ಬೆಂಗಳೂರು,ಜೂ.25- ಕಳೆದ ಹಲವಾರು ವರ್ಷಗಳಿಂದ ಬಿಬಿಎಂಪಿಯಲ್ಲಿ ಬೀಡು ಬಿಟ್ಟಿರುವ ಎರವಲು ಸೇವೆ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳನ್ನು ಮಾತೃ ಇಲಾಖೆಗೆ ವರ್ಗಾವಣೆ ಮಾಡಬೇಕು, ಮೇಲಾಧಿಕಾರಿಗಳ ಕಿರುಕುಳ ತಪ್ಪಿಸಬೇಕು ಹಾಗೂ ಸಕಾಲಕ್ಕೆ ಬಡ್ತಿ ನೀಡಬೇಕು ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಮನವಿ ಮಾಡಿಕೊಂಡಿದೆ.
ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಡಾ.ರಾಜ್ ಕುಮಾರ್ ಗಾಜಿಮನೆಯಲ್ಲಿ ಹಮಿಕೊಂಡಿದ್ದ ಬಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವದ್ಧಿ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಈ ಮನವಿ ಮಾಡಿಕೊಳ್ಳಲಾಗಿದೆ.
ಸಭೆಯಲ್ಲಿ ವ್ಯವಸ್ಥಾಪಕರು, ಕಂದಾಯ ಪರಿವೀಕ್ಷಕರು, ಹಿರಿಯ ಮಹಿಳಾ ಸಹಾಯಕಿಯರು ಹಾಗೂ ಇತರೆ ಹ್ದುೆ ಮುಂಬಡ್ತಿಗಳ ಬಗ್ಗೆ, ಶೇ.25 ರಷ್ಟು ಕಂದಾಯ ಪರಿವೀಕ್ಷಕರನ್ನು ನೇರ ನೇಮಕಾತಿ ಮೂಲಕ ನೇಮಕ ಮಾಡಿಕೊಳ್ಳವುದರ ಕುರಿತು ಹಾಗೂ ಎರವಲು ಸೇವೆ ಅಧಿಕಾರಿಗಳ ಬಗ್ಗೆ ವ್ಯಾಪಕ ಚರ್ಚೆ ನಡೆಸಲಾಯಿತು.
ಕೆಲ ಅಧಿಕಾರಿಗಳು ತಳೆದಿರುವ ನೌಕರ ವಿರೋಧಿ ನೀತಿ ಹಾಗೂ ಎ ಶ್ರೇಣಿ ಅಧಿಕಾರಿಗಳ ನೇಮಕಾತಿ ಹೊಣೆಯನ್ನು ಮುಖ್ಯ ಆಯುಕ್ತರಿಗೆ ನೀಡುವ ಕುರಿತಂತೆಯೂ ಚರ್ಚಿಸಲಾಯಿತು.ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಅಮೃತ್‌ರಾಜ್ ಅವರು, ನಗರದಲ್ಲಿ 1.30 ಕೋಟಿ ಜನ ವಾಸ ಮಾಡುತ್ತಿದ್ದಾರೆ. ಸಿಬ್ಬಂದಿಗಳ ಕೊರತೆ ಇದ್ದರೂ ಬಿಬಿಎಂಪಿ ನೌಕರರು ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಶ್ರಮಿಸುತ್ತಿದ್ದಾರೆ. ಆದರೆ ಅಂತವರಿಗೆ ಸಿಗಬೇಕಾದ ಮುಂಬಡ್ತಿ ಸಿಗುತ್ತಿಲ್ಲ. ಇದರ ಜೊತೆಗೆ ಮೇಲಾಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಿ ನೌಕರರ ಸಮಸ್ಯೆಗಳ ನಿವಾರಣೆಗಾಗಿ ಚರ್ಚಿಸಲು ಸರ್ವ ಸದಸ್ಯರ ಸಭೆ ಕರೆಯಲಾಗಿದೆ. ಲೋಕಪಯೋಗಿ ಇಲಾಖೆಯಿಂದ ಎರವಲು ಸೇವೆ ಇಂಜನಿಯರ್ ಗಳ ನೇಮಕ ಮಾಡಬೇಕು ಅದರೆ ವಿವಿಧ ಇಲಾಖೆಗಳಿಂದ ನೇಮಕ ಮಾಡಿಕೊಳ್ಳುತ್ತಿದ್ದಾರೆ ಇದು ಕೆಎಂಸಿ ಕಾಯ್ದೆಗೆ ವಿರುದ್ಧವಾಗಿದೆ ಎಂದು ಹೇಳಿದರು.
ಬಿಬಿಎಂಪಿಯಲ್ಲೇ ಉತ್ತಮ ಎಂಜಿನಿಯರ್ ಗಳು ಇದ್ದಾರೆ ಅವರಿಗೆ ಬಡ್ತಿ ನೀಡಿ ನೇಮಕ ಮಾಡಿಕೊಳ್ಳಬಹುದು ಅವಶ್ಯಕತೆ ಇದ್ದಲ್ಲಿ ಲೋಕೋಪಯೋಗಿ ಇಲಾಖೆ ಎರವಲು ಸೇವೆ ಪಡೆದುಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು.
ಎಸ್ಟೇಟ್ ವಿಭಾಗದ ಮೇಲಾಧಿಕಾರಿ ಶ್ರೀನಿವಾಸಮೂರ್ತಿ ಅವರು ಮಹಿಳಾ ಸಿಬ್ಬಂದಿಗಳಿಗೆ ಅವಾಚ್ಯ ಶಬ್ಬ ಬಳಸಿ ಮಾತನಾಡುತ್ತಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಬಿಬಿಎಂಪಿಯಲ್ಲಿ ಸಬ್ ರಿಜ್ಜಿಸ್ಟಾರ್ ಹ್ದುೆಯಲ್ಲಿ ನೇಮಕಗೊಂಡು, ಸಬ್ ರಿಜ್ಜಿಸ್ಟಾರ್ ಆಗಿ ನಿವತ್ತಿ ಹೊಂದುತ್ತಾರೆ ಅವರಿಗೂ ಸಹ ಬಡ್ತಿ ಸಿಗಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಸಾಯಿಶಂಕರ್, ಎ.ಜಿ.ಬಾಬಣ್ಣ, ಕೆ.ಜಿ.ರವಿ,ಡಾ.ಶೋಭಾ, ಹೆಚ್.ಕೆ.ಹರೀಶ್, ಸೋಮಶೇಖರ್ ,ಆರ್. ರೇಣುಕಾಂಬ, ಡಿ.ರಾಮಚಂದ್ರ, ಕೆ.ಮಂಜೇಗೌಡ,ಎಸ್.ಜಿ.ಸುರೇಶ್, ಶ್ರೀಧರ್, ಸಂತೋಷ್ ಕುಮಾರ್, ಎನ್.ಮಂಜುನಾಥ್, ಕೆ.ನರಸಿಂಹ, ಕೆ.ಸಂತೋಷ್ ಕುಮಾರ್ ನಾಯಕ್, ವಿ.ಉಮೇಶ್, ಹೆಚ್.ಕೆ.ತಿಪ್ಪೇಶ್ ಮತ್ತಿತರರು ಹಾಜರಿದ್ದರು.