ಸಿಧಿ ( ಮಧ್ಯ ಪ್ರದೇಶ), ಮಾ.10-ಟ್ರಕ್ ಮತ್ತು ಟೆಂಪೊ ಟ್ರಾವಲರ್ ನಡುವೆ ಡಿಕ್ಕಿಯಾಗಿ ಇಂದು ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ ಏಳು ಜನರು ಸಾವನ್ನಪ್ಪಿರುವ ಘಟನೆ ಸಿಧಿ-ಬಪ್ರಿ ರಸ್ತೆಯ ಉಪ್ಪಿ ಪೆಟ್ರೋಲ್ ಪಂಪ್ ಬಳಿ ಸಂಭವಿಸಿದೆ.
ಬೆಳಗಿನ ಜಾವ 2.30 ರ ಸುಮಾರಿಗೆ ಈ ಘಟನೆ ನಡೆದಿದೆ ಇದೇ ಘಟನೆಯಲ್ಲಿ ಘಟನೆಯಲ್ಲಿ 14 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಉಪ ವರಿಷ್ಠಾಧಿಕಾರಿ ಗಾಯತ್ರಿ ತಿವಾರಿ ತಿಳಿಸಿದ್ದಾರೆ.
ಸಿಧಿಯಿಂದ ಬಹಿಗೆ ಟ್ರಕ್ ಹೋಗುವಾಗ ಟ್ಯಾಕ್ಸಿಟೆಂಪೊ ಟ್ರಾವಲರ್ ಮೈಹಾರ್ ಕಡೆಗೆ ಬರತ್ತಿದ್ದಾಗ ವಾಹನಗಳು ಮುಖಾಮುಖಿ ಡಿಕ್ಕಿಯಾಗಿದೆ ಎಂದು ಅವರು ಹೇಳಿದರು. ಅಪಘಾತದಲ್ಲಿ ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದ ಏಳು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗಾಯಾಳುಗಳಲ್ಲಿ ಒಂಬತ್ತು ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ನೆರೆಯ ರೇವಾಕ್ಕೆ ಕಳುಹಿಸಲಾಗಿದೆ ಮತ್ತು ಉಳಿದವರನ್ನು ಸಿಧಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಟ್ರಕ್ ಚಾಲಕನನ್ನು ಬಂಧಿಸಲಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.