Thursday, May 8, 2025
Homeರಾಷ್ಟ್ರೀಯ | Nationalಆಪರೇಷನ್ ಸಿಂಧೂರ್ 2.0ಗೆ ಸೇನೆ ಸಜ್ಜು, ಯಾವುದೇ ಕ್ಷಣದಲ್ಲಿ 2ನೇ ಭಾರಿಗೆ ದಾಳಿ ಸಾಧ್ಯತೆ

ಆಪರೇಷನ್ ಸಿಂಧೂರ್ 2.0ಗೆ ಸೇನೆ ಸಜ್ಜು, ಯಾವುದೇ ಕ್ಷಣದಲ್ಲಿ 2ನೇ ಭಾರಿಗೆ ದಾಳಿ ಸಾಧ್ಯತೆ

Army ready for Operation Sindoor 2.0, second attack possible at any moment

ನವದೆಹಲಿ, ಮೇ 8– ಉಗ್ರರ ನೆಲೆಯಾಗಿರುವ ಪಾಕಿಸ್ತಾನವನ್ನು ವಿಶ್ವದ ಮುಂದೆ ಮತ್ತಷ್ಟು ಬೆತ್ತಲು ಮಾಡಲೇಬೇಕೆಂದು ತೀರ್ಮಾನಿಸಿರುವ ಭಾರತವು ನೆರೆಯ ರಾಷ್ಟ್ರದ ಮೇಲೆ ಯಾವುದೇ ಕ್ಷಣದಲ್ಲಿ ಎರಡನೇ ಭಾರಿ ದಾಳಿ ನಡೆಸಲು ಸಜ್ಜಾಗಿದೆ.

ಈಗಲೂ ಸೇನಾ ಪಡೆಗೆ ಮುಕ್ತ ಸ್ವಾತಂತ್ರ್ಯ ನೀಡಿರುವ ಕೇಂದ್ರ ಸರ್ಕಾರವು, ದಾಳಿ ನಡೆಸುವ ಸಮಯ, ದಿನಾಂಕ, ಸ್ಥಳಗಳನ್ನು ನೀವೇ ಆಯ್ಕೆ ಮಾಡಿಕೊಂಡು ಮುನ್ನುಗ್ಗಿ ವೈರಿಗಳನ್ನು ಸೆದೆಬಡಿಯಿರಿ ಎಂದು ಸೂಚಿಸಿದೆ. ಇದಕ್ಕೆ ಪುಷ್ಟಿ ಎಂಬಂತೆ ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶೀರದ (ಪಿಒಕೆ) ಮೇಲೆ ನಡೆಸಿರುವ ದಾಳಿ ಆರಂಭವಷ್ಟೇ. ಅಭಿ ಪಿಚ್ಚರ್‌ ಬಾಕಿ ಹೈ ಎಂದು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿರುವುದು ಎರಡನೇ ದಾಳಿಯ ಮುನ್ಸೂಚನೆ ಎಂದು ಹೇಳಲಾಗುತ್ತಿದೆ.

ಪ್ರಧಾನಿ ಮಾತಿಗೆ ಧ್ವನಿಗೂಡಿಸಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌.ಎಸ್‌‍.ಎ) ಅಜಿತ್‌ ದೋವೆಲ್‌ ಅವರು, ಪಾಕಿಸ್ತಾನ ನಮ ದೇಶದ ಮೇಲೆ ದಾಳಿ ನಡೆಸುವ ದುಸ್ಸಾಹಸ ಮಾಡಿದರೆ, ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ನೇರ ಎಚ್ಚರಿಕೆ ಕೊಟ್ಟಿದ್ದಾರೆ.

