ಹ್ಯಾಂಗ್‍ಝೌ,(ಚೀನಾ) ಸೆ 24 -ಏಷ್ಯನ್ ಗೇಮ್ಸ್‍ನಲ್ಲಿ ಭಾರತ ಪದಕ ಭೇಟೆ ಆರಂಭಿಸಿದ್ದು ಇಂದು 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಮಹಿಳಾ ಶೂಟರ್ ತಂಡ ಬೆಳ್ಳಿ ಪದಕ ಗೆದ್ದು ಬೀಗಿದೆ.ಅನುಭವಿ ಮೆಹುಲಿ ಘೋಷ್, ರಮಿತಾ ಜಿಂದಾಲ್ ಮತ್ತು ಆಶಿ ಚೌಕ್ಸೆ ಅವರ ಸಂಯೋಜಿತವಾಗಿ 1,886.0 ಅಂಕ ಗಳಿಸಿ ಬೆಳ್ಳಿ ಪದಕ ಗೆದ್ದರೆ ಆತಿಥೇಯ ಚೀನಾದ ಅದ್ಭುತ 1896.6 ಅಂಕಗಳೊಂದಿಗೆ ಚಿನ್ನ ಗೆದ್ದು ಹೊಸ ದಾಖಲೆ ಸೃಷ್ಠಿಸಿದೆ.
ಇನ್ನು ಏರ್ ರೈಫಲ್ ವೈಯಕ್ತಿಕ ಪದಕಕ್ಕಾಗಿ ಭಾರತ ಕೂಡ ಸಾಲಿನಲ್ಲಿದೆ ಮೆಹುಲಿ ಮತ್ತು ರಮಿತಾ ಕೂಡ ಎಂಟು ಶೂಟರ್‍ಗಳ ಫೈನಲ್‍ಗೆ ತಲುಪಿದ್ದಾರೆ ವಿಶೇಷವಾಗಿ ಕೇವಲ 19 ವರ್ಷದ ರಮಿತಾ 631.9 ಅಂಕಗಳನ್ನು ಗಳಿಸಿ ಎರಡನೇ ಸ್ಥಾನ ಗಳಿಸಿದರೆ, ಮೆಹುಲಿ 630.8 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-09-2023)
ಉಳಿದಂತೆ ಚೀನಾದ ಎಲ್ಲಾ ಮೂವರು ಶೂಟರ್‍ಗಳಾದ ಹಾನ್ ಜಿಯಾಯು, ಹುವಾಂಗ್ ಯುಟಿಂಗ್ ಮತ್ತು ವಾಂಗ್ ಝಿಲಿನ್ ಫೈನಲ್‍ಗೆ ಪ್ರವೇಶಿಸಿದರೆ, ದಕ್ಷಿಣ ಕೊರಿಯಾದ ಲೀ ಯುನ್‍ಸಿಯೊ, ಮಂಗೋಲಿಯಾದ ಗನ್ಹುಯಾಗ್ ನಂದಿನ್‍ಜಯಾ ಮತ್ತು ಚೈನೀಸ್ ತೈಪೆಯ ಚೆನ್ ಚಿ ಅವರು ಫೈನಲ್‍ಗೆ ಪ್ರವೇಶಿಸಿದ ಇತರ ಶೂಟರ್‍ಗಳಾಗಿದ್ದರು.
ಭಾರತದ ರೋವರ್ ಜೋಡಿಗೆ ಬೆಳ್ಳಿ
ಇನ್ನು ರೋಯಿಂಗ್‍ನಲ್ಲಿ (ದೋಣಿ ಸ್ಪರ್ಧೆ)ಭಾರತದ ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ ಅವರು ಪುರುಷರ ಲೈಟ್‍ವೇಟ್ ಡಬಲ್ಸ್ ಸ್ಕಲ್ಸ್ ಸ್ಪರ್ಧೆಯಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟರು.ಕೆಲವೇ ಸೆಕೆಂಡ್‍ನಲ್ಲಿ ಚಿನ್ನ ಕೈತಪ್ಪದೆ ಚೀನಾದ ಜುಂಜಿ ಫ್ಯಾನ್‍ಮತ್ತು ಮ್ಯಾನ್ ಸನ್, 6:23.16ಸೆಕೆಂಡುಗಳೊಂದಿಗೆ ಸ್ವರ್ಣ ಪಡೆದರೆ ಭಾರತದ ಜೋಡಿಯು 6:28.18 ಸೆಕೆಂಡ್‍ಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಗಳಿಸಿದರು.ಉಜ್ಬೇಕಿಸ್ತಾನ್ ಜೋಡಿ ಶಖ್ಜೋದ್ ನುರ್ಮಾಟೋವ್ ಮತ್ತು ಸೊಬಿರ್ಜಾನ್ ಸಫರೊಲಿಯೆವ್ ಅವರು 6:33.42 ಸೆಕೆಂಡ್‍ಗಳಲ್ಲಿ ಕಂಚಿನ ಪದಕ ಪಡೆದರು.