Sunday, September 8, 2024
Homeಅಂತಾರಾಷ್ಟ್ರೀಯ | International4 ಅಧ್ಯಕ್ಷರ ಹತ್ಯೆ, ಹಲವರ ಮೇಲೂ ದಾಳಿ : ಇಲ್ಲಿದೆ ಅಮೆರಿಕದ 'ಶೂಟಿಂಗ್' ಇತಿಹಾಸ

4 ಅಧ್ಯಕ್ಷರ ಹತ್ಯೆ, ಹಲವರ ಮೇಲೂ ದಾಳಿ : ಇಲ್ಲಿದೆ ಅಮೆರಿಕದ ‘ಶೂಟಿಂಗ್’ ಇತಿಹಾಸ

ವಾಷಿಂಗ್ಟನ್‌,ಜು.14– ಇದುವರೆಗೂ ಅಮೆರಿಕದ ನಾಲ್ವರು ಅಧ್ಯಕ್ಷರುಗಳು ಹತ್ಯೆಗೀಡಾಗಿದ್ದಾರೆ. ಅದೇ ರೀತಿ ಇತರ ಹಲವು ಅಧ್ಯಕ್ಷರುಗಳ ಮೇಲೆ ಗುಂಡಿನ ದಾಳಿ ನಡೆದಿರುವುದು ಇತಿಹಾಸದಲ್ಲಿ ದಾಖಲಾಗಿದೆ.

1865 ಏ.14ರಂದು ಜಾನ್‌ ವಿಲ್‌್ಕ್ಸ ಬೂತ್‌ ಎಂಬಾತ ಅಂದಿನ ಅಮೆರಿಕ ಅಧ್ಯಕ್ಷ ಅಬ್ರಾಹಂ ಲಿಂಕನ್‌ ಅವರನ್ನು ಹತ್ಯೆ ಮಾಡಿದ್ದ. ಲಿಂಕನ್‌ ಮತ್ತು ಅವರ ಪತ್ನಿ ಮೇರಿ ಟಾಡ್‌ ಲಿಂಕನ್‌ ಅವರು ವಾಷಿಂಗ್ಟನ್‌ನ ಫೋರ್ಡ್‌ ಥಿಯೇಟರ್‌ನಲ್ಲಿ ಹಾಸ್ಯಪ್ರದರ್ಶನಕ್ಕೆ ಹಾಜರಾಗಿದ್ದ ಸಂದರ್ಭದಲ್ಲಿ ಲಿಂಕನ್‌ ತಲೆಯ ಹಿಂಭಾಗಕ್ಕೆ ಗುಂಡು ಹಾರಿಸಲಾಗಿತ್ತು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು ಯಾವುದೆ ಪ್ರಯೋಜನವಾಗಿರಲಿಲ್ಲ.

ಗಾರ್ಫೀಲ್ಡ್‌‍ ಅಧಿಕಾರ ವಹಿಸಿಕೊಂಡ ಆರು ತಿಂಗಳ ನಂತರ ಹತ್ಯೆಗೀಡಾದ ಎರಡನೇ ಅಧ್ಯಕ್ಷರು ಎಂದು ಗುರುತಿಸಲಾಗಿದೆ. ಅವರು ಜುಲೈ 2, 1881 ರಂದು ನ್ಯೂ ಇಂಗ್ಲೆಂಡ್‌ಗೆ ರೈಲನ್ನು ಹಿಡಿಯಲು ವಾಷಿಂಗ್ಟನ್‌ನ ರೈಲು ನಿಲ್ದಾಣದ ಮೂಲಕ ನಡೆದುಕೊಂಡು ಹೋಗುತ್ತಿದ್ದಾಗ ಚಾರ್ಲ್ಸ್‌ ಗೈಟೊ ಎಂಬಾತ ಗುಂಡು ಹಾರಿಸಿ ಹತ್ಯೆ ಮಾಡಿದ್ದ.

ಅಮೆರಿಕದ 25ನೇ ಅಧ್ಯಕ್ಷ ವಿಲಿಯಮ್‌ ಮೆಕಿನ್ಲೆ 1901 ರ ಸೆ.6ರಂದು ನ್ಯೂಯಾರ್ಕ್‌ನ ಬಫಲೋದಲ್ಲಿ ಭಾಷಣ ಮಾಡುತ್ತಿದ್ದಾಗ ದುಷ್ಕರ್ಮಿ ಗುಂಡು ಹಾರಿಸಿದ್ದ. ಮೆಕಿನ್ಲೆ ಚೇತರಿಸಿಕೊಳ್ಳುತ್ತಾರೆ ಎಂದು ವೈದ್ಯರು ನಿರೀಕ್ಷಿಸಿದ್ದರು ಆದರೆ ಅವರು ಕೆಲ ದಿನಗಳ ನಂತರ ಸಾವನ್ನಪ್ಪಿದ್ದರು.

