ಬೆಂಗಳೂರು,ಜ.6- ಪ್ರತಿಯೊಂದು ಇಲಾಖೆಯಲ್ಲೂ ವ್ಯವಸ್ಥಿತವಾಗಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಕಾಂಗ್ರೆಸ್ನದು ಶೇ.100ರಷ್ಟು ಕಮೀಷನ್ ಸರ್ಕಾರ ಎಂದು ಮಾಜಿ ಸಚಿವ, ಶಾಸಕ ಅಶ್ವಥ್ ನಾರಾಯಣ ಗಂಭೀರ ಆರೋಪ ಮಾಡಿದರು. ಈಗಿನದು 60% ಕಮೀಷನ್ ಸರ್ಕಾರ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ ಬೆನ್ನಲ್ಲೇ 100% ಕಮಿಷನ್ ಹೊಡೆಯುವುದರಲ್ಲಿ ಕಾಂಗ್ರೆಸಿಗರು ನಿಸ್ಸೀಮರು.
ಎಲ್ಲಾ ಇಲಾಖೆಗಳಲ್ಲೂ ಇದು ಜಗಜ್ಜಾಹಿರವಾಗಿದೆ ಎಂದು ದೂರಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಸುಖಾಸುಮನೆ ಸರ್ಕಾರದ ವಿರುದ್ಧ ಆರೋಪ ಮಾಡಿಲ್ಲ. ಹಿಟ್ ಅಂಡ್ ರನ್ ಮಾಡಿಲ್ಲ. ಎಲ್ಲಾ ಇಲಾಖೆಗಳಲ್ಲೂ ವ್ಯವಸ್ಥಿತವಾಗಿ ಕಮಿಷನ್ ನಡೆಯುತ್ತಲೇ ಇದೆ. ಇದರಲ್ಲಿ ಸುಳ್ಳೇನಿಲ್ಲ. ವಿಧಾನಸೌಧದ ಕಂಬಗಳು ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಿಂದ ಕೂಡಿವೆ. ಇದಕ್ಕಿಂತ ಬೇರೆ ಸಾಕ್ಷಿ ಏನು ಬೇಕಾಗಿದೆ ಎಂದು ಪ್ರಶ್ನಿಸಿದರು.
ಈ ಸರ್ಕಾರ ಆರಂಭದಿಂದಲೂ ಹಗರಣಗಳ ಮೇಲೆ ಹಗರಣ ನಡೆಸುತ್ತಿದೆ. ಬರೀ ಭ್ರಷ್ಟಾಚಾರ ಆಪಾದನೆಯಲ್ಲ. ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ವಾಲೀಕಿ ನಿಗಮದಲ್ಲಿ 100% ಭ್ರಷ್ಟಾಚಾರ ಅವರೇ ಒಪ್ಪಿಕೊಂಡಿದ್ದಾರೆ. ಚಂದ್ರಶೇಖರ್ ಆತಹತ್ಯೆಯಿಂದ ಈ ಪ್ರಕರಣ ಹೊರಗೆ ಬಂತು ಎಂದು ಹೇಳಿದರು.
ಪರಶುರಾಮ್ ಆತಹತ್ಯೆ ಮಾಡಿಕೊಂಡಿದ್ದೇಕೆ? ಎಸ್ಐ ಪೋಸ್ಟ್ಗೆ ವರ್ಗಾವಣೆಗೆ 35 ಲಕ್ಷ , ಇದರಲ್ಲೂ ಸಾಕ್ಷ್ಯ ಇದೆಯಲ್ಲವೇ? ಮುಡಾದಲ್ಲೂ ಸಾಕ್ಷಿ ಇದೆ. ಗುತ್ತಿಗೆದಾರ ಸಚಿನ್ ಆತಹತ್ಯೆ ಪ್ರಕರಣದಲ್ಲೂ ಸಾಕ್ಷಿ ಇದೆ.
