ಟ್ಲಾಕ್ಸ್ಕಲಾ (ಮೆಕ್ಸಿಕೊ),ಅ.21- ಭಾರತದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಇಲ್ಲಿ ನಡೆದ ಆರ್ಚರಿ ವಿಶ್ವಕಪ್ ಫೈನಲ್‌ನಲ್ಲಿ ಚೀನಾದ ಲಿ ಜಿಯಾಮನ್ ವಿರುದ್ಧ ಸೋಲು ಕಂಡಿದ್ದಾರೆ ಮತ್ತು ಬೆಳ್ಳಿ ಪದಕ ತೃಪ್ತಿಪಟ್ಟಿದ್ದಾರೆ.
ನಾಲ್ಕು ಬಾರಿ ಒಲಿಂಪಿಕ್ ಪಂದ್ಯಾವಳಿಯಲ್ಲಿ ಬಾಗಿಯಾದ ಕೀರ್ತಿ ಪಡೆದಿರುವ ದೀಪಿಕಾ ಕಳೆದ 2022 ರಲ್ಲಿ ಹೆರಿಗೆಗಾಗಿ ಸುದೀರ್ಘ ರಜೆಯ ನಂತರವಿಶ್ವಕಪ್ -ಫೈನಲ್‌ಗೆ ಏರಿ ಅದ್ಬುತ ಪ್ರದರ್ಶನ ನೀಡಿದ್ದರು ಆದರೆ ಅಂತಿಮ ಸುತ್ತಿನಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ತಂಡದ ಬೆಳ್ಳಿ ಪದಕ ವಿಜೇತ ನಾಲ್ಕನೇ ಶ್ರೇಯಾಂಕದ ಲಿ ಜಿಯಾಮನ್ ವಿರುದ್ಧ ಚಿನ್ನದ ಪದಕಕ್ಕಾಗಿ ಹೋರಾಟದಲ್ಲಿ ಒತ್ತಡದಲ್ಲಿ ಸಿಲುಕಿದತ್ತಿತ್ತು.
ಫೈನಲ್‌ವರೆಗೂ ಸುಗಮ ಓಟವನ್ನು ಹೊಂದಿದ್ದರು ಆದರೆ ಅದೃಷ್ಠ ಕೈಕೊಟ್ಟಿದೆ,ಅವರು ದುಬೈನಲ್ಲಿ ಕಳೆದ 2007ರ ಆರ್ಚರಿ ವಿಶ್ವಕಪ್‌ನಲ್ಲಿ ಭಾರತದ ಡೋಲಾ ಬ್ಯಾನರ್ಜಿ ಚಿನ್ನ ಗೆದ್ದ ಏಕೈಕ ಭಾರತೀಯ ಬಿಲ್ಲುಗಾರ್ತಿ .
ಪುರುಷರ ರಿಕರ್ವ್ ವಿಭಾಗದಲ್ಲಿ, ಧೀ ರಜ್ ಬೊಮ್ಮ ದೇವರ ಅವರು 4-2 ರಿಂದ ಮುನ್ನಡೆ ಸಾಧಿಸಿದ್ದರೂ, ಆರಂಭಿಕ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಲೀ ವೂ ಸಿಯೋಕ್ ಅವರ ವಿರುದ್ಧ ಸೋಈಲು ಕಮಡು ನಿರ್ಗಮನ ಮಾಡಿದರು.
ಪ್ರತಿಷ್ಠಿತ ಪಂದ್ಯಗಳಲ್ಲಿ ಆಗಾಗ ಸೆಣಸಾಡುತ್ತಿರುವ ಭಾರತೀಯ ಬಿಲ್ಲುಗಾರರ ಮೇಲೆ ಒತ್ತಡ ಮತ್ತೊಮ್ಮೆ ಪರಿಣಾಮ ಬೀರುವಂತಿತ್ತು. ಮೂರು ಸಂಯುಕ್ತಗಳು ಮತ್ತು ಇಬ್ಬರು ರಿಕರ್ವ್ ಬಿಲ್ಲುಗಾರರನ್ನು ಒಳಗೊಂಡಿರುವ ಐದು ಸದಸ್ಯರ ಭಾರತೀಯ ತಂಡವು ಕೇವಲ ಒಂದು ಪದಕದೊಂದಿಗೆ ತಮ್ಮ ಋತುವಿನ ಅಂತ್ಯದ ವಿಶ್ವಕಪ್ ಫೈನಲ್ ಅಭಿಯಾನವನ್ನು ಮುಕ್ತಾಯಗೊಳಿಸಿತು.
ಸೆಮಿ-ಫೈನಲ್‌ನಲ್ಲಿ, ದೀಪಿಕಾ ಮನೆಯ ನೆಚ್ಚಿನ ಮತ್ತು ಪ್ಯಾರಿಸ್ ಒಲಿಂಪಿಕ್ಸ್÷ ಕಂಚಿನ ಪದಕ ವಿಜೇತೆ ವೆಲೆನ್ಸಿಯಾ ವಿರುದ್ಧ ಜಯಗಳಿಸಿದರು, ಅವರನ್ನು 6-4 (29-28, 26-26, 26-29, 28-28, 28-27) ಅಂತರದಿಂದ ಸೋಲಿಸಿದರು. ಇದು ಈ ವರ್ಷದ ಆರಂಭದಲ್ಲಿ ಯೆಚಿಯಾನ್ ವಿಶ್ವಕಪ್‌ನಿಂದ ದೀಪಿಕಾ ಕಂಚಿನ ಪದಕವನ್ನು ವೇಲೆನ್ಸಿಯಾ ವಿರುದ್ಧ ಸೇಡು ತೀರಿಸಿಕೊಂಡಿತ್ತು