ಪಾಟ್ನಾ,ಡಿ.15- ಶಾಲಾ ಶಿಕ್ಷಕನನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಸದ್ಯ ಅವಿನಾಶ್ ಹಾಗೂ ಗುಂಜನ ವಿವಾಹ ಒತ್ತಾಯ ಪೂರ್ವಕವಾಗಿ ನಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿವಾಹದ ಕಾರ್ಯಗಳಲ್ಲಿ ಅವಿನಾಶ್ ಭಾಗಿಯಾಗಲು ಸಂಪೂರ್ಣವಾಗಿ ನಿರಾಕರಿಸುತ್ತಿರುವ ದೃಶ್ಯ ಕಂಡುಬಂದಿದೆ.
ಶಿಕ್ಷಕ ಅವಿನಾಶ್ ತಮ ಪಾಡಿಗೆ ತಾವು ಕತಿಹಾರದಲ್ಲಿ ಶಾಲೆಯತ್ತ ಹೋಗುತ್ತಿದ್ದಾಗ ಎರಡು ಸ್ಕಾರ್ಪಿಯೋ ಕಾರುಗಳಲ್ಲಿ ಬಂದ 12 ಜನ ಮಂದಿ ಆತನನ್ನು ಎತ್ತಿ ಕಾರಿನೊಳಗೆ ನೂಕಿ. ಹುಡುಗಿಯ ಮನೆ ಕಡೆಗೆ ಕರೆದೊಯ್ದಿದ್ದಾರೆ.
ಅಲ್ಲಿ ಮದುಗೆ ಎಲ್ಲ ರೀತಿಯ ಏರ್ಪಾಡುಗಳು ಮಾಡಿಕೊಂಡಿದ್ದು, ಮಧುಮಗಳಾಗಿ ಗುಂಜನಾ ಎಂಬ ಯುವತಿಯನ್ನು ಸಿದ್ದಗೊಳಿಸಿದ್ದಾರೆ. ಇದನ್ನು ಕಂಡ ಅವಿನಾಶ್ ಮದುವೆಯ ಆಚರಣೆಗಳಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದ್ದಾನೆ. ಆದರೂ ಕೂಡ ಆತನನ್ನು ಒತ್ತಾಯದಿಂದ ಮದುವೆಯ ಎಲ್ಲಾ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿದೆ.
ಅಲ್ಲಿಂದ ಶಿಕ್ಷಕ ತಪ್ಪಿಸಿಕೊಂಡು ಓಡಿ ಹೋದರೂ ಬಿಡದೆ ವಾಪಸ್ ಗುಂಜನ ಮನೆಗೆ ಕರೆ ತಂದು ಮದುವೆ ಮಾಡಿಸಿದ್ದಾರೆ. ಅವಿನಾಶ್ ಹಾಗೂ ಗುಂಜನ ನಡುವೆ ಕಳೆದ ನಾಲ್ಕು ವರ್ಷಗಳಿಂದ ಪ್ರೇಮ ಪ್ರಣಯ ನಡೆಯುತ್ತಿದೆ. ಹೀಗಾಗಿ ಅವನಿಂದಲೇ ಅವನಿಗೆ ತಾಳಿ ಕಟ್ಟಿಸಲಾಗಿದೆ ಎಂದು ಹುಡುಗಿಯ ಕುಟುಂಬದವರು ಆರೋಪಿಸಿದ್ದಾರೆ. ಶಿಕ್ಷಕ ಮಾತ್ರ ಗುಂಜನ ಜೊತೆ ಪ್ರೇಮಪ್ರಯಣವೂ ಇಲ್ಲ ಎಂದು ಹೇಳುತ್ತಿದ್ದಾರೆ.
ಸದ್ಯ ಎರಡು ಕಡೆಯವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸದ್ಯ ಬಿಹಾರದಲ್ಲಿ ಒಂದು ಶಬ್ದ ಜೋರಾಗಿ ಓಡುತ್ತಿದೆ. ಅದು ಪಕಡ್ವಾ ವಿವಾಹ್ ಅಂದರೆ ಯುವಕರನ್ನು ಕಿಡ್ನಾಪ್ ಮಾಡಿ ಅವರಿಗೆ ಇಷ್ಟ ಇಲ್ಲದಿದ್ದರೂ ಕೂಡ ಹುಡುಗಿಯೊಂದಿಗೆ ಮದುವೆ ಮಾಡುವ ಕೆಲಸ. ಇದು 2024ರಲ್ಲಿ ಅತಿ ಹೆಚ್ಚು ಆಗುತ್ತಿದೆ. ಅದರಲ್ಲಿಯೂ ಶಾಲಾ ಶಿಕ್ಷಕರ ಮೇಲೆಯೇ ಇಂತಹ ಕಿಡ್ನಾಪ್‌ನಂತಹ ಘಟನೆಗಳು ನಡೆಯುತ್ತಿವೆ. 2024ರಲ್ಲಿ ಇದರ ಸಂಖ್ಯೆ ಹೆಚ್ಚಾಗುತ್ತಿದೆ.