Friday, November 22, 2024
Homeರಾಷ್ಟ್ರೀಯ | Nationalಐಫೋನ್‌ ಬಳಕೆದಾರರೇ ಹುಷಾರ್..!

ಐಫೋನ್‌ ಬಳಕೆದಾರರೇ ಹುಷಾರ್..!

ನವದೆಹಲಿ,ಜು.11– ಐ ಫೋನ್‌ ಬಳಕೆದಾರರೇ ನೀವು ಬಳಸುತ್ತಿರುವ ಫೋನಿನಲ್ಲಿ ಪೆಗಾಸಸ್‌‍ನಂತಹ ಸ್ಪೈವೇರ್‌ ಆ್ಯಪ್‌ ಇರಬಹುದು ಅದರಿಂದ ನಿಮ ಮಾಹಿತಿ ಬೇರೆಯವರ ಕೈ ಸೇರುವ ಅಪಾಯವಿದೆ. ಇರಲಿ ಎಚ್ಚರ.

ಇಂತಹ ಒಂದು ಸಂದೇಶವನ್ನು ಸ್ವತಃ ಆ್ಯಪಲ್‌ ಸಂಸ್ಥೆಯೇ ತನ್ನ ಫೋನ್‌ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಭಾರತ ಸೇರಿದಂತೆ 98 ದೇಶಗಳ ಐಫೋನ್‌ ಬಳಕೆದಾರರು ಇದರ ಬಗ್ಗೆ ಎಚ್ಚರವಹಿಸುವುದು ಸೂಕ್ತ ಎಂದು ಸಲಹೆ ನೀಡಲಾಗಿದೆ.

ಐಫೋನ್‌ ತಯಾರಕರು ಈ ದಾಳಿಯು ನೀವು ಯಾರು ಅಥವಾ ನೀವು ಏನು ಮಾಡುತ್ತಿದ್ದೀರಿ ಎಂಬ ಕಾರಣದಿಂದ ನಿರ್ದಿಷ್ಟವಾಗಿ ನಿಮನ್ನು ಗುರಿಯಾಗಿಸಿಕೊಂಡಿರಬಹುದು ಎಂದು ತಿಳಿಸಿದ್ದಾರೆ.

ಅಂತಹ ದಾಳಿಗಳನ್ನು ಪತ್ತೆಹಚ್ಚುವಾಗ ಸಂಪೂರ್ಣ ಖಚಿತತೆಯನ್ನು ಸಾಧಿಸಲು ಎಂದಿಗೂ ಸಾಧ್ಯವಿಲ್ಲ, ಆಪಲ್‌ ಈ ಎಚ್ಚರಿಕೆಯಲ್ಲಿ ಹೆಚ್ಚಿನ ವಿಶ್ವಾಸವನ್ನು ಹೊಂದಿದೆ – ದಯವಿಟ್ಟು ಅದನ್ನು ಗಂಭೀರವಾಗಿ ತೆಗೆದುಕೊಳ್ಳಿ ಎಂದು ಕಂಪನಿ ಹೇಳಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಯುಎಸ್‌‍ ಮೂಲದ ತಂತ್ರಜ್ಞಾನ ಕಂಪನಿಯು ಭಾರತದ ಬಳಕೆದಾರರಿಗೆ ಇದೇ ರೀತಿಯ ಎಚ್ಚರಿಕೆಗಳನ್ನು ಕಳುಹಿಸಿತ್ತು.ಈ ವರ್ಷದ ಏಪ್ರಿಲ್‌ನಲ್ಲಿ, ಟೆಕ್‌ ದೈತ್ಯವು 92 ದೇಶಗಳಲ್ಲಿ ಆಯ್ದ ಬಳಕೆದಾರರಿಗೆ ಬೆದರಿಕೆ ಅಧಿಸೂಚನೆಗಳನ್ನು ಕಳುಹಿಸಿದೆ, ಭಾರತದಲ್ಲಿ ಕೆಲವರು ಸೇರಿದಂತೆ, ಎನ್‌ಎಸ್‌‍ಒ ಗ್ರೂಪ್‌ನಿಂದ ಪೆಗಾಸಸ್‌‍ನಂತಹ ಸ್ಪೈವೇರ್‌ಗೆ ಗುರಿಯಾಗಿರಬಹುದು ಎಂದು ಅಂದಾಜಿಸಿದೆ.

ಇತ್ತೀಚೆಗೆ, ಭಾರತ ಸರ್ಕಾರವು ಭಾರತದಲ್ಲಿನ ಆಪಲ್‌ ಬಳಕೆದಾರರಿಗೆ ಅವರ ಸಾಧನಗಳಲ್ಲಿನ ಬಹು ದೋಷಗಳ ಬಗ್ಗೆ ಎಚ್ಚರಿಕೆ ನೀಡಿತ್ತು.

RELATED ARTICLES

Latest News