Friday, November 22, 2024
Homeರಾಷ್ಟ್ರೀಯ | Nationalಅಸ್ಸಾಮಿ ಮುಸ್ಲಿಮರ ಆರ್ಥಿಕ ಮೌಲ್ಯಮಾಪನಕ್ಕೆ ನಿರ್ಧಾರ

ಅಸ್ಸಾಮಿ ಮುಸ್ಲಿಮರ ಆರ್ಥಿಕ ಮೌಲ್ಯಮಾಪನಕ್ಕೆ ನಿರ್ಧಾರ

ಗುವಾಹಟಿ, ಡಿ 9 (ಪಿಟಿಐ) ರಾಜ್ಯದ ಸ್ಥಳೀಯ ಅಸ್ಸಾಮಿ ಮುಸ್ಲಿಮರ ಸಾಮಾಜಿಕ-ಆರ್ಥಿಕ ಮೌಲ್ಯಮಾಪನವನ್ನು ನಡೆಸುವುದಾಗಿ ಅಸ್ಸಾಂ ಸರ್ಕಾರ ಹೇಳಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸ್ಥಳೀಯ ಅಸ್ಸಾಮಿ ಮುಸ್ಲಿಮರ ಸಾಮಾಜಿಕ-ಆರ್ಥಿಕ ಮೌಲ್ಯಮಾಪನವನ್ನು ಅಲ್ಪಸಂಖ್ಯಾತ ವ್ಯವಹಾರಗಳ ನಿರ್ದೇಶನಾಲಯ ಮತ್ತು ಚಾರ್ ಪ್ರದೇಶಗಳ ಮೂಲಕ ನಡೆಸಲಾಗುವುದು ಎಂದು ಶರ್ಮಾ ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.ಅಸ್ಸಾಂನ ಚಾರ್ ಪ್ರದೇಶಗಳ ಅಭಿವೃದ್ಧಿ ನಿರ್ದೇಶನಾಲಯವನ್ನು ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಚಾರ್ ಪ್ರದೇಶಗಳ ನಿರ್ದೇಶನಾಲಯ, ಅಸ್ಸಾಂ ಎಂದು ಮರುನಾಮಕರಣ ಮಾಡಲು ಸಭೆ ನಿರ್ಧರಿಸಿತು.

ಮಾಗ್ ಬಿಹು ಸಮಯದಲ್ಲಿ ಆಯೋಜಿಸಲಾಗುವ ಸಾಂಪ್ರದಾಯಿಕ ಎಮ್ಮೆ ಮತ್ತು ಗೂಳಿ ಕಾಳಗಗಳಿಗೆ ಅನುಮತಿ ನೀಡುವ ವಿವರವಾದ ಕಾರ್ಯವಿಧಾನ ಮತ್ತು ಪ್ರಮಾಣಿತ ಕಾರ್ಯ ವಿಧಾನ (ಎಸ್‍ಒಪಿ) ವಿಷಯಕ್ಕೆ ಕ್ಯಾಬಿನೆಟ್ ತಾತ್ವಿಕ ಒಪ್ಪಿಗೆ ನೀಡಿದೆ.

ಸೋನಿಯಾ ಗಾಂಧಿ ಹುಟ್ಟುಹಬ್ಬ, ಶುಭ ಕೋರಿದ ಮೋದಿ

ಎಸ್‍ಒಪಿಯು ಪ್ರಾಣಿಗಳ ಮೇಲೆ ಯಾವುದೇ ಉದ್ದೇಶಪೂರ್ವಕ ಚಿತ್ರಹಿಂಸೆ ಅಥವಾ ಕ್ರೌರ್ಯವನ್ನು ನಡೆಸುವುದಿಲ್ಲ ಮತ್ತು ಶತಮಾನಗಳ-ಹಳೆಯ ಅಸ್ಸಾಮಿ ಸಾಂಸ್ಕøತಿಕ ಸಂಪ್ರದಾಯದ ಅವಿಭಾಜ್ಯ ಅಂಗವಾದ ವಾರ್ಷಿಕ ಎಮ್ಮೆ ಕಾದಾಟಗಳ ಸಮಯದಲ್ಲಿ ಸಂಘಟಕರು ಅವುಗಳ ಯೋಗಕ್ಷೇಮವನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ಗುರಿಯನ್ನು ಹೊಂದಿದೆ.

RELATED ARTICLES

Latest News