ಮೆಲ್ಬೋರ್ನ್, ಮೇ 22 – ಪ್ರಕ್ಷುಬ್ಧ ಫ್ರೆಂಚ್ ಪೆಸಿಫಿಕ್ ಪ್ರದೇಶವಾದ ನ್ಯೂ ಕ್ಯಾಲೆಡೋನಿಯಾದಿಂದ ಆಸ್ಟ್ರೇಲಿಯಾದ ಮಿಲಿಟರಿ ಎರಡು ವಿಮಾನಗಳಲ್ಲಿ 115 ತಮ್ಮ ದೇಶದ ಪ್ರಯಾಣಿಕರನ್ನು ಕರೆತಂದಿದೆ. ಇದೇ ವೇಲೆ ಫ್ರೆಂಚ್ ಸರ್ಕಾರ ಇನ್ನೂ 100 ಪ್ರಯಾಣಿಕರನ್ನು ವಿಮಾನದ ಮೂಲಕ ಸ್ಥಳಾಂತರಿಸುವ ನಿರೀಕ್ಷೆಯಿದೆ ಎಂದು ಆಸ್ಟ್ರೇಲಿಯಾದ ಸರ್ಕಾರದ ಸಚಿವರು ತಿಳಿಸಿದ್ದಾರೆ. .
ನ್ಯೂ ಕ್ಯಾಲೆಡೋನಿಯಾದಲ್ಲಿ ಇತ್ತೀಚಿನ ಸಶಸ್ತ್ರ ಘರ್ಷಣೆಗಳು, ಲೂಟಿ ಮತ್ತು ಬೆಂಕಿಯ ಹಚ್ಚಿ ಹಿಂಸಾಚಾರ ಹೆಚ್ಚಾಗಿದ್ದು ಇದರಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ.
ಕಳೆದ ಮೇ 13 ರಂದು ಪ್ಯಾರಿಸ್‌ನಲ್ಲಿನಲ್ಲಿನ ಫ್ರೆಂಚ್ ಸಮಸದರು ಸಭೆ ಸೇರಿ ನ್ಯೂ ಕ್ಯಾಲೆಡೋನಿಯಾ ಮತದಾರರ ಪಟ್ಟಿಯಲ್ಲಿ ಬದಲಾವಣೆಗಳನ್ನು ಮಾಡಲು ಫ್ರೆಂಚ್ ಸಂವಿಧಾನವನ್ನು ತಿದ್ದುಪಡಿ ಮಾಡುವ ಬಗ್ಗೆ ಚರ್ಚೆ ನಡೆಸುತ್ತಿದ್ದಂತೆ ಅಶಾಂತಿ ಸ್ಫೋಟಗೊಂಡಿತ್ತು.
ಇದನ್ನು ವಿರೋಧಿಸಿ ನ್ಯೂ ಕ್ಯಾಲೆಡೋನಿಯಾದಲ್ಲಿ ಹಿಂಸಾಚಾರ ಶುರುವಾಗಿದೆ ಸ್ಥಳೀಯ ಜನರು ಹಾಗು ವಿದೇಶೀಯರು ಭಯ ಭೀೕತರಾಗಿದ್ದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ನಾಳೆ ನ್ಯೂ ಕ್ಯಾಲೆಡೋನಿಯಾದಲ್ಲಿ ಬರುವ ನಿರೀಕ್ಷೆಯಿದೆ, ಅಲ್ಲಿ ಸ್ಥಳೀಯ ಜನರು ದೀರ್ಘಕಾಲದಿಂದ ಸ್ವಾತಂತ್ರ್ಯವನ್ನು ಬಯಸಿದ್ದಾರೆ. ಅಶಾಂತಿಯು ಫ್ರಾನ್ಸ್ ನ ವಸಾಹತುಶಾಹಿ ಪರಂಪರೆಯನ್ನು ಮ್ಯಾಕ್ರನ್ ನಿರ್ವಹಿಸುವ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮಂಗಳವಾರ ತಡರಾತ್ರಿ ರಾಜಧಾನಿ ನೌಮಿಯಾದಿಂದ ಆಸ್ಟ್ರೇಲಿಯಾದ ಪೂರ್ವ ಕರಾವಳಿ ನಗರವಾದ ಬ್ರಿಸ್ಬೇನ್‌ಗೆ ಎರಡು ರಾಯಲ್ ಆಸ್ಟ್ರೇಲಿಯನ್ ಏರ್‌ಫೋರ್ಸ್ -130 ಹರ್ಕ್‌ಯುಲಸ್‌ನಲ್ಲಿ 84 ಆಸ್ಟ್ರೇಲಿಯಾದ ನಾಗರಿಕರು ತಮ್ಮ ದೇಶಕ್ಕೆ ತೆರಳಿದ್ದಾರೆ ಎಂದು ಪೆಸಿಫಿಕ್ ಸಚಿವ ಪ್ಯಾಟ್ ಕಾನ್ರಾಯ್ ಹೇಳಿದ್ದಾರೆ.
ಉಳಿದ 31 ಪ್ರಯಾಣಿಕರಲ್ಲಿ ಯಾವ ರಾಷ್ಟ್ರೀಯತೆಗಳಿವೆ ಎಂದು ಕಾನ್ರಾಯ್ ಹೇಳಲಿಲ್ಲ. ಆದರೆ ಬಿಕ್ಕಟ್ಟಿನಲ್ಲಿ ತಮ್ಮ ನಾಗರಿಕರಿಗೆ ಸಹಾಯ ಮಾಡಲು ಆಸ್ಟ್ರೇಲಿಯಾವು ಕೆನಡಾ ಮತ್ತು ಜಪಾನ್‌ನೊಂದಿಗೆ ಪರಸ್ಪರ ವ್ಯವಸ್ಥೆಗಳನ್ನುಮಾಡಿದೆ ಎಂದು ಅವರು ಹೇಳಿದರು.
ದಕ್ಷಿಣ ಪೆಸಿಫಿಕ್ ಪ್ರದೇಶವನ್ನು ತೊರೆಯಲು ಆಸ್ಟ್ರೇಲಿಯಾದ ವಿದೇಶಾಂಗ ಇಲಾಖೆಯಲ್ಲಿ ತನ್ನ ನಾಗರೀಕರಿಗೆ ತಿಳಿಸಿದೆ. ನ್ಯೂ ಕ್ಯಾಲೆಡೋನಿಯಾದಲ್ಲಿ 12 ದಿನಗಳ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.