ನವದೆಹಲಿ, ಫೆ. 14 (ಪಿಟಿಐ) ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ 2019 ರಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್‌ಪಿಎಫ್ ಸಿಬ್ಬಂದಿಗೆ ಗೌರವ ಸಲ್ಲಿಸಿದರು.
ನರೇಂದ್ರ ಮೋದಿ ಸರ್ಕಾರವು ಶೂನ್ಯ -ಸಹಿಷ್ಣುತೆ ನೀತಿಯೊಂದಿಗೆ ಅಭಿಯಾನವನ್ನು ನಡೆಸುವ ಮೂಲಕ ಭಯೋತ್ಪಾದಕರನ್ನು ಸಂಪೂರ್ಣವಾಗಿ ನಾಶಮಾಡಲು ದೃಢನಿಶ್ಚಯ ಹೊಂದಿದೆ ಎಂದು ಶಾ ಹೇಳಿದರು.
ಕೃತಜ್ಞರಾಗಿರುವ ರಾಷ್ಟ್ರದ ಪರವಾಗಿ, 2019 ರ ಈ ದಿನದಂದು ಪುಲ್ವಾಮಾದಲ್ಲಿ ನಡೆದ ಹೇಡಿತನದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ನಾನು ನನ್ನ ಹೃತ್ತೂರ್ವಕ ಗೌರವವನ್ನು ಸಲ್ಲಿಸುತ್ತೇನೆ ಎಂದು ಅವರು ಎಕ್ಸ್ ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.
ಭಯೋತ್ಪಾದನೆಯು ಇಡೀ ಮಾನವೀಯತೆಯ ದೊಡ್ಡ ಶತ್ರುವಾಗಿದೆ ಮತ್ತು ಇಡೀ ಜಗತ್ತು ಅದರ ವಿರುದ್ಧ ಒಗ್ಗೂಡಿದೆ ಎಂದು ಗೃಹ ಸಚಿವರು ಹೇಳಿದರು.
ಸರ್ಜಿಕಲ್ ಸ್ಟೈಕ್ ಮೂಲಕವಾಗಲಿ ಅಥವಾ ವಾಯುದಾಳಿಯ ಮೂಲಕವಾಗಲಿ, ಮೋದಿ ಸರ್ಕಾರವು ಅವರ ವಿರುದ್ದ ಶೂನ್ಯ-ಸಹಿಷ್ಣುತೆ ನೀತಿಯೊಂದಿಗೆ ಅಭಿಯಾನವನ್ನು ನಡೆಸುವ ಮೂಲಕ ಭಯೋತ್ಪಾದಕರನ್ನು ಸಂಪೂರ್ಣವಾಗಿ ನಾಶಮಾಡಲು ದೃಢನಿಶ್ಚಯ ಹೊಂದಿದೆ ಎಂದು ಶಾ ಹೇಳಿದರು.
ಫೆಬ್ರವರಿ 14, 2019 ರಂದು ಪುಲ್ವಾಮಾದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಯನ್ನು ಸಾಗಿಸುತ್ತಿದ್ದ ಬಸ್ ಅನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ ದಾಳಿ ನಡೆಸಿ 40 ಯೋಧರನ್ನು ಕೊಂದಿತ್ತು.
ಕೆಲ ದಿನಗಳ ನಂತರ, ಭಾರತೀಯ ವಾಯುಪಡೆಯ ಫೈಟರ್ ಜೆಟ್‌ಗಳು ಪಾಕಿಸ್ತಾನದ ಒಳಭಾಗದಲ್ಲಿರುವ ಬಾಲಕೋಟ್‌ನಲ್ಲಿರುವ ಭಯೋತ್ಪಾದಕ ತರಬೇತಿ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿ ಹಲವು ಉಗ್ರರನ್ನು ಕೊಂದು ಹಾಕಿ ಸೇಡು ತೀರಿಸಿಕೊಂಡಿದ್ದವು,