Monday, December 2, 2024
Homeರಾಷ್ಟ್ರೀಯ | Nationalತಿಮಪ್ಪನ ದರ್ಶನಕ್ಕೆ ತೆರಳುವ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್

ತಿಮಪ್ಪನ ದರ್ಶನಕ್ಕೆ ತೆರಳುವ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್

ತಿರುಪತಿ,ಜೂ.19- ಹಿರಿಯ ನಾಗರಿಕರಿಗೆ ಯಾವುದೇ ಒತ್ತಡವಿಲ್ಲದೆ ಆರಾಮದಾಯಕವಾಗಿ ತಿರುಪತಿ ತಿಮಪ್ಪನ ದರುಶನ ಪಡೆಯಲು ವಿಶೇಷ ವ್ಯವಸ್ಥೆ ಮಾಡಲಾಗಿದೆ.ಆಂಧ್ರ ಪ್ರದೇಶದಲ್ಲಿ ನೂತನವಾಗಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಚಂದ್ರಬಾಬು ನಾಯ್ಡು, ಸರ್ಕಾರ ಹಿರಿಯ ನಾಗಕರಿಗೆ ಒಳ್ಳೆಯ ಸುದ್ದಿ ನೀಡಿದ್ದು, ವೆಂಕಟೇಶ್ವರ ದೇವರ ಉಚಿತ ದರ್ಶನಕ್ಕೆ ಎರಡು ವಿಶೇಷ ಸಮಯ ಸ್ಲಾಟ್‌ಗಳನ್ನು ವ್ಯವಸ್ಥೆ ಮಾಡಿದೆ.

ಇದರನ್ವಯ ಮೊದಲನೆಯದಾಗಿ ಬೆಳಿಗ್ಗೆ 10 ಗಂಟೆಗೆ ಹಾಗೂ ಮಧ್ಯಾಹ್ನ 3 ಗಂಟೆಗೆ ವಿಶೇಷ ಸ್ಲಾಟ್‌ನಲ್ಲಿ ಹಿರಿಯ ನಾಗರಿಕರು ವೆಂಕಟೇಶ್ವರನ ದರುಶನ ಪಡೆಯಬಹುದಾಗಿದೆ.ಟಿಟಿಡಿ ನೀಡುತ್ತಿರುವ ಈ ಸೌಲಭ್ಯ ಪಡೆಯಲು ಹಿರಿಯ ನಾಗರಿಕರು ತಮ ಫೋಟೊ ಗುರುತಿನ ಚೀಟಿ (ಆಧಾರ್‌ ಅಥವಾ ಇತರೆ ದಾಖಲೆಗಳು) ಜೊತೆಗೆ ವಯಸ್ಸಿನ ಪುರಾವೆಯನ್ನು ಹಾಜರುಪಡಿಸಬೇಕು. ಈ ದಾಖಲೆಗಳನ್ನು ಎಸ್‌‍-1 ಕೌಂಟರ್‌ನಲ್ಲಿ ಸಲ್ಲಿಸಬೇಕು.

ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಹಿರಿಯ ನಾಗರಿಕರು ಸರತಿಸಾಲಿನಲ್ಲಿ ನಿಲ್ಲಬೇಕಾದ ಅಗತ್ಯವಿಲ್ಲ. ಅವರು ಯಾವುದೇ ಮೆಟ್ಟಿಲುಗಳನ್ನು ಹತ್ತದೇ ಸೇತುವೆ ಕೆಳಗೆ ಇರುವ ಗ್ಯಾಲರಿಯ ಮೂಲಕ ಪ್ರವೇಶಿಸಬಹುದಾಗಿದೆ.

ಇವರಿಗಾಗಿ ಘೋಷಿಸಿರುವ ಈ ವಿಶೇಷ ದರುಶನದ ಸಮಯದಲ್ಲಿ ಎಲ್ಲಾ ಇತರ ಸರತಿ ಸಾಲುಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಹೀಗಾಗಿ ಹಿರಿಯರು ಯಾವುದೇ ಒತ್ತಡವಿಲ್ಲದೆ ಆರಾಮದಾಯಕವಾಗಿ ತಿರುಪತಿ ತಿಮಪ್ಪನ ದರುಶನ ಪಡೆಯಬಹುದಾಗಿದೆ.
ತಿರುಪತಿಗೆ ಭೇಟಿ ನೀಡುವ ಹಿರಿಯ ನಾಗರಿಕರಿಗೆ ಹಲವು ಸೌಲಭ್ಯಗಳು ಲಭ್ಯವಿದೆ.

ಆರಾಮದಾಯಕ ಆಸನಗಳನ್ನು ಒದಗಿಸಲಾಗುವುದು. ಸರತಿ ಸಾಲಿನಲ್ಲಿ ಹಿರಿಯರಿಗೆ ಬಿಸಿಬಿಸಿ ಸಾಂಬಾರನ್ನ, ಮೊಸರನ್ನ, ಬಿಸಿ ಹಾಲು ನೀಡಲಾಗುವುದು.ಈ ಎಲ್ಲಾ ಸೇವೆಗಳು ಇವರಿಗೆ ಉಚಿತವಾಗಿರುತ್ತವೆ ಎಂದು ಟಿಟಿಡಿ ಸ್ಪಷ್ಟಪಡಿಸಿದೆ.

ತಿರುಮಲ, ತಿರುಪತಿ ದೇವಸ್ಥಾನದಲ್ಲಿ ತಿಮಪ್ಪನ ದರುಶನಕ್ಕೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವೊಮೆ ದೇವರ ದರುಶನಕ್ಕೆ 30 ಗಂಟೆಗೂ ಹೆಚ್ಚು ಸಮಯ ಕಾಯಬೇಕಾಗುವುದು. ಈ ರೀತಿ ದೀರ್ಘ ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಲ್ಲುವುದು ಅದರಲ್ಲೂ ಹಿರಿಯ ನಾಗರಿಕರಿಗೆ ಸವಾಲಾಗಿರುವ ಹಿನ್ನಲೆಯಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಿದೆ.

ಇದಲ್ಲದೆ ಇವರಿಗೆ 2 ಪ್ರಸಾದ ಲಡ್ಡುಗಳನ್ನು ಅತ್ಯಲ್ಪ ಬೆಲೆಗೆ ಅಂದರೆ 20 ರೂ. ಬೆಲೆಗೆ ನೀಡಲಾಗುತ್ತದೆ. ಹೆಚ್ಚುವರಿ ಅಗತ್ಯವಿದ್ದರೆ ಪ್ರತಿಯೊಂದಕ್ಕೂ 25 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಹೆಚ್ಚಿನ ವಿವರಣೆಗಳಿಗೆ ಟಿಟಿಡಿ ವಿಶೇಷ ಸಹಾಯವಾಣಿ ಸಂಖ್ಯೆ 08772277777 ಯಲ್ಲಿ ಸಂಪರ್ಕಿಸಬಹುದಾಗಿದೆ.

RELATED ARTICLES

Latest News