Wednesday, December 25, 2024
Homeರಾಜ್ಯಅತುಲ್ ಸುಭಾಷ್ ಪ್ರಕರಣ : ಪತ್ನಿ ಹಾಗೂಕುಟುಂಬದವರಿಗಾಗಿ ಪೊಲೀಸರ ಶೋಧ

ಅತುಲ್ ಸುಭಾಷ್ ಪ್ರಕರಣ : ಪತ್ನಿ ಹಾಗೂಕುಟುಂಬದವರಿಗಾಗಿ ಪೊಲೀಸರ ಶೋಧ

Atul Subhash case: Police search for wife and family

ಬೆಂಗಳೂರು,ಡಿ.14- ಸಾಫ್ಟ್ ವೇರ್ ಇಂಜಿನಿಯರ್ ಅತುಲ್ ಸುಭಾಷ್ ಅವರ ಪತ್ನಿ, ಅತ್ತೆ, ಬಾಮೈದ ಹಾಗೂ ಚಿಕ್ಕಮಾವನಿಗಾಗಿ ವೈಟ್ ಫೀಲ್ಡ್ ವಿಭಾಗದ ಪೊಲೀಸರ ನಾಲ್ಕು ತಂಡಗಳು ಉತ್ತರಭಾರತದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ಈ ನಾಲ್ವರು ಉತ್ತರಪ್ರದೇಶ ಬಿಟ್ಟು ವಾಸಸ್ಥಳವನ್ನು ಬದಲಾವಣೆ ಮಾಡಿ ಓಡಾಡುತ್ತಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ಆ ನಿಟ್ಟಿನಲ್ಲಿ ಉತ್ತರಪ್ರದೇಶ ಸೇರಿದಂತೆ ದೆಹಲಿ, ಮಧ್ಯಪ್ರದೇಶ, ಮಹಾರಾಷ್ಟ್ರ, ಹರಿಯಾಣ ಹಾಗೂ ಇನ್ನಿತರ ರಾಜ್ಯಗಳಲ್ಲಿ ಶೋಧ ನಡೆಸುತ್ತಿದ್ದು, ಇದುವರೆಗೂ ಇವರುಗಳು ಪತ್ತೆಯಾಗಿಲ್ಲ.

ಈ ನಡುವೆ ಪೊಲೀಸರು ಉತ್ತರಪ್ರದೇಶದ ಅತುಲ್ ಅವರ ಪತ್ನಿ ಮನೆಗೆ ನೋಟಿಸ್ ಅಂಟಿಸಿ ಮೂರು ದಿನಗಳೊಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಅತುಲ್ ಆತಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗುತ್ತಿದ್ದಂತೆ ಬೆಂಗಳೂರು ಪೊಲೀಸರು ಉತ್ತರಪ್ರದೇಶಕ್ಕೆ ಬಂದಿರುವ ವಿಚಾರ ತಿಳಿದು, ಪ್ರಕರಣದ ಪ್ರಮುಖ ಆರೋಪಿಯಾಗಿರುವ ಅತುಲ್ರವರ ಪತ್ನಿ ನಿಖಿತಾ ಹಾಗೂ ಉಳಿದ ಮೂವರು ಮನೆಗೆ ಬೀಗ ಹಾಕಿ ತಲೆಮರೆಸಿಕೊಂಡಿದ್ದು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುವುದರಿಂದ ಅವರ ಸಂಪರ್ಕ ಮಾಡಲು ಪೊಲೀಸರಿಗೆ ಸಾಧ್ಯವಾಗಿಲ್ಲ.

ಅಲ್ಲಿನ ಸ್ಥಳೀಯ ಪೊಲೀಸರ ನೆರವಿನೊಂದಿಗೆ ನಾಲ್ಕು ದಿನಗಳಿಂದ ಹುಡುಕಾಟ ನಡೆಸುತ್ತಿದ್ದು, ಇದುವರೆಗೂ ಅವರ ಸುಳಿವು ಸಿಕ್ಕಿಲ್ಲ. ಒಂದು ವೇಳೆ ಮೂರು ದಿನದೊಳಗೆ ವಿಚಾರಣೆಗೆ ಹಾಜರಾಗದಿದ್ದರೆ ಅವರನ್ನು ಪತ್ತೆಹಚ್ಚಿ ಬಂಧಿಸಿ ಬೆಂಗಳೂರಿಗೆ ಕರೆತರಲು ಮಾರತಹಳ್ಳಿ ಪೊಲೀಸರು ಸಿದ್ದತೆ ಮಾಡಿಕೊಂಡಿದ್ದಾರೆ.

