ಬೆಂಗಳೂರು,ಏ.8- ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿದ್ದು, 2029ರ ಲೋಕಸಭೆ ಚುನಾವಣೆ ವೇಳೆಗೆ ದೇಶಾದ್ಯಂತ ಜಾರಿಯಾಗುವ ಸಾಧ್ಯತೆಯಿದೆ.
ಆದರೆ, ಕರ್ನಾಟಕದ ಮುಖ್ಯ ಚುನಾವಣಾಕಾಧಿರಿಗಳು ಲೋಕಸಭಾ ಚುನಾವಣೆಯಲ್ಲಿ ಸ್ರ್ಪಧಿಸುತ್ತಿರುವ ಅಭ್ಯರ್ಥಿಗಳ ಅಂಕಿಅಂಶಗಳನ್ನು ಬಿಡುಗಡೆ ಮಾಡಿರುವ ಪ್ರಕಾರ, ಏಪ್ರಿಲ್ 26ರಂದು ನಡೆಯುವ ಚುನಾವಣೆಯ ಅಭ್ಯರ್ಥಿಗಳ ನಾಮನಿರ್ದೇಶನಗಳಲ್ಲಿನ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಮಾಣದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಇದು ಮಹಿಳಾ ಮೀಸಲಾತಿ ಬಗ್ಗೆ ಚಿಂತೆ ಹುಟ್ಟುಹಾಕುತ್ತಿದೆ.
14 ಕ್ಷೇತ್ರಗಳಿಗೆ (ಮಾರ್ಚ್ 28ರಿಂದ ಏಪ್ರಿಲ್ 4ರವರೆಗೆ) ನಾಮಪತ್ರ ಸಲ್ಲಿಸಿದ ಒಟ್ಟು 338 ಅಭ್ಯರ್ಥಿಗಳ ಪೈಕಿ ಕೇವಲ 25 ಮಹಿಳೆಯರಿದ್ದಾರೆ. ನಾಮಪತ್ರದ ಸಲ್ಲಿಕೆಯ ಶೇ.8ಕ್ಕಿಂತ ಕಡಿಮೆ ಪ್ರತಿನಿಧಿಸುತ್ತಿದ್ದಾರೆ. ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಮಹಿಳಾ ಪ್ರತಿನಿಧಿಗಳ ಭಾಗವಹಿಸುವಿಕೆಯ ಉದ್ದೇಶಿತ ಗುರಿ ಮತ್ತು ಪ್ರಸ್ತುತ ವಾಸ್ತವತೆಯ ನಡುವಿನ ಈ ವ್ಯತ್ಯಾಸವು ಚುನಾವಣಾ ರಾಜಕೀಯದಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಬೆಳೆಸುವಲ್ಲಿ ವ್ಯವಸ್ಥಿತ ಸವಾಲುಗಳನ್ನು ಎತ್ತಿ ತೋರಿಸುತ್ತದೆ.
ಮಹಿಳಾ ಮೀಸಲಾತಿ ಮಸೂದೆಯು ನಿರ್ಧಾರ ತೆಗೆದುಕೊಳ್ಳುವ ಪಾತ್ರಗಳಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಪ್ರಯತ್ನದಲ್ಲಿರುವಾಗ, ಮಹಿಳಾ ಅಭ್ಯರ್ಥಿಗಳ ಪ್ರಾತಿನಿಧ್ಯವು ಸರ್ಕಾರ ಮತ್ತು ನಾಗರಿಕ ಸಮಾಜ ಸಂಸ್ಥೆಗಳಿಂದ ಸಂಘಟಿತ ಪ್ರಯತ್ನಗಳ ಅಗತ್ಯವನ್ನು ಒತ್ತಿಹೇಳುತ್ತದೆ.
ಮಹಿಳಾ ನಾಯಕತ್ವದಲ್ಲಿ ಹೆಚ್ಚೆಚ್ಚು ಮಂದಿ ತೊಡಗಿಸಿಕೊಳ್ಳುವುದು ಬಲವಾದ ಮತ್ತು ಹೆಚ್ಚು ವೈವಿಧ್ಯಮಯ ರಾಷ್ಟ್ರವಾಗಿ ರೂಪುಗೊಳ್ಳಲು ಸಹಾಯ ಮಾಡುತ್ತದೆ. ಮಹಿಳೆಯರು ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಮಾತ್ರ ಅವರ ಕುಂದುಕೊರತೆಗಳನ್ನು ಪರಿಹರಿಸಲು ಸಾಧ್ಯ. ಈ ಕ್ಷೇತ್ರಗಳಲ್ಲಿ ಮಹಿಳಾ ಮತದಾರರು ಸಾಕಷ್ಟು ಸಂಖ್ಯೆಯಲ್ಲಿ ಹೊಂದಿದ್ದರೂ, ಮಹಿಳಾ ಅಭ್ಯರ್ಥಿಗಳ ಕೊರತೆಯು ಕಳವಳಕಾರಿಯಾಗಿದೆ.
ರಾಜಕೀಯ ಪ್ರಾತಿನಿಧ್ಯದಲ್ಲಿ ಲಿಂಗ ಅಂತರವನ್ನು ಕಡಿಮೆ ಮಾಡಲು ಜಾಗೃತಿ ಅಭಿಯಾನಗಳು, ತರಬೇತಿ ಕಾರ್ಯಕ್ರಮಗಳು, ಸಮಾನ ಸಂಪನ್ಮೂಲ ವಿತರಣೆ ಮತ್ತು ನೀತಿ ಅನುಷ್ಠಾನದಂತಹ ಸಮಗ್ರ ಕ್ರಮಗಳು ಅನುಷ್ಟಾನಕ್ಕೆ ಬರಬೇಕು ಎಂಬುದು ಬಹತೇಕ ಮಹಿಳಾ ಮತದಾರರ ಒಕ್ಕೋರಲಿನ ಅಭಿಪ್ರಾಯವಾಗಿದೆ.