Monday, December 23, 2024
Homeರಾಜ್ಯಅನ್ವರ್‌ ಮಾಣಿಪ್ಪಾಡಿ 150 ಕೋಟಿ ಆರೋಪ : ಸಿಬಿಐ ತನಿಖೆಗೆ ನೀಡುವುದಿಲ್ಲ ಎಂದ ಸಿಎಂ

ಅನ್ವರ್‌ ಮಾಣಿಪ್ಪಾಡಿ 150 ಕೋಟಿ ಆರೋಪ : ಸಿಬಿಐ ತನಿಖೆಗೆ ನೀಡುವುದಿಲ್ಲ ಎಂದ ಸಿಎಂ

Anwar Manippady's 150 crore allegation: CM says he will not hand over the investigation to CBI

ಬೆಳಗಾವಿ, ಡಿ.16- ಅನ್ವರ್‌ ಮಾಣಿಪಾಡಿ ಮಾಡಿರುವ ಆರೋಪ ಕುರಿತ ತನಿಖೆಯನ್ನು ಸಿಬಿಐಗೆ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಪಡಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಮಂಡಳಿ ಆಸ್ತಿ ಕಬಳಿಕೆ ಕುರಿತಂತೆ ಮೌನ ವಹಿಸಲು ಶಾಸಕ ಬಿ.ವೈ. ವಿಜಯೇಂದ್ರ ತಮಗೆ 150 ಕೋಟಿಗಳ ರೂಪಾಯಿಗಳ ಆಮಿಷ ಒಡ್ಡಿದ್ದರು ಎಂದು ಅನ್ವರ್‌ ಮಾಣಿಪ್ಪಾಡಿ ಅವರೇ ಆರೋಪ ಮಾಡಿದ್ದರು.

ಆಗಿನ ಮುಖ್ಯಮಂತ್ರಿಗಳ ಪುತ್ರ ಆಮಿಷ ಒಡ್ಡಿದ್ದರು. ಅದರ ಹಿಂದೆ ಮುಖ್ಯಮಂತ್ರಿ ಇದ್ದರು ಎಂದು ಸ್ವತಃ ಮಾಣಿಪಾಡಿ ಹೇಳಿರುವ ಕುರಿತು ವಿಡಿಯೋ ದಾಖಲೆ ಇದೆ. ಅದರ ಆಧಾರದ ಮೇಲೆ ನಾವು ಪ್ರತಿಕ್ರಿಯೆ ನೀಡಿದ್ದೇವೆ. ಬಹಳ ವರ್ಷಗಳ ನಂತರ ಈಗ ನಾನು ಆ ರೀತಿ ಹೇಳಿಲ್ಲ ಎನ್ನುತ್ತಿದ್ದಾರೆ. ಏನು ಮಾಡಬೇಕು ಎಂದು ನೀವೇ ಹೇಳಿ ಎಂದು ಮುಖ್ಯಮಂತ್ರಿಗಳು ಮಾಧ್ಯಮದವರನ್ನು ಪ್ರಶ್ನಿಸಿದರು.

ಪಂಚಮಸಾಲಿ ಸಮುದಾಯಕ್ಕೆ ವನ್ನು ಪ್ರವರ್ಗ 2ಎ ಮೀಸಲಾತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಹೋರಾಟದಲ್ಲಿ ಆಗಿರುವ ಅವಘಡಕ್ಕಾಗಿ ಸಿಎಂ ಕ್ಷಮೆ ಕೇಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ಯಾರು ಸಮಸ್ಯೆಯನ್ನು ಇತ್ಯರ್ಥ ಮಾಡಿಲ್ಲವೋ ಅವರೇ ಕ್ಷಮೆ ಕೇಳಲಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಮಾಣಿಪಾಡಿ ಹೇಳಿಕೆ ಕುರಿತು ಸಿಬಿಐ ತನಿಖೆ ನಡೆಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ನಕಾರ ವ್ಯಕ್ತ ಪಡಿಸಿದರು. ವಕ್‌್ಫ ಮಂಡಳಿ ಕುರಿತು ಸರ್ಕಾರ ವಿಧಾನಮಂಡಲದಲ್ಲಿ ಚರ್ಚೆಗೂ ಸಿದ್ಧವಿದೆ. ವಿರೋಧ ಪಕ್ಷಗಳ ಪ್ರಶ್ನೆಗಳಿಗೂ ಉತ್ತರ ನೀಡಲೂ ಸಿದ್ಧವಿದೆ ಎಂದರು.

RELATED ARTICLES

Latest News