ನಗರದ ಖಾಸಗಿ ಕಂಪನಿಯೊಂದರಲ್ಲಿ ಬಿಹಾರ ಮೂಲದ ಸಾಫ್‌್ಟವೇರ್ ಇಂಜಿನಿಯರ್ ಆಗಿದ್ದ ಅತುಲ್ ಸುಭಾಷ್ ಅವರು ಪತ್ನಿ ಹಾಗೂ ಆಕೆಯ ಮನೆಯವರ ಕಿರುಕುಳದಿಂದ ನೊಂದು ಆತಹತ್ಯೆ ಮಾಡಿಕೊಂಡ ಪ್ರಕರಣವು ದೇಶಾದ್ಯಂತ ಸದ್ದು ಮಾಡಿದ್ದು, ಅತುಲ್ ಅವರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ನಗರದ ಬೆಳ್ಳಂದೂರಿನ ಐಟಿ ಕಂಪನಿ ಕಚೇರಿ ಮುಂದೆ ನೂರಾರು ಮಂದಿ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಕೋಲ್ಕತಾ, ಚಂಡೀಘಡ, ಹೈದರಾಬಾದ್ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಾಫ್‌್ಟವೇರ್ ಇಂಜಿನಿಯರ್ಗಳು, ಯುವ ಜನರು, ವಿವಿಧ ಸಂಘಟನೆಗಳು ಅತುಲ್ ಅವರ ಭಾವಚಿತ್ರ ಹಿಡಿದು ಘೋಷಣೆ ಕೂಗಿ ಭಾರೀ ಪ್ರತಿಭಟನೆ ನಡೆಸಿ ಇವರ ಸಾವಿಗೆ ನ್ಯಾಯ ಕೊಡಿ ಎಂದು ಒತ್ತಾಯಿಸಿದ್ದಾರೆ.

ಈ ನಡುವೆ ಟೆಕ್ಕಿ ಪತ್ನಿ ನಿಖಿತಾ ಕೆಲಸ ಮಾಡುತ್ತಿರುವ ಕಂಪನಿಯಿಂದ ಅವರನ್ನು ವಜಾಗೊಳಿಸಬೇಕೆಂಬ ಒತ್ತಾಯ ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿದೆ.
ಕಂಪನಿಯ ಸಿಇಒ ಅವರಿಗೆ ಹಲವರು ಟ್ವೀಟ್ ಮಾಡಿ ಖಂಡನೆ ವ್ಯಕ್ತಪಡಿಸಿದ್ದು, ನಿಖಿತಾಳನ್ನು ಕೆಲಸದಿಂದ ತೆಗೆದು ಹಾಕಬೇಕೆಂಬ ಕೂಗು ಕೇಳಿಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಟೆಕ್ಕಿ ಅತುಲ್ ಅವರ ಸಾವಿನ ಬಗ್ಗೆ ಭಾರೀ ಚರ್ಚೆ, ವಾಗ್ವಾದಗಳು ನಡೆಯುತ್ತಿವೆ. ಮೂರು ದಿನಗಳಿಂದ ಜಸ್ಟೀಸ್ ಈಸ್ ಡ್ಯೂ, ಅತುಲ್ ವಿ ಲವ್ ಯು, ಜಸ್ಟೀಸ್ ಟು ಅತುಲ್ ಸುಭಾಷ್ ಎಂಬ ವಾಖ್ಯಗಳು ಮೊಳಗಿವೆ. ಅತುಲ್ ಅವರ ಸಾವಿಗೆ ನ್ಯಾಯ ಸಿಗಲಿ ಎಂಬುದೇ ಹಲವರ ಆಗ್ರಹವಾಗಿದೆ.

ತಜ್ಞರ ಸಮಿತಿಗೆ ಒತ್ತಾಯ: ದೇಶದಲ್ಲಿ ಜಾರಿಯಲ್ಲಿರುವ ವರದಕ್ಷಿಣೆ ತಡೆ ಕಾನೂನು ಮತ್ತು ಕೌಟುಂಬಿಕ ದೌರ್ಜನ್ಯ ಕಾಯ್ದೆಗಳನ್ನು ಮರುಪರಿಶೀಲಿಸಲು ತಜ್ಞರ ಸಮಿತಿ ರಚಿಸಬೇಕೆಂಬ ಒತ್ತಾಯ ಕೇಳಿಬಂದಿದೆ. ಟೆಕ್ಕಿ ಆತಹತ್ಯೆ ಪ್ರಕರಣ ಚರ್ಚೆಯಾಗುತ್ತಿರುವಾಗಲೇ ಈ ಕಾಯ್ದೆಗಳಲ್ಲಿ ಮತ್ತಷ್ಟು ಸುಧಾರಣೆ ಮಾಡಬೇಕೆಂದು ಹೇಳಲಾಗಿದೆ.

RELATED ARTICLES

Latest News