Wednesday, December 4, 2024
Homeರಾಷ್ಟ್ರೀಯ | Nationalಸ್ವರ್ಣಮಂದಿರದಲ್ಲಿ ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖಬೀರ್‌ ಸಿಂಗ್‌ ಬಾದಲ್‌ ಮೇಲೆ ಫೈರಿಂಗ್

ಸ್ವರ್ಣಮಂದಿರದಲ್ಲಿ ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖಬೀರ್‌ ಸಿಂಗ್‌ ಬಾದಲ್‌ ಮೇಲೆ ಫೈರಿಂಗ್

Assassination Attempt On Sukhbir Badal During His Penance At Golden Temple

ಅಮೃತಸರ,ಡಿ.4- ಪಂಜಾಬ್‌ನ ಅಮೃತಸರದ ಸ್ವರ್ಣಮಂದಿರ ಮುಂಭಾಗ ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖಬೀರ್‌ ಸಿಂಗ್‌ ಬಾದಲ್‌ ಮೇಲೆ ಗುಂಡಿನ ದಾಳಿ ನಡೆದಿದ್ದು, ಭದ್ರತಾ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಅಪಾಯ ಸ್ವಲ್ಪದರಲ್ಲೇ ತಪ್ಪಿದೆ.

ಮಾಜಿ ಭಯೋತ್ಪಾದಕ ನಾರಾಯಣ್‌ ಸಿಂಗ್‌ ಚೌಡಾ ಎಂಬಾತ ಸುಖಬೀರ್‌ ಸಿಂಗ್‌ ಬಾದಲ್‌ ಅವರನ್ನು ಗುಂಡಿಕ್ಕಿ ಕೊಲ್ಲಲು ಪ್ರಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.ಸುಖಬೀರ್‌ ಸಿಂಗ್‌ ಬಾದಲ್‌ ವೀಲ್ಚೇರ್‌ನಲ್ಲಿ ಕುಳಿತಿದ್ದಾಗ ಈ ದಾಳಿ ನಡೆದಿದ್ದು, ಆದರೆ, ಸುಖಬೀರ್‌ ಸಿಂಗ್‌ ಬಾದಲ್‌ ಜೊತೆಗಿದ್ದ ಜನರು ಗುಂಡು ಹಾರಿಸಲು ಯತ್ನಿಸಿದ ವ್ಯಕ್ತಿಯನ್ನು ತಕ್ಷಣವೇ ಹಿಡಿದಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.

ಏತನಧ್ಯೆ, ಭದ್ರತೆ ಒದಗಿಸಲು ಪಂಜಾಬ್‌ ಸರ್ಕಾರ ವಿಫಲವಾಗಿದೆ ಎಂದು ಆಕಾಲಿ ದಳ ಆರೋಪಿಸಿದೆ. ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖಬೀರ್‌ ಸಿಂಗ್‌ ಬಾದಲ್‌ ಅಕಾಲಿ ಸರ್ಕಾರದ ಅವಧಿಯಲ್ಲಿ ಡೇರಾ ಮುಖ್ಯಸ್ಥ ರಾಮ್‌ ರಹೀಮ್‌ಗೆ ಕ್ಷಮಾದಾನ ನೀಡುವಲ್ಲಿ ತಮ ಪಾತ್ರವಿತ್ತು ಎಂದು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ. ಸುಖಬೀರ್‌ ಸಿಂಗ್‌ ಬಾದಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಸಿಂಗ್‌ ಸಾಹಿಬಾನ್‌ಗಳ ಸಭೆಯು ಅಕಾಲ್‌ ತಖ್‌್ತನಲ್ಲಿ ನಡೆಯಿತು. ಎರಡು ತಿಂಗಳ ಹಿಂದೆ ಅಕಾಲ್‌ ತಖ್ತ್ ಅವರು ಸುಖಬೀರ್‌ ಸಿಂಗ್‌ ಬಾದಲ್‌ ಅವರನ್ನು ತಂಖೈಯಾ (ಧಾರ್ಮಿಕ ಅಪರಾಧಿ) ಎಂದು ಘೋಷಿಸಿದ್ದರು.

