ಕಾಬೂಲ್,ನ.3-ಅಫ್ಘಾನಿಸ್ತಾನದಲ್ಲಿ ಮಧ್ಯರಾತ್ರಿ 6.3 ತೀವ್ರತೆಯ ಭೂಕಂಪನ ಸಂಭವಿಸಿದ್ದು ಸುಮಾರು 20 ಮಂದಿ ಸಾವನ್ನಪ್ಪಿ,320ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯ ಕಾಲಮಾನ ಮಧ್ಯರಾತ್ರಿ 1 ಗಂಟೆಗೆ ಭೂಕಂಪದ ಸಂಭವಿಸಿದೆ ಎಂದು ಅಮೆರಿಕದ ಜಿಯೋಲಾಜಿಕಲ್ ಸರ್ವೆಹೇಳೆದೆ.
ಅಫ್ಘಾನಿಸ್ತಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯು ಸಾವುನೋವುಗಳು ಮತ್ತು ಹಾನಿಗಳ ಮೌಲ್ಯಮಾಪನಗಳನ್ನು ನಂತರ ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ಹೇಳಿದೆ. ಸಾಮಾಜಿಕ ಮಾಧ್ಯಮದ ವೀಡಿಯೊದಿಂದ ಪಡೆದ ಚಿತ್ರದಲ್ಲಿ ಅಫ್ಘಾನಿಸ್ತಾನದ ಮಜರ್ ಇ ಷರೀಫ್‌ನಲ್ಲಿ ಭೂಕಂಪದ ನಂತರ ಬ್ಲೂ ಮಸೀದಿ ,ಕಟ್ಟಡಗಳು ಕುಸಿದಿದೆ.
ಅಫ್ಘಾನಿಸ್ತಾನದ ಅತಿದೊಡ್ಡ ನಗರ ಭೂಕಂಪನದಿಂದ ತತ್ತರಿಸಿದ್ದು ಭೂಕಂಪನದ ಕೇಮದ್ರ ಬಿಂದು ಖುಲ್ ಪಟ್ಟಣದ ಬಳಿ ಪತ್ತೆಯಾಗಿದೆ ಭೂಮಿಯ 23 ಕಿಲೋಮೀಟರ್ ಆಳದಲ್ಲಿ ಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರತಿಳಿಸಿದೆ.
