Monday, October 13, 2025
Homeರಾಜ್ಯಶಾಸಕ ಮುನಿರತ್ನ ಮೇಲೆ ಹಲ್ಲೆ : ಕಾಂಗ್ರೆಸ್‌‍ನ ಗೂಂಡಾಗಿರಿ ಅನಾವರಣಗೊಂಡಿದೆ ಎಂದ ಆರ್‌.ಅಶೋಕ್‌

ಶಾಸಕ ಮುನಿರತ್ನ ಮೇಲೆ ಹಲ್ಲೆ : ಕಾಂಗ್ರೆಸ್‌‍ನ ಗೂಂಡಾಗಿರಿ ಅನಾವರಣಗೊಂಡಿದೆ ಎಂದ ಆರ್‌.ಅಶೋಕ್‌

Attack on MLA Munirathna: R Ashok Reaction

ಬೆಂಗಳೂರು, ಅ.12– ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರ ಮೇಲೆ ಹಲ್ಲೆ ನಡೆಸುವ ಮೂಲಕ ಕಾಂಗ್ರೆಸ್‌‍ ಪಕ್ಷದ ಗೂಂಡಾಗಿರಿ ಸಂಸ್ಕೃತಿ ಅನಾವರಣಗೊಂಡಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶಾಸಕರಿಗೆ ಗೌರವ ಕೊಡದೇ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.ಎರಡು ವರ್ಷ ಮಾತ್ರ ನೀವು ಅಧಿಕಾರದಲ್ಲಿ ಇರುತ್ತೀರಿ. ಏಕೆ ಗೂಂಡಾಗಿರಿ ಮಾಡುತ್ತೀರಾ .? ಇದು ನಿಮ ಕಾಂಗ್ರೆಸ್‌‍ ಪಕ್ಷದ ಸಂಸ್ಕೃತಿ ಹಾಗೂ ಗೂಂಡಾಗಿರಿ ಪ್ರವತ್ತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.

ಮುನಿರತ್ನ ಅವರ ಮೇಲೆ ಆಗಿರುವ ಹಲ್ಲೆ , ಪ್ರಜಾಪ್ರಭುತ್ವದ ಮೇಲೆ ಆಗಿರುವ ಹಲ್ಲೆ. ನಾವು ಮುನಿರತ್ನಗೆ ಬೆಂಬಲ ನೀಡಲಿದ್ದೇವೆ. ಪೊಲೀಸರು ಅವರಿಗೆ ರಕ್ಷಣೆ ಕೊಡಬೇಕು. ಕಾಂಗ್ರೆಸ್‌‍ ಔಟ್‌ ಗೋಯಿಂಗ್‌ ಪಾರ್ಟಿ ಎಂದು ಜನ ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್‌‍ ಮುಕ್ತ ಭಾರತ ಮಾಡುವುದೇ ನಮ ಅಜೆಂಡಾ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರ ನಡೆಯನ್ನು ಖಂಡಿಸಿದ ಅವರು, ಇದು ಸರ್ಕಾರದ ಹಣದಲ್ಲಿ ಮಾಡುತ್ತಿರುವ ಕಾರ್ಯಕ್ರಮ. ಕಾಂಗ್ರೆಸ್‌‍ ಪಕ್ಷದ ಕಾರ್ಯಕ್ರಮ ಅಲ್ಲ. ಸ್ಥಳೀಯ ಶಾಸಕರು ಮತ್ತು ಸಂಸದರಿಗೆ ಆಹ್ವಾನ ನೀಡದೇ ಅವಮಾನ ಮಾಡುವ ಮೂಲಕ ಸಂವಿಧಾನಕ್ಕೆ ಅಗೌರವ ತೋರಿದ್ದಾರೆ ಎಂದು ಟೀಕಿಸಿದರು.

