Thursday, February 27, 2025
Homeರಾಷ್ಟ್ರೀಯ | Nationalಸೇನಾ ವಾಹನದ ಫೈರಿಂಗ್ ಮಾಡಿದ ಉಗ್ರ ಬೇಟೆ ಆರಂಭ, ಸ್ನಿಫರ್ ನಾಯಿಗಳ ಬಳಕೆ

ಸೇನಾ ವಾಹನದ ಫೈರಿಂಗ್ ಮಾಡಿದ ಉಗ್ರ ಬೇಟೆ ಆರಂಭ, ಸ್ನಿಫರ್ ನಾಯಿಗಳ ಬಳಕೆ

Anti-terrorist operation near LoC in J-K's Rajouri after firing on Army vehicle

ಜಮ್ಮು, ಫೆ.27-ಜಮ್ಮು ಮತ್ತು ಕಾಶ್ಮೀರದ ರಾಜರಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಉಗ್ರ ಬೇಟಿ ಆರಂಭಿಸಿವೆ. ಸುಂದರ್‌ಬಾನಿ ಸೆಕ್ಟರ್‌ನ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ’ ಸೇನಾ ವಾಹನದ ಮೇಲೆ ಗುಂಡು ಹಾರಿಸಿದ ಭಯೋತ್ಪಾದಕರನ್ನು ಪತ್ತೆ ಹಚ್ಚಲು ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಥುವಾ ಜಿಲ್ಲೆಯ ಹಿರಾನಗರ್ ಸೆಕ್ಟರ್‌ ಅಂತರರಾಷ್ಟ್ರೀಯ ಗಡಿಯ ಬಳಿಯ ದಯಾಲಚಕ್‌ನಲ್ಲಿ ಭದ್ರತಾ ಪಡೆಗಳು ಅನುಮಾನಾಸ್ಪದ ಆವರ್ತನ ವೈರ್‌ಲೈಸ್ ಸೆಟ್ ಅನ್ನು ತಡೆದ ನಂತರ ಹೊಸ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಂದರ್ಬಾನಿ ಸೆಕ್ಟರ್‌ನ ಫಾಲ್ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಅಡಗಿದ್ದ ಶಂಕಿತ ಭಯೋತ್ಪಾದಕರಿಂದ ಸೇನಾ ವಾಹನದ ಮೇಲೆ ನಿನ್ನೆ ಗುಂಡಿನ ದಾಳಿ ನಡೆಸಲಾಗಿತ್ತು.
ಸೇನೆ ಮತ್ತು ಪೊಲೀಸರು ಭಾರಿ ಶೋಧ ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ.

ಶೋಧ ಕಾರ್ಯಾಚರಣೆ ಮುಂದುವರೆದಿದೆ ಮತ್ತು ಅಡಗಿರುವ ಭಯೋತ್ಪಾದಕರನ್ನು ಹೊಡೆದುರುಳಿಸುವ ಕಾರ್ಯಚರಣೆಯನ್ನು ಇಂದು ಬೆಳಿಗ್ಗೆ ಹೊಸ ಪ್ರದೇಶಗಳಿಗೆ ವಿಸ್ತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಪಡೆಗಳು ಇತ್ತೀಚಿನ ತಂತ್ರಜ್ಞಾನ, ಡೋನ್‌ಗಳು ಮತ್ತು ಸಿಫರ್ ನಾಯಿಗಳನ್ನು ಬೇಟೆಯಾಡಲು ಬಳಸುತ್ತಿವೆ ಎಂದು ಅವರು ಹೇಳಿದರು.

RELATED ARTICLES

Latest News