Tuesday, July 1, 2025
Homeರಾಜಕೀಯ | Politicsಸಚಿವ ಪ್ರಿಯಾಂಕ್‌ ಖರ್ಗೆಗೆ ಅಶೋಕ್‌ ತಿರುಗೇಟು

ಸಚಿವ ಪ್ರಿಯಾಂಕ್‌ ಖರ್ಗೆಗೆ ಅಶೋಕ್‌ ತಿರುಗೇಟು

Ashok hits back at Minister Priyank Kharge

ಬೆಂಗಳೂರು,ಮೇ 15- ವಿಧಾನಸೌಧ ದಲ್ಲಿ ಪಾಕಿಸ್ತಾನ ಜಿಂದಾಬಾದ್‌ ಎಂದು ಘೋಷಣೆ ಕೂಗಿದ ದೇಶದೋಹಿಗಳು ನಿಮ ಕಾಂಗ್ರೆಸ್‌‍ ಕಚೇರಿಯಲ್ಲಿ ಐಟಿ ಸೆಲ್‌ ನಡೆಸುತ್ತಿದ್ದಾರೆ. ಮೊದಲು ಅವರನ್ನು ಹೆಡೆಮುರಿ ಕಟ್ಟಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಅವರು ಸಚಿವ ಪ್ರಿಯಾಂಕ್‌ ಖರ್ಗೆಗೆ ಬಹಿರಂಗ ಸವಾಲು ಹಾಕಿದ್ದಾರೆ.

ಈ ಕುರಿತು ತಮ ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ಸುಧೀರ್ಘ ಪೋಸ್ಟ್‌ ಮಾಡಿರುವ ಆಶೋಕ್‌ ಅವರು, ರಾಷ್ಟ್ರೀಯ ಭದ್ರತೆ ವಿಚಾರದ ಬಗ್ಗೆ ಚರ್ಚೆ ಮಾಡೋದಕ್ಕೆ ಸಂಸತ್‌ನಲ್ಲಿ ನಿಮ ಪಕ್ಷದ ದೊಡ್ಡ ದೊಡ್ಡ ನಾಯಕರು ಇದ್ದಾರೆ. ತಾವು ಮೊದಲು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್‌ ಎಂದು ಕೂಗಿದವರನ್ನ ಹುಡುಕಿ, ಅವರ ಹೆಡೆಮುರಿ ಕಟ್ಟಿ ಎಂದು ತಿರುಗೇಟು ನೀಡಿದ್ದಾರೆ.