ಪಾಕಿಸ್ತಾನಿಗಳು ಜಮು ಮತ್ತು ಕಾಶೀರದ ಪೂಂಚ್‌ ಜಿಲ್ಲೆಯಲ್ಲಿ ತನ್ನ ಹೇಡಿತನ ಮತ್ತು ಅಮಾನವೀಯತೆಯನ್ನು ಈಗಲೂ ಪ್ರದರ್ಶಿಸುತ್ತಿದ್ದಾರೆ. ಕಾಶೀರವನ್ನು ವಶಪಡಿಸಿಕೊಳ್ಳುವ ದುಷ್ಟ ಕನಸುಗಳನ್ನು ಹೊಂದಿರುವ ಪಾಕಿಸ್ತಾನಿಗಳು ಕಾಶೀರಿಗಳನ್ನು ಕೊಲ್ಲುತ್ತಿದ್ದಾರೆ. ಇದನ್ನು ಭಾರತ ಸಹಿಸುವುದಿಲ್ಲ. ಹೀಗೆ ಮುಂದುವರೆದರೆ ಮತ್ತಷ್ಟು ಭಯಾನಕತೆಯನ್ನು ಎದುರಿಸಬೇಕಾಗುತ್ತದೆ ಎಂದು ಭಾರತ ಕಟು ಎಚ್ಚರಿಕೆ ನೀಡಿದೆ.

ಕರಾವಳಿ ಕಾವಲು ಪಡೆಯಿಂದ ಕಟ್ಟೆಚ್ಚರ: ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಡೆಸುತ್ತಿದ್ದಂತೆ ದೇಶಾದ್ಯಂತ ಸಂಚಲನ ಮೂಡಿಸಿದೆ. ಕೇಂದ್ರದ ಕೋಸ್ಟ್‌ ಗಾರ್ಡ್‌ ಪೊಲೀಸ್‌‍ ಹಾಗೂ ಇತರ ಪಡೆಗಳನ್ನು ಸನ್ನದ್ಧರಾಗಿರುವಂತೆ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

ಸಾಮಾನ್ಯವಾಗಿ ಯುದ್ಧ ಸನ್ನಿವೇಶದಲ್ಲಿ ಭೂ ಮಾರ್ಗ, ವಾಯು ಮಾರ್ಗ, ಜಲ ಮಾರ್ಗಗಳ ಮೂಲಕ ದಾಳಿ ಮಾಡುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ದೇಶದ ಕರಾವಳಿ ಭಾಗದಲ್ಲಿ ವಿಶೇಷ ಕಟ್ಟೆಚ್ಚರ ವಹಿಸಲಾಗಿದೆ.

ಅರಬ್ಬೀ ಸಮುದ್ರದಲ್ಲಿ ತೀವ್ರ ನಿಗಾ ವಹಿಸಿರುವ ಕರಾವಳಿ ಕಾವಲು ಪಡೆ ಪೊಲೀಸರು, ಬಂದರು ತೀರದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಸಮುದ್ರ ಮಾರ್ಗದ ಮೀನುಗಾರಿಕಾ ಬೋಟ್‌, ಮೀನುಗಾರರ ತಪಾಸಣೆ, ದಾಖಲೆಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಮೀನುಗಾರರ ವಿಚಾರಣೆಯನ್ನು ಕೂಡ ನಡೆಸುತ್ತಿರುವ ಪೊಲೀಸರು ಅನುಮಾನಾಸ್ಪದ ಬೋಟ್‌ಗಳ ಮೇಲೆ ತೀವ್ರ ನಿಗಾ ವಹಿಸಿದ್ದಾರೆ.

ಅರಬ್ಬೀ ಸಮುದ್ರದಲ್ಲಿ ತೀವ್ರ ನಿಗಾ ವಹಿಸಿರುವ ಕರಾವಳಿ ಕಾವಲು ಪಡೆ ಪೊಲೀಸರು. ಕಡಲಿನಲ್ಲಿ ಗಸ್ತು ಹೆಚ್ಚಿಸಲಾಗಿದೆ. ಯುದ್ಧ ಸನ್ನಿವೇಶ ಎದುರಾದರೆ ನಾಗರಿಕರ ರಕ್ಷಣೆಗಾಗಿ ಸಿದ್ಧತೆ ನಡೆಸಲಾಗುತ್ತಿದೆ.

