ಬೇಲೂರು,ಅ.8- ಗಣತಿಗೆಂದು ಶಿಕ್ಷಕಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ನಾಯಿಯೊಂದು ಅಟ್ಟಾಡಿಸಿ ಕಚ್ಚಿದ್ದರಿಂದ ಬಿದ್ದು ಗಾಯಗೊಂಡಿರುವ ಘಟನೆ ತಾಲೂಕಿನ ಗೆಂಡೇಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಪಟ್ಟಣದಲ್ಲಿ ಮೂರು ದಿನಗಳ ಹಿಂದೆ ಮದ್ಯಾಹ್ನದ ಸಮಯದಲ್ಲಿ ಬೀದಿ ನಾಯಿ 6 ಜನರಿಗೆ ಕಚ್ಚಿ ಗಂಭಿರವಾಗಿ ಗಾಯಗೊಳಿಸಿದ್ದರಿಂದ ಎಲ್ಲ ಗಾಯಾಳುಗಳನ್ನು ಶಾಸಕ ಎಚ್.ಕೆ.ಸುರೇಶ್ ನೇತೃತ್ವದಲ್ಲಿ ಜಿಲ್ಲಾಸ್ಪತ್ರೆಗೆ ಕಳುಹಿಸಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.
ಆದರೆ ಅದೇ ದಿನ ತಾಲೂಕಿನ ಗೆಂಡೇಹಳ್ಳಿ ಹಾಗೂ ಬಸ್ಕಲ್ನಲ್ಲಿ ಗಣತಿ ಮುಗಿಸಿಕೊಂಡು ಹಳೇ ಗೆಂಡೇಹಳ್ಳಿ ಗ್ರಾಮದಲ್ಲಿ ಸಂಜೆ 4 ಗಂಟೆ ಸಮಯದಲ್ಲಿ ಗಣತಿಗೆಂದು ಹೋದ ಗೆಂಡೇಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯ ಶಿಕ್ಷಕಿ ಲುಬ್ನಾಎಂಬುವವರು ತಮದ್ವಿಚಕ್ರ ವಾಹನದಲ್ಲಿ ಹೋದಂತಹ ಸಂದರ್ಭ ನಾಯಿಯೊಂದು ಇವರನ್ನು ಅಟ್ಟಾಡಿಸಿ ಬಂದು ಕಚ್ಚಿದ್ದರಿಂದ ಶಿಕ್ಷಕಿ ದ್ವಿಚಕ್ರ ವಾಹನದಿಂದಕೆಳಕ್ಕೆ ಬಿದ್ದಿದರಿಂದ್ದ ಎಡಗೈ ಮೂಳೆ ಮುರಿದಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ಅವರನ್ನು ಕಳುಹಿಸಲಾಗಿದೆ. ವಿಷಯ ತಿಳಿದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್ ಮತ್ತುಇತರೆ ಪದಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಶಿಕ್ಷಕಿಯ ಆರೋಗ್ಯ ವಿಚಾರಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘದತಾಲೂಕುಅಧ್ಯಕ್ಷ ಮಂಜುನಾಥ್ ಮಾತನಾಡಿ, ಎರಡು ದಿನಗಳ ಹಿಂದಷ್ಟೆ ಪಟ್ಟಣದಲ್ಲಿ ಶಿಕ್ಷಕಿಯೊಬ್ಬರ ಮೇಲೆ ನಾಯಿಗಳು ದಾಳಿ ಮಾಡಿದ ಘಟನೆ ಇನ್ನೂ ಮಾಸಿಲ್ಲ. ಅಷ್ಟರಲ್ಲಾಗಲೇ ತಾಲೂಕಿನ ನಾಗೇನಹಳ್ಳಿಯಲ್ಲಿ ಲತಾ, ಮತ್ತು ಗೆಂಡೇಹಳ್ಳಿಯಲ್ಲಿ ಲುಬ್ನಾರ ಮೇಲೆ ನಾಯಿ ದಾಳಿ ಮಾಡಿವೆ. ಇದರಿಂದ ಇತರೆ ಶಿಕ್ಷಕರು ಮಾನಸಿಕವಾಗಿ ನೊಂದಿದ್ದಾರೆ.
ಜತೆಗೆ ಈಗಾಗಲೇ ಸರ್ಕಾರ ನಿಗದಿಪಡಿಸಿರುವ ಗಣತಿಯನ್ನು ಶೇ. 90 ರಷ್ಟು ಮುಗಿಸಿದ್ದು, ಉಳಿದಿರುವ ಕೆಲವೇ ಮನೆಗಳಿಗೆ ತೆರಳುವ ಸಂದರ್ಭ ಇಂತಹ ಘಟನೆ ನಡೆಯುತಿದ್ದು, ಒಂಟಿ ಮನೆಗಳಿಗೆ ತೆರಳುವ ಸಂದರ್ಭದಲ್ಲಿ ಶಿಕ್ಷಕರು ಎಚ್ಚರಿಕೆ ವಹಿಸಬೇಕು ಎಂದರು. ಸರ್ಕಾರಿ ನೌಕರರ ಸಂಘದ ಮಾಜಿ ನಿರ್ದೇಶಕ ಗಂಗಾಧರ್ ಇದ್ದರು.