ಜಮು ಮತ್ತು ಕಾಶೀರದ ಪಹಲ್ಗಾಮ್‌ನಲ್ಲಿ ಅಮಾಯಕ ಭಾರತೀಯ ಪ್ರವಾಸಿಗರನ್ನು ಕೊಂದ ಉಗ್ರರು ತರಬೇತಿ ಪಡೆದ ಭಯೋತ್ಪಾದಕ ಕೇಂದ್ರಗಳು, ಅಲ್ಲಿ ನೆಲೆಸಿದ್ದ ಅವರ 100ಕ್ಕೂ ಹೆಚ್ಚು ಜಿಹಾದಿ ಸಂಗಡಿಗರು, ಅವರ ತಲೆಗೆ ಮತಾಂಧತೆ ತುಂಬಿದ ಭಯೋತ್ಪಾದಕ ಸಂಘಟನೆಗಳ ನಾಯಕರು, ಅವರು ನಡೆಸುತ್ತಿದ್ದ ಮದರಸಾಗಳು, ಅಲ್ಲಿದ್ದ ಶಸಾ್ತ್ರಸ್ತ್ರ, ಸಂವಹನ ಉಪಕರಣಗಳು, ಅವರಿಗೆ ಬೆಂಬಲವಾಗಿ ನಿಂತಿದ್ದ ಪಾಕಿಸ್ತಾನದ ಸೇನಾ ವಾಯುನೆಲೆಗಳು, ಎಲ್ಲವನ್ನೂ ನಮ ಸೇನಾಪಡೆಗಳು ನೆಲಸಮ ಮಾಡಿವೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಆಶ್ರಯದಲ್ಲಿದ್ದ ಉಗ್ರರ ಸಾಮ್ರಾಜ್ಯವೇ ಧೂಳೀಪಟ ಆಗಿರುವಾಗ ಇನ್ನು ಅಲ್ಲಿ ತಲೆ ಎತ್ತಿದ ಹುಳು-ಹುಪ್ಪಟೆಗಳು ಉಳಿಯುತ್ತವೆಯೇ? ಪಹಲ್ಗಾಮ್‌ ದಾಳಿ ನಡೆಸಿದ ಉಗ್ರರು ಒಂದು ವೇಳೆ ಇನ್ನೂ ಬದುಕಿದ್ದರೆ, ಅವರು, ಪ್ರಪಂಚದ ಯಾವ ಭೂಭಾಗದಲ್ಲಿ, ಪಾತಾಳದಲ್ಲಿ ಅಡಗಿದ್ದರೂ ನಮ ಸೇನಾಪಡೆಗಳು, ರಕ್ಷಣಾ ಪಡೆಗಳು ಇಂದಲ್ಲ ನಾಳೆ ಹಿಡಿದೇ ಹಿಡಿಯುತ್ತಾರೆ. ನಮ ಸೇನಾಪಡೆಗಳ ಸಾಮರ್ಥ್ಯದ ಬಗ್ಗೆ ಇನ್ನೂ ಏನಾದರೂ ಅನುಮಾನ ಇದ್ದರೆ ದಯವಿಟ್ಟು ಒಮೆ ಪಾಕಿಸ್ತಾನದ ವಾಯು ನೆಲೆಗಳಿಗೆ, ಉಗ್ರರ ಅಡಗುತಾಣಗಳಿಗೆ ಭೇಟಿ ಕೊಟ್ಟು ಬನ್ನಿ ಎಂದು ಸವಾಲು ಎಸೆದಿದ್ದಾರೆ.

ರಾಷ್ಟ್ರೀಯ ಭದ್ರತೆ ವಿಚಾರ ನಮ ಸೇನಾಪಡೆಗಳ ಬಿಡಿ. ಆದರೆ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗಿದ ದೇಶದೋಹಿಗಳು ಎಲ್ಲಿದ್ದಾರೆ ಎಂದು ಮೊದಲು ಉತ್ತರಿಸಿ ಪುಣ್ಯ ಕಟ್ಟಿಕೊಳ್ಳಿ. ಫೋರೆನ್ಸಿಕ್‌ ವರದಿಯಲ್ಲಿ ಪಾಕಿಸ್ತಾನ ಜಿಂದಾಬಾದ್‌ ಎಂದು ಕೂಗಿದ್ದು ಸಾಬೀತಾದರೂ ಆ ದೇಶದೋಹಿಗಳನ್ನು ಸಮರ್ಥನೆ ಮಾಡಿಕೊಂಡರಲ್ಲ, ಬಹುಶಃ ಅವರು ನಿಮಗೆ ಬಹಳ ಬೇಕಾದವರು ಇರಬೇಕು.

ಅಂದು ಗೆದ್ದ ರಾಜ್ಯಸಭಾ ಸದಸ್ಯರು ನಿಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರ ಪರಮಾಪ್ತರು ಕೂಡ. ಆದ್ದರಿಂದ ಆ ದೇಶದೋಹಿಗಳು ಎಲ್ಲಿದ್ದಾರೆ ಎಂದು ಬಹುಶಃ ತಮಗೆ ಚೆನ್ನಾಗಿ ಗೊತ್ತಿರಲೇಬೇಕು. ಮೊದಲು ಆ ದೇಶದೋಹಿಗಳನ್ನು ಹಿಡಿಯಲು ಪೊಲೀಸರಿಗೆ ಸಹಾಯ ಮಾಡಿ ಅವರನ್ನು ಜೈಲಿಗೆ ಅಟ್ಟಿ ಎಂದು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Latest News