ಕೇಂದ್ರದ ಕೋಸ್ಟ್‌ ಗಾರ್ಡ್‌ ಕಡಲಿನಲ್ಲಿ 200 ನಾಟಿಕಲ್‌ ಗಸ್ತು ಹೆಚ್ಚಿಸಿದ್ದು, ಯಾವುದೇ ಅನಾಮಿಕ ಹಡಗು, ಬೋಟ್‌ಗಳ ಸುತ್ತಾಟದ ಮೇಲೆ ನಿಗಾ ಇರಿಸುವಂತೆ ಸೂಚನೆ ನೀಡಲಾಗಿದೆ. ಕಡಲ ಗಸ್ತು ಹಡಗು ವರಾಹ, ಸಕ್ಷಮ್‌‍, ಫಾಸ್ಟ್‌ ಪ್ಯಾಟ್ರೋಲ್‌ ವೆಸೆಲ್‌ಗಳಾದ ಅಮಾತ್ರ್ಯ, ರಾಜ್ದೂತ್‌ ಹಾಗೂ ಸಾವಿತ್ರಿಭಾಯಿ ಫುಲೆ, ಇಂಟರ್ಸೆಪ್ಟರ್‌ ಬೋಟ್‌ಗಳು, ಯಾವುದೇ ಸನ್ನಿವೇಶಗಳನ್ನು ಎದುರಿಸಲು ಸನ್ನದ್ಧವಾಗಿದೆ. ಸಮುದ್ರ ಮಾರ್ಗದ ಮೂಲಕ ಅಕ್ರಮ ಪ್ರವೇಶಕ್ಕೆ ತಡೆ ಹಾಗೂ ಮೀನುಗಾರರು, ನಾಗರಿಕರ ರಕ್ಷಣೆಯ ಕ್ಷಿಪ್ರ ಕಾರ್ಯಾಚರಣೆಗಳನ್ನು ಮಾಡಲು ಸಿದ್ಧಗೊಂಡಿದೆ.

ಭಾರತದ ಸೀಮಾ ರೇಖೆಯೊಳಗೆ ಯಾವುದೇ ಹಡಗು ಅಕ್ರಮ ಪ್ರವೇಶ ಮಾಡದಂತೆ ಅಥವಾ ಅನಾಮಿಕ ಹಡಗುಗಳು ಸುತ್ತಾಟ ನಡೆಸಿದರೆ ಕ್ಷಿಪ್ರ ಕಾರ್ಯಾಚರಣೆ ನಡೆಸುವಂತೆ ಸೂಚನೆ ನೀಡಲಾಗಿದೆ.

ಯುದ್ಧ ನಡೆದರೆ ಅಥವಾ ಪಾಕಿಸ್ತಾನ ದಾಳಿ ನಡೆಸಿದರೆ ಯಾವ ರೀತಿ ಪಡೆಗಳು ಕಾರ್ಯನಿರ್ವಹಿಸಬೇಕು ಎಂಬ ನಿಟ್ಟಿನಲ್ಲಿ ಎಸ್‌‍ಒಪಿ ತಯಾರಿಸಲು ಸೂಚನೆ ನೀಡಲಾಗಿದೆ. ಒಂದು ವೇಳೆ ಯುದ್ಧ ಪರಿಸ್ಥಿತಿ ಎದುರಾದರೆ ನಾಗರಿಕರ ರಕ್ಷಣೆ ಮತ್ತು ಸವಾಲುಗಳನ್ನು ಎದುರಿಸುವ ಬಗ್ಗೆ ಸ್ಥಳೀಯವಾಗಿ ಅಣಕು ಪ್ರದರ್ಶನ ನಡೆಸಬೇಕು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ನಿರ್ದೇಶನ ನೀಡಲಾಗಿದೆ.

RELATED ARTICLES

Latest News