Monday, September 8, 2025
Homeರಾಜ್ಯಮೆಸೇಜ್‌ ಓಪನ್‌ ಮಾಡಿ 21 ಲಕ್ಷ ರೂ. ಕಳೆದುಕೊಂಡ ವೃದ್ಧ..!

ಮೆಸೇಜ್‌ ಓಪನ್‌ ಮಾಡಿ 21 ಲಕ್ಷ ರೂ. ಕಳೆದುಕೊಂಡ ವೃದ್ಧ..!

An elderly man lost Rs 21 lakh by opening a message..!

ಮೈಸೂರು,ಸೆ.8- ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಹೆಚ್ಚಿಸುವುದಾಗಿ ಬಂದ ಮೆಸೇಜ್‌ ನಂಬಿದ ವೃದ್ಧರೊಬ್ಬರು 21 ಲಕ್ಷ ಕಳೆದುಕೊಂಡ ಘಟನೆ ನಗರದಲ್ಲಿ ನಡೆದಿದೆ. ಯಾದವಗಿರಿ ವಿವೇಕಾನಂದ ರಸ್ತೆಯ ಗೌಸ್‌‍ ಹಣ ಕಳೆದುಕೊಂಡ ವೃದ್ಧರು.

ಎರಡು ದಿನಗಳ ಹಿಂದೆ ಕ್ರೆಡಿಟ್‌ ಕಾರ್ಡ್‌ನ ಲಿಮಿಟ್‌ ಹೆಚ್ಚಿಸುವುದಾಗಿ ಗೌಸ್‌‍ ಅವರ ಮೊಬೈಲ್‌ಗೆ ಎಸ್‌‍ಎಂಎಸ್‌‍ ಬಂದಿದೆ. ಇದನ್ನು ನಂಬಿದ ಗೌಸ್‌‍ ತಮ ಇಮೇಲ್‌‍, ಕ್ರೆಡಿಟ್‌ ಕಾರ್ಡ್‌ ನಂಬರ್‌, ಜನ ದಿನಾಂಕದ ವಿವರಗಳನ್ನು ಒದಗಿಸಿದ್ದಾರೆ. ಅದೇ ಸಮಯದಲ್ಲಿ ಹೆಚ್‌ಡಿಎಫ್‌ಸಿ ಕ್ರೆಡಿಟ್‌ ಕಾರ್ಡ್‌ನಿಂದ 1,00,485 ರೂ. ಡ್ರಾ ಮಾಡಿದ್ದಾರೆ.

ತಕ್ಷಣವೇ ಹೆಚ್‌ಡಿಎಫ್‌ಸಿ ಬ್ಯಾಂಕ್‌ ಕಾರ್ಡ್‌ ಬ್ಲಾಕ್‌ ಮಾಡಿಸಿದ್ದಾರೆ. ಆದರೆ ಕಿಲಾಡಿಗಳು ಐಡಿಎಫ್‌ಸಿ ಬ್ಯಾಂಕ್‌ ಖಾತೆಯಲ್ಲಿದ್ದ 20 ಲಕ್ಷ ಹಣವನ್ನೂ ಸಹ ಡ್ರಾ ಮಾಡಿದ್ದಾರೆ.
ವಂಚನೆಗೊಳಗಾದ ವೃದ್ಧರು ಸೆನ್‌ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೈಸೂರಿನಲ್ಲಿ ಪದೇ ಪದೇ ಸೈಬರ್‌ ವಂಚನೆ ಪ್ರಕರಣಗಳು ನಡೆಯುತ್ತಲೇ ಇದ್ದು, ಸಾರ್ವಜನಿಕರು ಎಚ್ಚರಿಕೆಯಿಂದಿರುವಂತೆ ಪೊಲೀಸರು ಪದೇ ಪದೇ ಜಾಗೃತಿ ಮೂಡಿಸುತ್ತಿದ್ದಾರೆ.
ಆದರೂ ಸಹ ವಂಚಕರ ಜಾಲಕ್ಕೆ ಸಿಲುಕಿ ಅಮಾಯಕರು ಲಕ್ಷಗಟ್ಟಲೆ ಹಣ ಕಳೆದುಕೊಳ್ಳುತ್ತಿದ್ದಾರೆ. ತಮ ಮೊಬೈಲ್‌ಗಳಿಗೆ ಬರುವ ಯಾವುದೇ ಸಂದೇಶಗಳನ್ನು, ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಡಿ.

ಬ್ಯಾಂಕ್‌ನವರು ಯಾವುದೇ ಕಾರಣಕ್ಕೂ ಮೆಸೇಜ್‌ ಕಳುಹಿಸುವುದಿಲ್ಲ. ಒಂದು ವೇಳೆ ಮೆಸೇಜ್‌ ಬಂದರೂ ಕೂಡ ತಮ ಖಾತೆ ಹೊಂದಿರುವ ಬ್ಯಾಂಕ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳುವಂತೆ ಪೊಲೀಸರು ತಿಳಿಸಿದ್ದಾರೆ.

ವಿದ್ಯಾವಂತರೇ ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುತ್ತಿರುವುದು ವಿಪರ್ಯಾಸ. ಇನ್ನು ಮುಂದಾದರೂ ಜನರು ಯಾವುದೇ ಕಾರಣಕ್ಕೂ ಮೊಬೈಲ್‌ಗಳಲ್ಲಿ ಬರುವ ವಾಟ್ಸಾಪ್‌ ಲಿಂಕ್‌ಗಳು, ಮೆಸೇಜ್‌ಗಳನ್ನು ಓಪನ್‌ ಮಾಡಿ ಡೌನ್‌ಲೋಡ್‌ ಮಾಡಿಕೊಳ್ಳದಂತೆ ತಿಳಿಸಲಾಗಿದೆ.

RELATED ARTICLES

Latest News