ಸುಖಬೀರ್‌ ಸಿಂಗ್‌ ಬಾದಲ್‌ ಹಾಗೂ 2015ರ ಅಕಾಲಿ ಸರ್ಕಾರದ ಇತರೆ ಕ್ಯಾಬಿನೆಟ್‌ ಸದಸ್ಯರಿಗೆ ಗೋಲ್ಡನ್‌ ಟೆಂಪಲ್‌‍ನಲ್ಲಿ ಶೌಚಾಲಯ ಹಾಗೂ ಪಾತ್ರೆ ತೊಳೆಯುವ ಶಿಕ್ಷೆ ವಿಧಿಸಲಾಗಿದೆ. ಅಕಾಲ್‌ ತಖ್ತ್ ಜಥೇದಾರ್‌ ಗಿಯಾನಿ ರಘುಬೀರ್‌ ಸಿಂಗ್‌ ಅವರು ಶಿರೋಮಣಿ ಅಕಾಲಿದಳದ ಕಾರ್ಯಕಾರಿ ಸಮಿತಿಗೆ ಮೂರು ದಿನಗಳಲ್ಲಿ ಸುಖಬೀರ್‌ ಸಿಂಗ್‌ ಬಾದಲ್‌ ಅವರ ರಾಜೀನಾಮೆಯನ್ನು ಅಂಗೀಕರಿಸಿ ಅಕಲ್‌ ತಖ್‌್ತ ಸಾಹಿಬ್‌ಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಎಡಿಸಿಪಿ ಹರ್ಪಾಲ್‌ ಸಿಂಗ್‌ ಅವರು ಮಾತನಾಡಿ, ಇಲ್ಲಿ ಭಾರೀ ಭದ್ರತಾ ವ್ಯವಸ್ಥೆಗಳಿವೆ. ನಾನು ಬೆಳಿಗ್ಗೆ ಏಳು ಗಂಟೆಗೆ ಇಲ್ಲಿಗೆ ಬಂದೆ. ನಾರಾಯಣ್‌ ಸಿಂಗ್‌ ಚೌರಾ (ದಾಳಿಕೋರ) ನಿನ್ನೆಯೂ ಇಲ್ಲಿಗೆ ಬಂದಿದ್ದ. ಈ ಹಿಂದೆ ಆತ ನಮನ ಸಲ್ಲಿಸಲು ಈ ಗುರುಘರ್ಗೆ ಹೋಗಿದ್ದ. ಇದಾದ ಬಳಿಕ ಹೊರಗೆ ಬಂದು ಗುಂಡು ಹಾರಿಸಿದ್ದಾನೆ. ಆದರೆ ನಮ ಭದ್ರತಾ ಸಿಬ್ಬಂದಿ ಅಲ್ಲಿದ್ದ ಕಾರಣ ನೇರವಾಗಿ ಗುಂಡು ಹಾರಿಸಲು ಅವನಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಹೆಚ್ಚಿನ ಅಪಾಯ ಸಂಭವಿಸಿಲ್ಲ ಎಂದು ಹೇಳಿದ್ದಾರೆ.

ಅಕಲ್‌ ತಖ್ತ್ ಸಾಹಿಬ್‌ ಅವರು ನೀಡಿದ ಶಿಕ್ಷೆಯನ್ನು ಎದುರಿಸಲು ಮಾಜಿ ಉಪ ಮುಖ್ಯಮಂತ್ರಿ ಸುಖಬೀರ್‌ ಸಿಂಗ್‌ ಬಾದಲ್‌ ಅವರು ಗೋಲ್ಡನ್‌ ಟೆಂಪಲ್‌ ಸಂಕೀರ್ಣವನ್ನು ತಲುಪಿದ್ದರು. ನಿನ್ನೆಯೂ ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಸ್ವರ್ಣಮಂದಿರದಲ್ಲಿ ತಂಗಿದ್ದರು. ಸುಮಾರು ಒಂದು ಗಂಟೆ ಕಾಲ ಗಡಿಯಾರದ ಗೋಪುರದ ಹೊರಗೆ ಸೇವಕನ ಬಟ್ಟೆಯನ್ನು ಧರಿಸಿ ಈಟಿಯನ್ನು ಹಿಡಿದು ಕಾವಲು ಕಾಯುತ್ತಿದ್ದರು.

