ನವದೆಹಲಿ,ಸೆ.21– ರಾಷ್ಟ್ರ ರಾಜಧಾನಿ ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಎಎಪಿ ನಾಯಕಿ ಅತಿಶಿ ಸಿಂಗ್ ಅವರು ಇಂದು ಸಂಜೆ ಅಧಿಕಾರ ಸ್ವೀಕರಿಸಿದರು. ಸಂಜೆ 4.30ಕ್ಕೆ ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅತಿಶಿ ಸಿಂಗ್ ಅವರಿಗೆ ದೆಹಲಿಯ ಲೆಫ್ಟಿನೆಂಟ್ ಗೌರ್ನರ್ ಜನರಲ್ ವಿನಯ್‌ಕುಮಾರ್ ಸಕ್ಸೇನಾ ಅಧಿಕಾರ ಗೌಪ್ಯತೆ ಬೋಧಿಸಲಿದ್ದಾರೆ.
ಅತಿಶಿ ಸಿಂಗ್ ದೆಹಲಿಯ ಮೂರನೇ ಹಾಗೂ ಅತ್ಯಂತ ಚಿಕ್ಕವಯಸ್ಸಿನ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಅವರ ಜೊತೆಗೆ ಶಾಸಕರಾದ ಗೋಪಾಲ್ ರೈ, ಕೈಲಾಶ್ ಗೆಹ್ಲೋಟ್ ಮತ್ತು ಸೌರವ್ ಭಾರದ್ವಾಜ್ ಹಾಗೂ ಇಮ್ರಾನ್ ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಸುಲ್ತಾನಪುರ ಮುಜ್ರಾದ್‌ನಿಂದ ಮೊದಲಬಾರಿಗೆ ಶಾಸಕರಾಗಿರುವ ದಲಿತ ನಾಯಕ ಮುಖೇಶ್ ಅಹ್ಲಾವತ್ ಕೂಡ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ದೆಹಲಿ ಮುಖ್ಯಮಂತ್ರಿಯಾಗಿದ್ದ ಅರವಿಂದ ಕ್ರೇಜಿವಾಲ್ ಅವರು ತಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ನಡೆದ ಶಾಸಕಾಂಗ ಸಭೆಯಲ್ಲಿ ಅತಿಶಿ ಸಿಂಗ್ ಅವರನ್ನು ಸರ್ವಾನುಮತದಿಂದ ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದರು.
ಹಿಂದಿನ ಕ್ರೇಜಿವಾಲ್ ಸಂಪುಟದಲ್ಲಿ ಅವರು ಮಹತ್ವದ ಹಣಕಾಸು , ಕಂದಾಯ, ಲೋಕೋಪಯೋಗಿ, ವಿದ್ಯುತ್, ಶಿಕ್ಷಣ ಸೇರಿದಂತೆ ಒಟ್ಟು 13 ಖಾತೆಗಳನ್ನು ನಿಭಾಯಿಸಿದ ಕೀರ್ತಿ ಸಲ್ಲುತ್ತದೆ. ಕ್ರೇಜಿವಾಲ್ ಅವರ ನಂಬಿಕಸ್ಥರಲ್ಲಿ ಒಬ್ಬರಾಗಿರುವ ಅತಿಶಿ ಸಿಂಗ್ ಭವಿಷ್ಯದ ನಾಯಕಿ ಎಂದೇ ಗುರುತಿಸಿಕೊಂಡವರು.
ಇನ್ನು ದೆಹಲಿ ಅಬಕಾರಿ ಪರಿಷ್ಕರಣಾ ನೀತಿಯಲ್ಲಿ ಆರೋಪಿ ಸ್ಥಾನದಲ್ಲಿದ್ದ ಕ್ರೇಜಿವಾಲ್ ತಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ನಾನು ನನಗೆ ದೆಹಲಿಯ ಜನತೆ ಮತ್ತೆ ಆಶೀರ್ವಾದ ಮಾಡುವವರೆಗೂ ನಾನು ಈ ಸ್ಥಾನದಲ್ಲಿ ಕೂರುವುದಿಲ್ಲ. ಪ್ರಾಮಾಣಿಕನಾಗಿದ್ದರೆ ನನಗೆ ಜನತೆ ಆಶೀರ್ವಾದ ಮಾಡಲಿ ಎಂದು ಸೂಚನೆ ನೀಡಿದ್ದರು.