Sunday, October 6, 2024
Homeಅಂತಾರಾಷ್ಟ್ರೀಯ | Internationalಜೈಶಂಕರ್‌-ಬ್ಲಿಂಕೆನ್‌ ಮಹತ್ವದ ಮಾತುಕತೆ

ಜೈಶಂಕರ್‌-ಬ್ಲಿಂಕೆನ್‌ ಮಹತ್ವದ ಮಾತುಕತೆ

Antony Blinken meets S Jaishankar, says India, US working to address ‘global challenges’

ವಾಷಿಂಗ್ಟನ್‌,ಆ. 2 (ಪಿಟಿಐ) ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್‌ ಅವರನ್ನು ವಾಷಿಂಗ್ಟನ್‌ ಡಿಸಿಯಲ್ಲಿ ಭೇಟಿಯಾದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌‍ ಜೈಶಂಕರ್‌ ಅವರು ಪ್ರಾದೇಶಿಕ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡುವ ಬಗ್ಗೆ ಚರ್ಚಿಸಿದರು.

ಉಭಯ ರಾಷ್ಟ್ರಗಳು ಒಟ್ಟಾಗಿ, ಪ್ರಾದೇಶಿಕ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸಲು ಯುಎಸ್‌‍ ಮತ್ತು ಭಾರತವು ಕಾರ್ಯನಿರ್ವಹಿಸುತ್ತಿವೆ. ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್‌‍ ಜೈಶಂಕರ್‌ ಮತ್ತು ನಾನು ಹವಾಮಾನ ಬಿಕ್ಕಟ್ಟು ಮತ್ತು ಪ್ರಾದೇಶಿಕ ಭದ್ರತೆ ಮತ್ತು ಸಮದ್ಧಿಯನ್ನು ಉತ್ತೇಜಿಸುವ ಮಾರ್ಗಗಳ ಕುರಿತು ನಮ ನಿರಂತರ ಸಹಕಾರವನ್ನು ಚರ್ಚಿಸಲು ಭೇಟಿಯಾದೆವು ಎಂದು ಬ್ಲಿಂಕೆನ್‌ ಹೇಳಿದ್ದಾರೆ.

ಏತನಧ್ಯೆ, ಜೈಶಂಕರ್‌ ಅವರು ವಾಷಿಂಗ್ಟನ್‌ ಡಿಸಿಯಲ್ಲಿ ಬ್ಲಿಂಕನ್‌ ಅವರೊಂದಿಗೆ ಮಾತುಕತೆ ನಡೆಸಲು ಸಂತೋಷವಾಗಿದೆ. ನಾವು ಡೆಲವೇರ್‌ ದ್ವಿಪಕ್ಷೀಯ ಮತ್ತು ಕ್ಯುಎಡಿ ಸಭೆಗಳನ್ನು ಅನುಸರಿಸಿದ್ದೇವೆ. ನಮ ಚರ್ಚೆಗಳು ಆಳವಾದ ದ್ವಿಪಕ್ಷೀಯ ಸಹಕಾರ, ಪಶ್ಚಿಮ ಏಷ್ಯಾದ ಪರಿಸ್ಥಿತಿ, ಭಾರತೀಯ ಉಪಖಂಡದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಅವರೊಂದಿಗಿನ ದ್ವಿಪಕ್ಷೀಯ ಸಭೆಯನ್ನು ಉಲ್ಲೇಖಿಸಿ ಸಚಿವರು ಈ ಹೇಳಿಕೆ ನೀಡಿದ್ದಾರೆ.ಸೆಪ್ಟೆಂಬರ್‌ 21 ರಂದು ದ್ವಿಪಕ್ಷೀಯ ಸಭೆಗಾಗಿ ಅಮೆರಿಕ ಅಧ್ಯಕ್ಷರು ಮೋದಿಯನ್ನು ಡೆಲವೇರ್‌ ನಿವಾಸದಲ್ಲಿ ಆತಿಥ್ಯ ವಹಿಸಿದರು. ನಂತರ ಡೆಲವೇರ್‌ನ ವಿಲಿಂಗ್ಟನ್‌ನಲ್ಲಿ ನಡೆದ ಕ್ವಾಡ್‌ ನಾಯಕರ ಶಂಗಸಭೆಯಲ್ಲಿ ಆಸ್ಟ್ರೇಲಿಯಾ ಮತ್ತು ಜಪಾನ್‌ನ ನಾಯಕರು ಅವರೊಂದಿಗೂ ಮಾತುಕತೆ ನಡೆಸಿದ್ದರು.

ಯುಎಸ್‌‍ ಸ್ಟೇಟ್‌ ಡಿಪಾರ್ಟೆಂಟ್‌ ವಕ್ತಾರ ವ್ಯಾಥ್ಯೂ ಮಿಲ್ಲರ್‌ ಪ್ರಕಾರ, ಜೈಶಂಕರ್‌ ಮತ್ತು ಬ್ಲಿಂಕೆನ್‌ ಅವರು ದ್ವಿಪಕ್ಷೀಯ ಸಂಬಂಧಗಳನ್ನು ಗಾಢವಾಗಿಸಲು, ಪ್ರಾದೇಶಿಕ ಮತ್ತು ಜಾಗತಿಕ ಸವಾಲುಗಳ ಮೇಲೆ ನಿಕಟವಾಗಿ ಸಮನ್ವಯಗೊಳಿಸಲು ಮತ್ತು ನಿರ್ಣಾಯಕ ಮತ್ತು ಉದಯೋನುಖ ತಂತ್ರಜ್ಞಾನಗಳ ಮೇಲೆ ಸಹಕಾರವನ್ನು ಮುಂದುವರಿಸಲು ಯುನೈಟೆಡ್‌ ಸ್ಟೇಟ್ಸ್‌‍ ಮತ್ತು ಭಾರತದ ನಿರಂತರ ಬದ್ಧತೆಯನ್ನು ಚರ್ಚಿಸಿದ್ದಾರೆ.

RELATED ARTICLES

Latest News