Tuesday, September 17, 2024
Homeಬೆಂಗಳೂರುಮನೆಗಳ್ಳತನ ಮಾಡಿ ವಿಮಾನದಲ್ಲಿ ಪರಾರಿಯಾಗುತ್ತಿದ್ದ ಕುಖ್ಯಾತ ಕಳ್ಳರ ಬಂಧನ

ಮನೆಗಳ್ಳತನ ಮಾಡಿ ವಿಮಾನದಲ್ಲಿ ಪರಾರಿಯಾಗುತ್ತಿದ್ದ ಕುಖ್ಯಾತ ಕಳ್ಳರ ಬಂಧನ

ಬೆಂಗಳೂರು,ಜು.19- ವಿಮಾನ ಹಾಗೂ ರೈಲಿನಲ್ಲಿ ನಗರಕ್ಕೆ ಬಂದು ಲಾಡ್ಜ್ ನಲ್ಲಿ ಉಳಿದುಕೊಂಡು ಹಗಲು ವೇಳೆ ವಿವಿಧ ಪ್ರದೇಶಗಳಲ್ಲಿ ಸುತ್ತಾಡುತ್ತಾ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಹೋಗಿ ಮನೆಯಲ್ಲಿ ಅಳವಡಿಸಿದ್ದಂತಹ ಸಿಸಿಟಿವಿ ಸ್ಥಗಿತಗೊಳಿಸಿ ಹಣ, ಆಭರಣ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಪಶ್ಚಿಮ ಬಂಗಾಳದ ನಾಲ್ವರು ಕುಖ್ಯಾತ ಮನೆಗಳ್ಳರು ಸೇರಿದಂತೆ 6 ಮಂದಿಯನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ದುಬುಲ್ಯ ನಗರದ ಶುಬಿನ್‌ಕರ್‌, ಹರಿದಾಸ್‌‍, ಸೋಹನ್‌ ಹಾಗೂ ಪಿಂಕು ಮತ್ತು ಇವರುಗಳಿಂದ ಕಳವು ಮಾಲುಗಳನ್ನು ಸ್ವೀಕರಿಸುತ್ತಿದ್ದ ಇನ್ನುಬ್ಬರು ಆರೋಪಿಗಳಿಂದ 27 ಲಕ್ಷ ಮೌಲ್ಯ 452 ಗ್ರಾಂ. ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಗ್ಯಾಂಗ್‌ ಈ ಹಿಂದೆ ನಗರದಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದರು. ತದನಂತರದಲ್ಲಿ ತಮ ಊರಿಗೆ ಹಿಂದಿರುಗಿ ಅಲ್ಲಿ ನಾಲ್ಕೈದು ಮಂದಿಯ ತಂಡವನ್ನು ಮಾಡಿಕೊಂಡು ನಗರಕ್ಕೆ ವಿಮಾನದಲ್ಲಿ ಬಂದರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದುಕೊಳ್ಳುತ್ತಿದ್ದರು. ರೈಲಿನಲ್ಲಿ ಬಂದರೆ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಇಳಿದುಕೊಂಡು ಲಾಡ್‌್ಜಗಳಲ್ಲಿ ತಂಗಿದ್ದು, ಸುತ್ತಮುತ್ತಲ ಪ್ರದೇಶಗಳನ್ನು ಟಾರ್ಗೆಟ್‌ ಮಾಡಿ 15-20 ದಿನಗಳ ಕಾಲ ಕಳ್ಲತನ ಮಾಡಿ ಹಣ, ಆಭರಣ ಸಂಗ್ರಹಿಸಿಕೊಂಡು ಪಶ್ಚಿಮ ಬಂಗಾಳಕ್ಕೆ ಪರಾರಿಯಾಗುತ್ತಿದ್ದರು.

ಗೃಹಲಕ್ಷೀಲೇಔಟ್‌ನ ವಾಸಿಯೊಬ್ಬರು ಮನೆಯ ಬೀಗವನ್ನು ಹಾಕಿಕೊಂಡು ಅಮೆರಿಕಾ ದೇಶದಲ್ಲಿರುವ ಮಗಳ ಮನೆಗೆ ಹೋಗಿ 2 ದಿನದ ನಂತರ ತನ್ನ ಅಣ್ಣನಿಗೆ ಕರೆ ಮಾಡಿ ಮನೆಯ ಸಿಸಿ ಕ್ಯಾಮೆರಾ ಕಾರ್ಯನಿರ್ವಹಿಸುತ್ತಿಲ್ಲ ಮನೆಯ ಬಳಿ ಹೋಗಿ ನೋಡಿ ಎಂದು ತಿಳಿಸಿದ್ದರು.

