ಕೆಲವು ದಿನಗಳ ನಂತರ ಬಂದಿದೆ.
ಮೋದಿ ಸರ್ಕಾರದ ಕಾರ್ಯತಂತ್ರದಿಂದಾಗಿ ಎಡಪಂಥೀಯ ಉಗ್ರಗಾಮಿ ಹಿಂಸಾಚಾರವು 72 ಪ್ರತಿಶತದಷ್ಟು ಕಡಿಮೆಯಾಗಿದೆ, ಆದರೆ 2010 ಕ್ಕೆ ಹೋಲಿಸಿದರೆ 2023 ರಲ್ಲಿ ಸಾವಿನ ಸಂಖ್ಯೆ 86 ಪ್ರತಿಶತದಷ್ಟು ಇಳಿಕೆಯಾಗಿದೆ ಮತ್ತು ನಕ್ಸಲರು ಈಗ ತಮ ಕೊನೆಯ ಯುದ್ಧದಲ್ಲಿ ಹೋರಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್‌ಡಬ್ಲ್ಯೂಇ-ಪೀಡಿತ ರಾಜ್ಯಗಳಿಗೆ ಅಭಿವದ್ಧಿ ಬೆಂಬಲವನ್ನು ನೀಡುವಲ್ಲಿ ನಿಕಟವಾಗಿ ತೊಡಗಿಸಿಕೊಂಡಿರುವ ಕೇಂದ್ರ ಮಂತ್ರಿಗಳು ಕೇಂದ್ರ, ರಾಜ್ಯಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಹಿರಿಯ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತತ್ವದಲ್ಲಿ ಮತ್ತು ಗಹ ಸಚಿವರ ಮಾರ್ಗದರ್ಶನದಲ್ಲಿ ಕೇಂದ್ರ ಸರ್ಕಾರವು 2026 ರ ಮಾರ್ಚ್ ವೇಳೆಗೆ ನಕ್ಸಲ್ ಬೆದರಿಕೆಯನ್ನು ಸಂಪೂರ್ಣವಾಗಿ ಬೇರುಸಹಿತ ಕಿತ್ತೊಗೆಯಲು ಬದ್ಧವಾಗಿದೆ ಎಂದು ಗಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ನಕ್ಸಲ್ ಬಾಧಿತ ರಾಜ್ಯ ಸರ್ಕಾರಗಳಿಗೆ ಬೆದರಿಕೆಯ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರವು ಸಾಧ್ಯವಿರುವ ಎಲ್ಲ ನೆರವು ನೀಡುತ್ತಿದೆ. ಶಾ ಕೊನೆಯದಾಗಿ ಅಕ್ಟೋಬರ್ 6, 2023 ರಂದು ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.