ಇದಾದ ನಂತರ ಒಂದು ಗಂಟೆ ಕಾಲ ಕೀರ್ತನೆಯನ್ನು ಆಲಿಸಿ ಕೊನೆಗೆ ಬಿಸಾಡಿದ ಪಾತ್ರೆಗಳನ್ನು ಸ್ವಚ್ಛಗೊಳಿಸಿದ್ದರು.ಅವರಲ್ಲದೆ, ಮಾಜಿ ಸಚಿವರಾದ ಬಿಕ್ರಮ್‌ ಸಿಂಗ್‌ ಮಜಿಥಿಯಾ ಮತ್ತು ಸುಖದೇವ್‌ ಸಿಂಗ್‌ ಧಿಂಡ್ಸಾ ಕೂಡ ಕೊಳಕು ಪಾತ್ರೆಗಳನ್ನು ಸ್ವಚ್ಛಗೊಳಿಸಿದರು. ಪಕ್ಷದ ಮುಖಂಡರಾದ ಡಾ.ದಲ್ಜಿತ್‌ ಸಿಂಗ್‌ ಚೀಮಾ, ಸುರ್ಜಿತ್‌ ಸಿಂಗ್‌ ರಖ್ರಾ, ಪ್ರೇಮ್‌ ಸಿಂಗ್‌ ಚಂದುಮಜ್ರಾ, ಮಹೇಶ್‌ ಇಂದರ್‌ ಗ್ರೆವಾಲ್‌ ಶೌಚಾಲಯವನ್ನು ಸ್ವಚ್ಛಗೊಳಿಸಿದರು.

ಸುಖಬೀರ್‌ ಸಿಂಗ್‌ ಬಾದಲ್‌ ಅವರಿಗೆ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಶಿಕ್ಷೆಯನ್ನು ನೀಡಲಾಗಿತ್ತು. ಆದರೆ ಅವರ ಕಾಲಿನ ಮೂಳೆ ಮುರಿತದ ಕಾರಣದಿಂದ ಅವರಿಗೆ ವಿನಾಯಿತಿ ನೀಡಲಾಗಿತ್ತು.

ಇತ್ತೀಚೆಗಷ್ಟೇ, ಅಕಾಲಿ ದಳದ ನಾಯಕನಿಗೆ 2015 ರಲ್ಲಿ ಗುರು ಗ್ರಂಥ ಸಾಹಿಬ್‌ನ ತ್ಯಾಗದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ ಅವರನ್ನು ಬೆಂಬಲಿಸಿದ್ದಕ್ಕಾಗಿ ಅಕಾಲ್‌ ತಖ್ತ್ ಶಿಕ್ಷೆಯನ್ನು ಘೋಷಿಸಿತು. ಅವರು ಪ್ರತಿದಿನ ಒಂದು ಗಂಟೆ ದೇವಸ್ಥಾನದಲ್ಲಿ ದ್ವಾರಪಾಲಕರಾಗಿ ಕೆಲಸ ಮಾಡಬೇಕಾಗುತ್ತದೆ. ಶೌಚಾಲಯ ತೊಳೆಯುವುದು, ಪಾತ್ರೆ ತೊಳೆಯುವುದು ಸೇರಿ ಹಲವು ಕೆಲಸಗಳನ್ನು ಮಾಡಬೇಕಾಗುತ್ತದೆ.

RELATED ARTICLES

Latest News