ಬೆಳಗಾವಿಯಲ್ಲೂ ಸಚಿವರ ಪಿಎಯಿಂದ ಎಸ್ಡಿಎ ನೌಕರ ಆತಹತ್ಯೆ, ಅಬಕಾರಿ, ಆರೋಗ್ಯ ಇಲಾಖೆ ಗಳಲ್ಲೂ ಕಮೀಷನ್, ಭ್ರಷ್ಟಾಚಾರ ನಡೆಯತ್ತಿದೆ. ಸಚಿವರಿಗೂ ಕಮೀಷನ್ ಕೊಡಬೇಕು. ಏನಾದರೂ ಮಾಡಿ ಇವ್ರಂತೂ ಭಂಡರಾಗಿದ್ದಾರೆ, ನಾವಿರುವುದೇ ಅನ್ನುತ್ತಿದಾರೆ. ಒಂದು ಕಡೆ ಸಮಾಜದಲ್ಲಿ ಒಡಕು ಮೂಡಿಸುತ್ತಿದ್ದಾರೆ.
ಭ್ರಷ್ಟಾಚಾರ ಮಾಡುವುದಕ್ಕೂ ಜಾತಿ ಹೆಸರು ಬಳಸುತ್ತಿದ್ದಾರೆ. ಜಾತಿ ಹೆಸರಲ್ಲಿ ಅನುಕಂಪ ಪಡೆದು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ನಮ ಮೇಲೆ 40% ಆರೋಪ ಮಾಡಿದರು. ಲೋಕಾಯುಕ್ತ ಈಗ ನಮಮೇಲಿನ ಆರೋಪಕ್ಕೆ ಕ್ಲೀನ್ಚಿಟ್ ಕೊಟ್ಟಿದೆ. ನಮ ಸಿಎಂ ಮೇಲೆ ಪೇಸಿಎಂ, 40% ಆರೋಪ ವಡಿದ್ದಾರಲ್ಲ, ಯಾವ ದಾಖಲೆ ಕೊಟ್ಟರು ಇವರು? ಎಂದು ಪ್ರಶ್ನಿಸಿದರು.
ಈಗ ಇವರ ಮೇಲಿನ ಆರೋಪಗಳಿಗೆ ದಾಖಲೆ ಎಲ್ಲ ಇದೆ. ಲೈಸೆನ್ಸ್ ಪಡೆದು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಇವರು ಭಂಡ ಬಿದ್ದಿದ್ದಾರೆ, ಭಂಡರ ವಿರುದ್ಧ ಏನು ಹೋರಾಟ ಮಾಡುತ್ತೀರಿ ಹೇಳಿ?
ಬೆಂಗಳೂರಿನಲ್ಲಿ ಎಂಟು ತಿಂಗಳ ಮಗುವಿನಲ್ಲಿ ಹೆಚ್ಎಂಪಿವಿ ವೈರಸ್ ಪತ್ತೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದನ್ನ ನಾವು ಹೇಳಲು ಆಗಲ್ಲ.ವೈರಾಲಾಜಿ ಡಿಪಾರ್ಟೆಂಟ್ ಹೇಳಬೇಕು ಏನೇ ಮ್ಯುಟೇಷನ್ ಆಗಿದ್ರೂ ಪತ್ತೆ ಹಚ್ಚಿ ಸಂಬಂಧಿಸಿದ ಸಂಸ್ಥೆಗಳು ಹೇಳ್ತವೆ. ಸಂಬಂಧಿಸಿದ ಇಲಾಖೆಗಳು ಹೇಳಿಕೆ ಕೊಡಬೇಕು.
ನಾನು ಹೇಳೋದು ತಪ್ಪಾಗುತ್ತದೆ. ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು. ಎಲ್ಲದರಲ್ಲೂ ದುಡ್ಡು ಹೊಡೀತಿದ್ದಾರೆ. ದುಡ್ಡು ಹೊಡೀತಾರಲ್ಲ, ಒಳ್ಳೆಯ ಆಡಳಿತ ಕೊಡಿ ಅಂದರೆ ಅದೂ ಕೊಡುತ್ತಿಲ್ಲ. ಒಳ್ಳೆಯ ಚಿಕಿತ್ಸೆಯಾದರೂ ಕೊಡ್ರಪ್ಪ ಎಂದು ಸಲಹೆ ಮಾಡಿದರು.