ವಯನಾಡ್ (ಕೇರಳ), ಅ. 13-ಉತ್ತರ ಕೇರಳ ವಯನಾಡ್ ಜಿಲ್ಲೆಯ ಖಾಸಗಿ ರೆಸಾರ್ಟ್‍ಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಶಂಕಿತ ಮಾವೋವಾದಿಗಳ ಗುಂಪು ಆಗಮಿಸಿ ಅಲ್ಲಿದ್ದವರನ್ನು ಬೆದರಿಸಿರುವ ಘಟನೆ ಬೆಳಕಿಗೆ ಬಂದಿದೆ. ತಲಪ್ಪುಳ ಪೊಲೀಸ್ ಠಾಣಾ ವ್ಯಾಪ್ತಿಯ ಮಕ್ಕಿಮಲದ ರೆಸಾರ್ಟ್‍ನಲ್ಲಿ ಬುಧವಾರ ಸಂಜೆ 6.40ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಧುನಿಕ ಶಸ್ತ್ರ ಹೊಂದಿದ್ದ ಆರು ಜನರು ರೆಸಾರ್ಟ್ ಮ್ಯಾನೇಜರ್‍ನ ಮೊಬೈಲ್ ಫೋನ್ ಕಿತ್ತುಕೊಂಡು ನಂತರ ಕೆಲ ಪತ್ರಕರ್ತರ ವಾಟ್ಸಾಪ್‍ಗುಂಪಿಗೆ ತಮ್ಮ ಹೇಳಿಕೆಯನ್ನು ಕಳುಹಿಸುವಂತೆ ಹೇಳಿ ನಂತರ ಅಲ್ಲಿಂದ ನಿರ್ಗಮಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ರಾಜ್ಯದಾದ್ಯಂತ ಒಟ್ಟು 23 ಪತ್ರಕರ್ತರು ಸಿಪಿಐ(ಮಾವೋವಾದಿ) ಕಬನಿ ಪ್ರದೇಶ ಸಮಿತಿಯಿಂದ ಹೇಳಿಕೆಯ ಸಂದೇಶ ಸ್ವೀಕರಿಸಿದ್ದಾರೆ. ನಮಗೆ ಬಂದ ಮಾಹಿತಿಯ ಪ್ರಕಾರ, ಅವರೆಲ್ಲರೂ ಎಕೆ -47 ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ ಎಂದು ರಾಜ್ಯ ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತದಲ್ಲಿ ನಿರುದ್ಯೋಗ ದರ 6 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಟ್ಟದಲ್ಲಿದೆ : ಪ್ರಧಾನಿ
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಬನಿ ಪ್ರದೇಶ ಸಮಿತಿಯ ವಕ್ತಾರರು ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ಈ ಹೇಳಿಕೆ ನೀಡಿದ್ದಾರೆ. ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಜಂಟಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆ (ಯುಎಪಿಎ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಗುಪ್ತಚರ ಅಧಿಕಾರಿ ತಿಳಿಸಿದ್ದಾರೆ.
ಇತ್ತೀಚೆಗೆ, ಈ ಉತ್ತರ ಕೇರಳ ಜಿಲ್ಲೆಯ ವಿವಿಧ ಅರಣ್ಯದ ಅಂಚಿನಲ್ಲಿರುವ ಕುಗ್ರಾಮಗಳಲ್ಲಿ ಮಾವೋವಾದಿಗಳ ಉಪಸ್ಥಿತಿಯ ಶಂಕಿತ ವರದಿಗಳು ಬಂದಿವೆ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.