Sunday, September 29, 2024
Homeರಾಜ್ಯವಿಧಾನಮಂಡಲದ ಜಂಟಿ ಸ್ಥಾಯಿ ಸಮಿತಿಗಳ ನೇಮಕ

ವಿಧಾನಮಂಡಲದ ಜಂಟಿ ಸ್ಥಾಯಿ ಸಮಿತಿಗಳ ನೇಮಕ

Appointment of Joint Legislative Standing Committees

ಬೆಂಗಳೂರು, ಸೆ.28– ಪ್ರಸಕ್ತ 2024-25ನೇ ಸಾಲಿನ ಕರ್ನಾಟಕ ವಿಧಾನಮಂಡಲದ 9 ವಿವಿಧ ಜಂಟಿ ಸ್ಥಾಯಿ ಸಮಿತಿಗಳು ಹಾಗೂ 6 ಸ್ಥಾಯಿ ಸಮಿತಿಗಳನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ರವರು ರಚನೆ ಮಾಡಿದ್ದಾರೆ. ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಸಭಾಧ್ಯಕ್ಷರು ನಾಮ ನಿರ್ದೇಶನ ಮಾಡಿದ್ದಾರೆ ಎಂದು ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಅಧ್ಯಕ್ಷರಾಗಿ ಶಾಸಕ ಸಿ.ಸಿ. ಪಾಟೀಲ್‌ ಅವರನ್ನು ನೇಮಕ ಮಾಡಲಾಗಿದ್ದು, ಹಿರಿಯ ಶಾಸಕರಾದ ಆರ್‌.ವಿ. ದೇಶಪಾಂಡೆ ಸೇರಿದಂತೆ ವಿಧಾನಸಭೆಯ 15 ಸದಸ್ಯರು ಹಾಗೂ ವಿಧಾನ ಪರಿಷತ್ತಿನ ನಾಲ್ವರು ಸದಸ್ಯರು ಸಮಿತಿಯ ಸದಸ್ಯರಾಗಿದ್ದಾರೆ.

ಸಾರ್ವಜನಿಕ ಉದ್ದಿಮೆಗಳ ಸಮಿತಿಯ ಅಧ್ಯಕ್ಷರಾಗಿ ಶಾಸಕ ಬಸವರಾಜ್‌ ನೀಲಪ್ಪ ಶಿವಣ್ಣನವರ್‌, ಸದಸ್ಯರಾಗಿ ವಿಧಾನಸಭೆಯ 15 ಸದಸ್ಯರು ಹಾಗೂ ವಿಧಾನ ಪರಿಷತ್ತಿನ 5 ಸದಸ್ಯರು ನೇಮಕಗೊಂಡಿದ್ದಾರೆ.ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಸದಸ್ಯರಾಗಿ ವಿಧಾನಸಭೆಯ 15 ಸದಸ್ಯರು ಹಾಗೂ ವಿಧಾನ ಪರಿಷತ್ತಿನ 5 ಸದಸ್ಯರು ನೇಮಕವಾಗಿದ್ದಾರೆ.

ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿ ಶಾಸಕ ಎ.ಆರ್‌.ಕೃಷ್ಣಮೂರ್ತಿ, ಸದಸ್ಯರಾಗಿ ವಿಧಾನಸಭೆಯ 15 ಸದಸ್ಯರು ಹಾಗೂ ವಿಧಾನ ಪರಿಷತ್ತಿನ 5 ಸದಸ್ಯರು ನೇಮಕಗೊಂಡಿದ್ದಾರೆ.ಅಧೀನ ಶಾಸನ ರಚನಾ ಸಮಿತಿಯ ಅಧ್ಯಕ್ಷರಾಗಿ ಶಾಸಕ ಬಿ.ಶಿವಣ್ಣ, ಸದಸ್ಯರಾಗಿ ವಿಧಾನಸಭೆಯ 16 ಸದಸ್ಯರು ಹಾಗೂ ವಿಧಾನ ಪರಿಷತ್ತಿನ 5 ಸದಸ್ಯರು ನೇಮಕಗೊಂಡಿದ್ದಾರೆ.

ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿ ಅಧ್ಯಕ್ಷರಾಗಿ ಶಾಸಕ ಹೆಚ್‌,ಡಿ,ರೇವಣ್ಣ ಹಾಗೂ ಸದಸ್ಯರಾಗಿ ವಿಧಾನಸಭೆಯ 15 ಸದಸ್ಯರು ಹಾಗೂ ವಿಧಾನ ಪರಿಷತ್ತಿನ 5 ಸದಸ್ಯರು ನೇಮಕವಾಗಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿ ಶಾಸಕ ಎನ್‌. ಎಚ್‌. ಕೋನರೆಡ್ಡಿ, ಸದಸ್ಯರಾಗಿ ವಿಧಾನಸಭೆಯ 14 ಸದಸ್ಯರು ಹಾಗೂ ವಿಧಾನ ಪರಿಷತ್ತಿನ 5 ಸದಸ್ಯರು ನೇಮಕಗೊಂಡಿದ್ದಾರೆ.

ಗ್ರಂಥಾಲಯ ಸಮಿತಿ ಅಧ್ಯಕ್ಷರಾಗಿ ಶಾಸಕ ಯು.ಬಿ.ಬಣಕಾರ್‌, ಸದಸ್ಯರಾಗಿ ವಿಧಾನಸಭೆಯ 5 ಸದಸ್ಯರು ಹಾಗೂ ವಿಧಾನ ಪರಿಷತ್ತಿನ 3ಸದಸ್ಯರು ಹಾಗೂ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಗಳ ಸಮಿತಿ ಅಧ್ಯಕ್ಷರಾಗಿ ರಿಜ್ವಾನ್‌ ಅರ್ಷದ್‌, ಸದಸ್ಯರಾಗಿ ವಿಧಾನಸಭೆಯ 14 ಸದಸ್ಯರು ಹಾಗೂ ವಿಧಾನ ಪರಿಷತ್ತಿನ 5 ಸದಸ್ಯರು ನೇಮಕಗೊಂಡಿದ್ದಾರೆ.

ವಿಧಾನಸಭೆಯ ಸಮಿತಿಗಳಾದ ಅಂದಾಜು ಸಮಿತಿ ಅಧ್ಯಕ್ಷರಾಗಿ ಶಾಸಕ ಹಂಪನಗೌಡ ಬಾದರ್ಲಿ ಹಾಗೂ 18 ಶಾಸಕರು ಸದಸ್ಯರಾಗಿ ನೇಮಕವಾಗಿದ್ದಾರೆ. ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರಾಗಿ ಶಾಸಕ ಕೆ.ವೈ.ನಂಜೇಗೌಡ ಹಾಗೂ 15 ಶಾಸಕರು ಸದಸ್ಯರಾಗಿದ್ದಾರೆ.

ಹಕ್ಕುಬಾಧ್ಯತೆಗಳ ಸಮಿತಿಯ ಅಧ್ಯಕ್ಷರಾಗಿ ಕೌಜಲಗಿ ಶಿವಾನಂದ ಮಹಾಂತೇಶ ಹಾಗೂ 11 ಶಾಸಕರು ಸದಸ್ಯರಾಗಿದ್ದಾರೆ. ಖಾಸಗಿ ಸದಸ್ಯರು ವಿಧೇಯಕ ಹಾಗೂ ನಿರ್ಣಯಗಳ ಸಮಿತಿಯ ಅಧ್ಯಕ್ಷರಾಗಿ ವಿಧಾನಸಭಾಧ್ಯಕ್ಷರಾದ ರುದ್ರಪ್ಪ, ಮಾನಪ್ಪ ಲಮಾಣಿ ಹಾಗೂ 11 ಶಾಸಕರು ಸದಸ್ಯರಾಗಿ ನೇಮಕವಾಗಿದ್ದಾರೆ.

ಅರ್ಜಿಗಳ ಸಮಿತಿಯ ಅಧ್ಯಕ್ಷರಾಗಿ ವಿಧಾನಸಭಾಧ್ಯಕ್ಷರಾದ ರುದ್ರಪ್ಪ, ಮಾನಪ್ಪ ಲಮಾಣಿ ಹಾಗೂ 16ಶಾಸಕರು ಸದಸ್ಯರಾಗಿ ನೇಮಕವಾಗಿದ್ದಾರೆ. ವಸತಿ ಸೌಕರ್ಯ ಸಮಿತಿ ಅಧ್ಯಕ್ಷರಾಗಿ ವಿಧಾನಸಭಾಧ್ಯಕ್ಷರಾದ ರುದ್ರಪ್ಪ, ಮಾನಪ್ಪ ಲಮಾಣಿ ಹಾಗೂ 12 ಶಾಸಕರು ಸದಸ್ಯರಾಗಿ ನೇಮಕವಾಗಿದ್ದಾರೆ.

RELATED ARTICLES

Latest News