ಅದರಂತೆ ಅವರ ಸಹೋದರ ಮನೆಯ ಬಳಿ ಹೋಗಿ ನೋಡಿದಾಗ ಕಳ್ಳರು ಮನೆಯ ಹಿಂಬಾಗಿಲ ಬೀಗವನ್ನು ಒಡೆದು, ಮನೆಯಲ್ಲಿದ್ದ ಸಿಸಿ ಕ್ಯಾಮೆರಾದ ವೈರ್‌ನ್ನು ಕತ್ತರಿಸಿ ಹಣ ಕಳವು ಮಾಡಿಕೊಂಡು ಹೋಗಿರುವುದು ಗೊತ್ತಾಗಿದೆ. ತಕ್ಷಣ ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕೃತ್ಯ ನಡೆದ ಸ್ಥಳ ಪರಿಶೀಲನೆ ನಡೆಸಿ, ವಿವಿಧ ಅಯಾಮಗಳಲ್ಲಿ ತನಿಖೆ ಕೈಗೊಂಡು, ಕೃತ್ಯವೆಸಗಿದ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಮೂವರು ಆರೋಪಿಗಳನ್ನು ಎಚ್‌.ಎಂ.ಟಿ ಲೇಔಟ್‌ನಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಇನ್ನೂ 3 ಕನ್ನಗಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ.

ಮತ್ತೊಬ್ಬ ಸಹ ಈ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಕಳುವು ಮಾಡಿರುವ ಚಿನ್ನಾಭರಣಗಳನ್ನು ಪಶ್ಚಿಮ ಬಂಗಾಳದಲ್ಲಿ ವಿಲೇವಾರಿ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಪೊಲೀಸರಿಗೆ ಹೇಳಿದ್ದಾರೆ. ತನಿಖೆಯನ್ನು ಮುಂದುವರೆಸಿದ ಪೊಲೀಸರು ಆರೋಪಿಗಳೊಂದಿಗೆ ಪಶ್ಚಿಮ ಬಂಗಾಳಕ್ಕೆ ಹೋಗಿ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ ದುಬುಲ್ಯ ನಗರದ ಎರಡು ಜ್ಯೂವೆಲರಿ ಅಂಗಡಿಯಲ್ಲಿ ಅಡವಿಟ್ಟಿದ್ದ ಒಟ್ಟು 452 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಿಂದ ಕಳವು ಮಾಲನ್ನು ಸ್ವೀಕರಿಸಿದ ಜ್ಯೂವೆಲರಿ ಅಂಗಡಿ ಮಾಲೀಕರಿಬ್ಬರನ್ನು ಸಹ ರಿಸೀವರ್‌ ಎಂದು ಪರಿಗಣಿಸಿ ವಶಕ್ಕೆ ಪಡೆದಿದ್ದಾರೆ.ಆರೋಪಿಗಳ ಬಂಧನದಿಂದ ಪೀಣ್ಯ ಪೊಲೀಸ್ ಠಾಣೆಯ-3 ಹಗಲು ಮತ್ತು ರಾತ್ರಿ
ಕನ್ನಗಳವು ಪ್ರಕರಣಗಳು ಪತ್ತೆಯಾಗಿರುತ್ತವೆ. ಆರೋಪಿಗಳು ಈ ಹಿಂದೆ ರಾಮಮೂರ್ತಿನಗರ ಪೊಲೀಸ್ ಠಾಣೆಯ-2 ಪ್ರಕರಣಗಳು, ಬಾಗಲಗುಂಟೆ ಪೊಲೀಸ್ ಠಾಣೆಯ-1 ಪ್ರಕರಣ, ಸೋಲದೇವನಹಳ್ಳಿ ಪೊಲೀಸ್ ಠಾಣೆಯ-1 ಪ್ರಕರಣ, ಬಾಣಸವಾಡಿ ಪೊಲೀಸ್ ಠಾಣೆಯ-1 ಪ್ರಕರಣ, ಇಂದಿರಾನಗರ ಪೊಲೀಸ್ ಠಾಣೆಯ-1 ಪ್ರಕರಣ, ಕೊಡಿಗೇಹಳ್ಳಿ ಪೊಲೀಸ್ ಠಾಣೆಯ-1 ಪ್ರಕರಣ ಸೇರಿದಂತೆ ಒಟ್ಟು 9 ಹಗಲು ಮತ್ತು ರಾತ್ರಿ ಕನ್ನ ಕಳವು ಪ್ರಕರಣಗಳಲ್ಲಿ ಬಂತರಾಗಿ ಹೊರಬಂದಿರುವುದು ತನಿಖೆಯಿಂದ ತಿಳಿದುಬಂದಿರುತ್ತದೆ. ಇನ್ಸ್ ಪೆಕ್ಟರ್‌ ಅನಿಲ್‌ಕುಮಾರ್‌ ಮತ್ತು ಸಿಬ್ಬಂದಿ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

RELATED ARTICLES

Latest News