Sunday, January 19, 2025
Homeಅಂತಾರಾಷ್ಟ್ರೀಯ | Internationalನೈಜೀರಿಯಾದಲ್ಲಿ ಭಾರೀ ಅಗ್ನಿ ಅವಘಡ : ಗ್ಯಾಸೋಲಿನ್‌ ಟ್ಯಾಂಕರ್‌ ಸ್ಪೋಟದಲ್ಲಿ 70 ಜನ ಸಾವು

ನೈಜೀರಿಯಾದಲ್ಲಿ ಭಾರೀ ಅಗ್ನಿ ಅವಘಡ : ಗ್ಯಾಸೋಲಿನ್‌ ಟ್ಯಾಂಕರ್‌ ಸ್ಪೋಟದಲ್ಲಿ 70 ಜನ ಸಾವು

At least 70 killed in central Nigeria after fuel tanker explodes

ಅಬುಜ,ಜ.19- ನೈಜೀರಿಯಾದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು ಗ್ಯಾಸೋಲಿನ್‌ ಟ್ಯಾಂಕರ್‌ ಏಕಾಏಕಿ ಸ್ಫೋಟಗೊಂಡು 70 ಜನರು ಸಾವನ್ನಪ್ಪಿದ್ದರೆ 56ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸ್ಫೋಟದ ನಂತರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೀತಿ ಉಂಟಾಗಿದೆ. ರಾಷ್ಟ್ರೀಯ ತುರ್ತು ನಿರ್ವಹಣಾ ಏಜೆನ್ಸಿ ಮುಖ್ಯಸ್ಥ ಹುಸೇನಿ ಇಸಾ ಈ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಇಂಧನ ವರ್ಗಾವಣೆ ವೇಳೆ ಅಪಘಾತ ಸಂಭವಿಸಿದೆ. ಒಂದು ಟ್ಯಾಂಕರ್‌ನಿಂದ ಇನ್ನೊಂದು ಟ್ಯಾಂಕರ್‌ಗೆ ಪೆಟ್ರೋಲ್‌ ವರ್ಗಾವಣೆಯಾಗುತ್ತಿತ್ತು. ಆಗ ಟ್ಯಾಂಕರ್‌ನಲ್ಲಿ ಸ್ಫೋಟ ಸಂಭವಿಸಿದೆ. ಅನಿಲವನ್ನು ವರ್ಗಾಯಿಸುವ ಜನರನ್ನು ಜೀವಂತವಾಗಿ ಸುಟ್ಟು ಹೋಗಿದ್ದಾರೆ.

ನೈಜರ್‌ನ ಗವರ್ನರ್‌ ಮೊಹಮದ್‌ ಬಾಗೊ ಹೇಳಿಕೆಯಲ್ಲಿ ರಾಜ್ಯದ ಡಿಕ್ಕೊ ಪ್ರದೇಶದ ಹಲವಾರು ನಿವಾಸಿಗಳು ಗ್ಯಾಸೋಲಿನ್‌ ಟ್ಯಾಂಕರ್ನಿಂದ ಭಾರಿ ಸ್ಫೋಟದಿಂದ ಗಾಯಗೊಂಡಿದ್ದಾರೆ , ಬಾಗೋ ಅನೇಕರು ಸುಟ್ಟು ಕರಕಲಾದರು. ಟ್ಯಾಂಕರ್‌ ನಿಂದ ದೂರ ಇದ್ದವರು ಎಂದು ತಿಳಿಸಿದರು. ಅವರು ಗಾಯದಿಂದ ಪಾರಾಗಿದ್ದಾರೆ. ಇದೊಂದು ದುರದೃಷ್ಟಕರ ಘಟನೆ ಎಂದರು.

ಜನರು ಹತ್ತಿರ ಹೋಗದಂತೆ ತಡೆಯಲಾಗುತ್ತಿದೆ. ಇದರ ಹೊರತಾಗಿಯೂ ಇಂಧನ ಖರೀದಿಸಲು ಜನಸಾಗರವೇ ನೆರೆದಿತ್ತು. ಅಗ್ನಿಶಾಮಕ ದಳ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ ಎಂದು ಸುಕ್ವಾಮ್‌ ತಿಳಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ನೈಜೀರ್‌ನ ಜನನಿಬಿಡ ಹೆದ್ದಾರಿಯಲ್ಲಿ ಪೆಟ್ರೋಲ್‌ ತುಂಬಿದ ಟ್ಯಾಂಕರ್‌ ಸ್ಫೋಟಗೊಂಡಿತ್ತು.

ಇದರಲ್ಲಿ ಕನಿಷ್ಠ 48 ಜನರು ಸಾವನ್ನಪ್ಪಿದ್ದಾರೆ. ಅನೇಕ ನೈಜೀರಿಯನ್ನರು ಈ ಘಟನೆಗಳಿಗೆ ನಡೆಯುತ್ತಿರುವ ಆರ್ಥಿಕ ಸಂಕಷ್ಟವನ್ನು ದೂಷಿಸುತ್ತಿದ್ದಾರೆ. ಇಂತಹ ಅನಾಹುತಗಳನ್ನು ತಡೆಯಲು ಕಟ್ಟುನಿಟ್ಟಿನ ಸಂಚಾರ ನಿಯಮಗಳನ್ನು ಪಾಲಿಸುವಂತೆ ಆಗ್ರಹಿಸುತ್ತಿದ್ದಾರೆ. ಆಫ್ರಿಕಾದ ಅತಿದೊಡ್ಡ ತೈಲ ಉತ್ಪಾದಿಸುವ ದೇಶದಲ್ಲಿ ಇಂತಹ ಅಪಘಾತಗಳು ಸಾಮಾನ್ಯವಾಗಿವೆ. ಇದರಿಂದಾಗಿ ದೇಶದಲ್ಲಿ ಹತ್ತಾರು ಜನರು ಸಾಯುತ್ತಿದ್ದಾರೆ.

RELATED ARTICLES

Latest News