ಐಜ್ವಾಲ್, ಫೆ.12 (ಪಿಟಿಐ) ಮಿಜೋರಾಂನ ಚಂಫೈ ಜಿಲ್ಲೆಯ ಭಾರತ-ವ್ಯಾನಾರ್ ಗಡಿಯಲ್ಲಿ 173.73 ಕೋಟಿ ರೂಪಾಯಿ ಮೌಲ್ಯದ ಮೆಥಾಂಫೆಟಮೈನ್ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಸ್ಸಾಂ ರೈಫಲ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಬಂದ ಖಚಿತ ಸುಳಿವಿನ ಮೇರೆಗೆ ಅಸ್ಸಾಂ ರೈಫಲ್ಸ್ ಮತ್ತು ಮಿಜೋರಾಂ ಪೊಲೀಸರು ಜಂಟಿಯಾಗಿ ಫೆಬ್ರವರಿ 9 ರಂದು ಝೋಖಾವ್ತಾರ್‌ನ ಗಡಿ ದಾಟುವ ಸ್ಥಳದಲ್ಲಿ ಕೋಟ್ಯಂತರ ಮೌಲ್ಯದ ಡ್ರಗ್‌್ಸ ವಶಪಡಿಸಿಕೊಂಡರು ಎಂದು ಅದು ಹೇಳಿದೆ.
ಜಂಟಿ ತಂಡವು ಅಕ್ರಮ ಸಾಗಣೆಯನ್ನು ಸಾಗಿಸುತ್ತಿರುವ ಶಂಕಿತ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ತಡೆದಿದೆ ಎಂದು ಹೇಳಿಕೆಯಲ್ಲಿ ಮಾಹಿತಿ ನೀಡಲಾಗಿದೆ.ದಾಳಿ ವೇಳೆ ಡ್ರಗ್ಸ್ ಸಾಗಿಸುತ್ತಿದ್ದವರು ಸರಕುಗಳನ್ನು ಸ್ಥಳದಲ್ಲೇ ಬಿಟ್ಟು ಓಡಿಹೋದರು ಎನ್ನಲಾಗಿದೆ.
173.73 ಮೌಲ್ಯದ ಸರಕುಗಳನ್ನು ಹೆಚ್ಚಿನ ತನಿಖೆ ಮತ್ತು ಕಾನೂನು ಪ್ರಕ್ರಿಯೆಗಳಿಗಾಗಿ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.