ಅರಿಯಲೂರು ಅ.9-ಪಟಾಕಿ ತಯಾರಿಕ ಘಟಕದಲ್ಲಿ ಸಂಭವಿಸಿದ ಬೆಂಕಿಯಲ್ಲಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿರುವ ಘಟನೆ ವೀರಗಳೂರು ಗ್ರಾಮದಲ್ಲಿ ನಡೆದಿದೆ.ಗಾಯಗೊಂಡಿರುವ 14ರಲ್ಲಿ ಐವರನ್ನು ತಂಜಾವೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಬೆಳಿಗ್ಗೆ ಈ ಘಟನೆ ನಡೆದಿದ್ದು ಪಟಾಕಿ ತಯಾರಿಕ ಘಟಕ,ಹಾಗು ಗೋದಾನಿನಲ್ಲಿ ಶೇಕರಿಸಿದ್ದ ಅಪಾರ ಪ್ರಮಾಣದ ರಾಸಾಯಿನಿಕ ವಸ್ತು ಹಾಗು ಪಟಾಕಿಗಳು ಬೆಂಕಿಗಾಹುತಿಯಾಗಿದೆ.
ದಟ್ಟ ಹೊಗೆ ಆವರಿಸಿ ಸ್ತಳೀತರನ್ನು ಬೆಚ್ಚಿಬೀಳಿಸಿದೆ.ಪಟಾಕಿಗಳನ್ನು ಸರಿಯಾಗಿ ಶೇಕರಿಸದೆ ಇದ್ದದ್ದರಿಂದ ಬಿಸಿ ಹವೆಗೆ ರಾಸಾಯನಿಕ ಪ್ರಕ್ರಿಯೆ ಉಂಟಾಗಿ ಬೆಂಕಿ ಹೊತ್ತಿಕೊಳ್ಳಲು ಕಾರಣ ಎನ್ನಲಾಗಿದೆ.ಮೃತರ ದೇಹಗಳು ಗುರುತು ಸಿಗದಷ್ಟು ಸುಟ್ಟುಹೋಗಿದೆ.ಹಲವು ವಾಹನಗಳು ಕೂಡ ಹಾನಿಯಾಗಿವೆ .
ಟಾಸ್ ಗೆದ್ದು ಬ್ಯಾಟ್ ಮಾಡಿದ್ದೇ ಆಸ್ಟ್ರೇಲಿಯಾ ಸೋಲಿಗೆ ಕಾರಣ
ಜಿಲ್ಲಾಕಾರಿ ಮೇರಿ ವರ್ಣ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. 7 ಅಗ್ನಿಶಾಮಕ ವಾಹನಗಳು ಆಗಮಿಸಿ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮೃತರಿಗೆ ಸಂತಾಪ ಸೂಚಿಸಿ ,ಮೃತರ ಕುಟುಂಬಗಳಿಗೆ ತಲಾ 3 ಲಕ್ಷ ರೂ,ಗಂಭೀರವಾಗಿ ಗಾಯಗೊಂಡವರಿಗೆ ಒಂದು ಲಕ್ಷ ರೂ. ಹಾಗೂ ಸರಳವಾಗಿ ಗಾಯಗೊಂಡವರಿಗೆ 50,000 ರೂ. ಪರಿಹಾರ ಘೋಷಿಸಿದರು.
ರಕ್ಷಣಾ ಮತ್ತು ಪರಿಹಾರ ಚಟುವಟಿಕೆಗಳನ್ನು ತ್ವರಿತಗೊಳಿಸಲು ತನ್ನ ಸಂಪುಟದ ಸಹೋದ್ಯೋಗಿಗಳಾದ ಎಸ್ ಎಸ್ ಶಿವಶಂಕರ್ ಮತ್ತು ಸಿವಿ ಗಣೇಶನ್ ಅವರನ್ನು ನಿಯೋಜಿಸಿರುವುದಾಗಿ ಸ್ಟಾಲಿನ್ ಹೇಳಿದ್ದಾರೆ.