Saturday, January 11, 2025
Homeರಾಷ್ಟ್ರೀಯ | Nationalಪವನ್‌ಕಲ್ಯಾಣ್‌ಗೆ ಟಿಟಿಡಿ ಮುಖ್ಯಸ್ಥರ ತಿರುಗೇಟು

ಪವನ್‌ಕಲ್ಯಾಣ್‌ಗೆ ಟಿಟಿಡಿ ಮುಖ್ಯಸ್ಥರ ತಿರುಗೇಟು

ತಿರುಪತಿ,ಜ.11- ತಿರುಪತಿಯಲ್ಲಿನ ಕಾಲ್ತುಳಿತ ಘಟನೆಗೆ ಕ್ಷಮೆ ಕೋರುವುದರಿಂದ ಸತ್ತವರು ಬದುಕಿ ಬರುವುದಿಲ್ಲ ಎಂದು ಟಿಟಿಡಿ ಮುಖ್ಯಸ್ಥ ಬಿ.ಆರ್‌.ನಾಯ್ಡು ಆಂಧ್ರ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಅವರಿಗೆ ತಿರುಗೇಟು ನೀಡಿದ್ದಾರೆ. ಜ.8 ರಂದು ವಿಶೇಷ ದರ್ಶನದ ಟಿಕೆಟ್‌ ವಿತರಣೆ ಸಂದರ್ಭದಲ್ಲಿ ಸಂಭವಿಸಿ ಕಾಲ್ತುಳಿತದಿಂದ ಆರು ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಈ ಘಟನೆಗೆ ಕ್ಷಮೆ ಕೇಳಬೇಕೆಂದು ಉಪಮುಖ್ಯಮಂತ್ರಿ ಪವನ್‌ಕಲ್ಯಾಣ್‌ ಸಲಹೆ ನೀಡಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಬಿ.ಆರ್‌.ನಾಯ್ಡು ಕ್ಷಮೆ ಕೋರುವುದರಿಲ್ಲಿ ಯಾವುದೇ ಸಮಸ್ಯೆಯಿಲ್ಲ. ಆದರೆ ಕ್ಷಮೆಯು ಸತ್ತವರನ್ನು ಬದುಕಿಸುವುದಿಲ್ಲ. ಯಾರೋ, ಏನೋ ಹೇಳುತ್ತಾರೆ ಎಂದು ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ಆಂಧ್ರಪ್ರದೇಶದ ಮೈತ್ರಿ ಸರ್ಕಾರಕ್ಕೆ ಮುಜುಗರ ಉಂಟುಮಾಡುವಂತಹ ಹೇಳಿಕೆ ನೀಡಿದ್ದಾರೆ. ಕಾಲ್ತುಳಿತ ಘಟನೆಯಲ್ಲಿ ತಪ್ಪಿಲ್ಲದಿದ್ದರು ಟಿಟಿಡಿ ಮಂಡಳಿ ಭಕ್ತರ ಕ್ಷಮೆ ಯಾಚಿಸಿದೆ. ಈ ಘಟನೆ ಹೇಗೆ ಸಂಭವಿಸಿತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

RELATED ARTICLES

Latest News