ಮೊಗಾದಿಶು,ಆ.4- ಸೋಮಾಲಿಯಾದ ರಾಜಧಾನಿ ಮೊಗಾದಿಶುವಿನ ಬೀಚ್ ಹೋಟೆಲ್‌ನಲ್ಲಿ ಆತಾಹುತಿ ಬಾಂಬ್ ದಾಳಿಗೆ 32 ಮಂದಿ ಬಲಿಯಾಗಿ, 63 ಜನರು ಗಾಯಗೊಂಡಿದ್ದಾರೆ. ಅಲ್-ಖೈದಾದ ಪೂರ್ವ ಆಫ್ರಿಕಾದ ಅಂಗಸಂಸ್ಥೆ ಅಲ್-ಶಬಾಬ್ ತನ್ನ ರೇಡಿಯೋ ಸ್ಟೇಷನ್ ಮೂಲಕ ತನ್ನ ಹೋರಾಟಗಾರರು ಈ ದಾಳಿ ನಡೆಸಿದ್ದಾರೆ ಎಂದು ಹೇಳಿಕೊಂಡಿದೆ.
ದಾಳಿಯಲ್ಲಿ ಓರ್ವ ಯೋಧ ಸಾವನ್ನಪ್ಪಿದ್ದು, ಉಳಿದವರು ನಾಗರಿಕರು ಎಂದು ಪೊಲೀಸ್ ವಕ್ತಾರ ಮೇಜರ್ ಅಬ್ದಿಫತಾ ಆದಾನ್ ಹಸನ್ ಪತ್ರಕರ್ತರಿಗೆ ತಿಳಿಸಿದ್ದಾರೆ. ದಾಳಿಯಲ್ಲಿ ಮತ್ತೊಬ್ಬ ಯೋಧ ಕೂಡ ಗಾಯಗೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪ್ರತ್ಯಕ್ಷದರ್ಶಿಗಳು ಸ್ಫೋಟದ ನಂತರ ಗುಂಡಿನ ದಾಳಿಯೂ ನಡೆದಿರುವುದಾಗಿ ತಿಳಿಸಿದ್ದಾರೆ.
ಸೊಮಾಲಿಯಾದಲ್ಲಿ ಅಂತಾರಾಷ್ಟ್ರೀಯ ಬೆಂಬಲ ಪಡೆದಿರುವ ಫೆಡರಲ್ ಸರ್ಕಾರದ ವಿರುದ್ಧ ಬಂಡೆದ್ದಿರುವ ಅಲ್‌ಖೈದಾದ ಜತೆ ಸಂಪರ್ಕವಿರುವ ಅಲ್-ಶದಾಬ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.
ಓರ್ವ ಪ್ರತ್ಯಕ್ಷದರ್ಶಿ ಮೊಹಮದ್ ಮೊಲಿದ್ ಎಂಬುವವರು, ಆ ವ್ಯಕ್ತಿ ಹೋಟೆಲ್‌ನನ್ನು ತನ್ನನ್ನು ತಾನು ಸ್ಫೋಟಿಸಿಕೊಳ್ಳುವುದಕ್ಕೂ ಮುನ್ನ ಸ್ಫೋಟಕ ಉಡುಪನ್ನು ಧರಿಸಿದ ದಾಳಿಕೋರನನ್ನು ತಾನು ನೋಡಿದ್ದಾಗಿ ವಿವರಿಸಿದ್ದಾರೆ.
ಹೋಟೆಲ್‌ನಲ್ಲಿ ಅವರೊಂದಿಗಿದ್ದ ಕೆಲವು ಸ್ನೇಹಿತರು ಸಾವನ್ನಪ್ಪಿದ್ದಾರೆ ಮತ್ತು ಇತರರು ಗಾಯಗೊಂಡಿದ್ದಾರೆ. ಕಳೆದ ವರ್ಷ ನಡೆದ ದಾಳಿಯಲ್ಲಿ 9 ಮಂದಿ ಸಾವನ್ನಪ್ಪಿದ್ದರು. ಅಲ್ ಶಬಾಬ್ ದಕ್ಷಿಣ ಮತ್ತು ಮಧ್ಯ ಸೊಮಾಲಿಯಾದ ಭಾಗಗಳನ್ನು ನಿಯಂತ್ರಿಸುತ್ತಿದೆ.