ವಿಯೆಟ್ನಾಂ,ಜು.20-ಇಲ್ಲಿನ ಕ್ವಾಂಗ್ ನಿನ್ಸ್ ಪ್ರಾಂತ್ಯದ ಹಾ ಲಾಂಗ್ ಕೊಲ್ಲಿಯಲ್ಲಿ ಪ್ರವಾಸಿ ಹಡಗು ಮಗುಚಿ 34 ಜನರು ಸಾವನ್ನಪ್ಪಿದ್ದಾರೆ. ಹಡಗಿನಲ್ಲಿ 48 ಪ್ರವಾಸಿಗರು ಮತ್ತು 5 ಸಿಬ್ಬಂದಿ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಲವಾದ ಗಾಳಿಯಿಂದಾಗಿ ಹಡಗು ಮಗುಚಿದೆ ಎಂಊ ಪ್ರಾಥಮಿಕ ವರದಿ ತಿಳಿಸಿದೆ. ರಕ್ಷಣಾ ಕಾರ್ಯಚರಣೆ ವೇಳೆ ಹಲವರನ್ನು ರಕ್ಷಿಸಲಾಗಿದೆ. 34 ಮಂದಿ ಶವ ಪತ್ತೆಯಾಗಿದ್ದು ಇನ್ನು ಎಂಟು ಮಂದಿ ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸಾಧ್ಯವಾದಷ್ಟು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಲಭ್ಯವಿರುವ ಎಲ್ಲಾ ಸಿಬ್ಬಂದಿ ಮತ್ತು ಸಂಪನ್ಮೂಲಗಳನ್ನು ಸಜ್ಜುಗೊಳಿಸುವಂತೆ ಅವರು ರಾಷ್ಟ್ರೀಯ ರಕ್ಷಣಾ ಸಚಿವಾಲಯಕ್ಕೆ ಪ್ರಧಾನಿ ಫಾಮ್ ಸೂಚನೆ ನೀಡಿದ್ದಾರೆ. ಘಟನೆಯಲ್ಲಿ ಮಕ್ಕಳು ಮಹಿಳೆಯರು ಹೆಚ್ಚಾಗಿ ಸಾವನ್ನಪ್ಪಿದ್ದಾರೆ.
- ಮಾವೋವಾದಿಗಳ ಗುಂಡೇಟಿಗೆ ಇಬ್ಬರು ಯೋಧರು ಬಲಿ
- ನಕಲಿ ಹಣಕಾಸು ಸಂಸ್ಥೆಯಿಂದ ಹೂಡಿಕೆದಾರರಿಗೆ 93 ಕೋಟಿ ವಂಚನೆ
- ಕ್ರಿಕೆಟಿಗ ಶಿಖರ್ ಧವನ್ಗೆ ಇಡಿ ಸಮನ್ಸ್
- ಜಿಎಸ್ಟಿ ಕಡಿತಗೊಳಿಸಿ ರಾಷ್ಟ್ರಕ್ಕೆ ಐತಿಹಾಸಿಕ ದೀಪಾವಳಿ ಉಡುಗೊರೆ: ಕುಮಾರಸ್ವಾಮಿ
- ಜಿಎಸ್ಟಿ ಸರಳೀಕರಣ ಬಡವರ ಪರ ; ಚಂದ್ರಬಾಬು ನಾಯ್ಡು