ಆರ್‌ ಎಸ್‌‍ ಎಸ್‌‍ ನಿಷೇಧ ಮಾಡುವ ಬಗ್ಗೆ ಕಾಂಗ್ರೆಸ್‌‍ ನಾಯಕರ ಹೇಳಿಕೆ ವಿಚಾರವಾಗಿ, ಆರ್‌.ಎಸ್‌‍ ಎಸ್‌‍ ನಿಷೇಧಿಸಲು ಮೂರು ಬಾರಿ ಪ್ರಯತ್ನ ಮಾಡಿದ್ದರು. ಮಾಜಿ ಪ್ರಧಾನಿ ಇಂಧಿರಾ ಗಾಂಧಿ ಕೈಯಲ್ಲೇ ಆಗಲಿಲ್ಲ. ಇನ್ನು ಇಂತಹವರಿಂದ ಇದು ಸಾಧ್ಯವೇ? ಎಂದು ಅಶೋಕ್‌ ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗಹ ಸಚಿವ ಅಮಿತ್‌ ಶಾ ಸೇರಿದಂತೆ ದೇಶದ ಬಹುತೇಕ ರಾಜ್ಯಪಾಲರು ಆರ್‌ ಎಸ್‌‍ ಎಸ್‌‍ ಹಿನ್ನಲೆಯಿಂದಲೇ ಬಂದವರು. ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಕೂಡಾ ಹೀಗೆಯೇ ಲಘುವಾಗಿ ಮಾತನಾಡುತ್ತಾರೆ ಎಂದರೆ ಅವರಿಗೆ ಭಾರತದ ಇತಿಹಾಸ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಇಂತಹವರಿಗೆ ಆರ್‌ ಎಸ್‌‍ ಎಸ್‌‍ ಬಗ್ಗೆ ಮಾತಾಡುವ ಅರ್ಹತೆ ಇಲ್ಲ. ಅದು ರಾಷ್ಟ್ರ ಪ್ರೇಮ ಕೊಡುವ ಸಂಸ್ಥೆ. ಇವರಿಗೆ ರಾಷ್ಟ್ರಪ್ರೇಮ ಇಲ್ಲ, ಕಾಂಗ್ರೆಸ್‌‍ ಗೆ ವೋಟಿನ ಪ್ರೇಮ ಮಾತ್ರ ಇದೆ ಎಂದು ಕುಹಕವಾಡಿದರು. ಇದಕ್ಕೂ ಮುನ್ನ ಆರ್‌ಎಸ್‌‍ಎಸ್‌‍ ಗೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಬನಶಂಕರಿಯಲ್ಲಿ ನಡೆದ ಆರ್‌ಎಸ್‌‍ಎಸ್‌‍ ಪಥ ಸಂಚಲನದಲ್ಲಿ ಗಣವೇಶಧಾರಿಗಳಾಗಿ ಪಥ ಸಂಚಲನದಲ್ಲಿ ಭಾಗವಹಿಸಿದ ಅಶೋಕ್‌ ಮತ್ತು ಪಿ ಸಿ ಮೋಹನ್‌ ಮತ್ತಿತರರು ಭಾಗಿಯಾಗಿದ್ದರು.

ನಮಸ್ತೇ ಸದಾ ವತ್ಸಲೇ ಹಾಡು ಹಾಡಿದ ಆರ್‌ ಅಶೋಕ್‌‍, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶತಮಾನೋತ್ಸವ ಆಚರಿಸುತ್ತಿದೆ. ಇವತ್ತು ಶತಮಾನೋತ್ಸವ ಹಿನ್ನೆಲೆ ಪಥಸಂಚಲನ ಮಾಡಿ ಭಾರತಮಾತೆಗೆ ಗೌರವ ಸಲ್ಲಿಸುತ್ತೇವೆ. ದೇಶದ ವಿಚಾರವಾಗಿ, ಸಾಮಾಜಿಕವಾಗಿ ಸಮಸ್ಯೆ ಅಂತಾ ಬಂದಾಗ ಸಂಘ ಮುಂದೆ ನಿಂತಿದೆ. ಆರೆಸ್ಸೆಸ್‌‍ನವನು ಎಂದು ಹೇಳಿಕೊಳ್ಳಲು ನನಗೆ ಹೆಮೆ ಆಗುತ್ತದೆ. ನಾನು ಹಲವು ಹೋರಾಟಗಳಲ್ಲಿ ಭಾಗಿಯಾಗ್ದೆಿ ಎಂದು ಅಶೋಕ್‌ ಹಿಂದಿನ ಘಟನೆಯನ್ನು ನೆನಪಿಸಿಕೊಂಡರು.

RELATED ARTICLES

Latest News