ಅದೇ ರೀತಿ 32 ನೇ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದಾಗ ಅಂದಿನ ಅಧ್ಯಕ್ಷ ಫ್ರಾಂಕ್ಲಿನ್‌ ಡಿ ರೂಸ್ವೆಲ್‌್ಟ ಅವರ ಮೇಲೂ ದಾಳಿ ನಡೆಸಲಾಗಿತ್ತು. ಆದರೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು ಹಾಗೂ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದ ಗೈಸೆಪ್ಪೆ ಜಂಗರಾ ಅವರಿಗೆ ಮರಣದಂಡನೆ ವಿಧಿಸಲಾಗಿತ್ತು.

ಇನ್ನು 33 ನೇ ಅಧ್ಯಕ್ಷ ಹ್ಯಾರಿ ಎಸ್‌‍. ಟ್ರೂಮನ್‌ ಅವರು ಶ್ವೇತಭವನದಲ್ಲಿ ತಂಗಿದ್ದಾಗ ಒಳ ನುಗ್ಗಿದ ಇಬ್ಬರು ಬಂದೂಕುಧಾರಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಆಗ ಪೊಲೀಸರು ಆಕ್ರಮಣಕಾರರಲ್ಲಿ ಒಬ್ಬರನ್ನು ಹತ್ಯೆ ಮಾಡಿ ಮತ್ತೊಬ್ಬ ಆರೋಪಿ ಆಸ್ಕರ್‌ ಕ್ಯಾಲಜೋ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆರೋಪಿಗೆ ಮರಣದಂಡನೆ ವಿಧಿಸಲಾಗಿತ್ತು. ಆದರೆ ಟ್ರೂಮನ್‌ ಅವರೇ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದ್ದರು. ನಂತರದ ಅಮೆರಿಕದ ಅಧ್ಯಕ್ಷ ಜಿಮಿ ಕಾರ್ಟರ್‌ ಅವರನ್ನು 1979 ರಲ್ಲಿ ಜೈಲಿನಿಂದ ಬಿಡುಗಡೆ ಮಾಡಿದರು.

ಅಮೆರಿಕದ ಅತ್ಯಂತ ಯಶಸ್ವಿ ಅಧ್ಯಕ್ಷ ಎಂದೇ ಗುರುತಿಸಲಾಗಿದ್ದ 35ನೇ ಅಧ್ಯಕ್ಷ ಜಾನ್‌ ಎಫ್‌ ಕೆನಡಿ ಅವರು ಡಲ್ಲಾಸ್‌‍ಗೆ ಭೇಟಿ ನೀಡುತ್ತಿದ್ದಾಗ ಶಸ್ತ್ರಸಜ್ಜಿತ ಗುಂಪು ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿತ್ತು.

ಇನ್ನು 38ನೇ ಅಧ್ಯಕ್ಷ ಜೆರಾಲ್ಡ್‌‍ ಫೋರ್ಡ್‌ ಅವರ ಮೇಲೆ ಎರಡು ಬಾರಿ ಹತ್ಯೆ ಯತ್ನ ಮಾಡಲಾಗಿದ್ದರೂ ಅವರು ಎರಡು ಬಾರಿಯೂ ಪ್ರಾಣಾಪಾಯದಿಂದ ಪಾರಾಗಿದ್ದರು. ವಾಷಿಂಗ್ಟನ್‌ ಡಿಸಿಯಲ್ಲಿ ಭಾಷಣ ಮಾಡುತ್ತಿದ್ದ 40ನೇ ಅಧ್ಯಕ್ಷ ರೊನಾಲ್‌್ಡ ರೇಗನ್‌ ಅವರ ಮೇಲೂ ದಾಳಿ ಯತ್ನ ನಡೆಸಲಾಗಿತ್ತು.

ಇನ್ನು 2005ರಲ್ಲಿ 43ನೇ ಅಧ್ಯಕ್ಷ ಜಾರ್ಜ್‌ ಬುಷ್‌ ಅವರ ಮೇಲೆ ಗ್ರೆನೆಡ್‌ ಎಸೆಯಲಾಗಿತ್ತು. ಇನ್ನು 1968ರಲ್ಲಿ ಜಾನ್‌ ಎಫ್‌ ಕೆನಡಿ ಅವರ ಸಹೋದರರಾಗಿದ್ದ ರಾಬರ್ಟ್‌ ಎಫ್‌ ಕೆನಡಿ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಇದೀಗ ಒಂದು ಬಾರಿ ಅಮೆರಿಕ ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ಡೊನಾಲ್‌್ಡ ಟ್ರಂಪ್‌ ಅವರ ಮೇಲೂ ಹತ್ಯಯತ್ನ ನಡೆದಿದೆ.

RELATED ARTICLES

Latest News