ನವದೆಹಲಿ,ಮೇ.9- ಭಾರತದ 22 ವರ್ಷದ ಎಂಟೆಕ್ ವಿದ್ಯಾರ್ಥಿಯೊಬ್ಬನನ್ನು ಇರಿದು ಕೊಂದ ಹರಿಯಾಣ ಮೂಲದ ಇಬ್ಬರು ಸಹೋದರರನ್ನು ಆಸ್ಟ್ರೇಲಿಯಾದಲ್ಲಿ ಬಂಧಿಸಲಾಗಿದೆ.
ಮೆಲ್ಬೋರ್ನ್ ಉಪನಗರ ಒರ್ಮಂಡ್‌ನಲ್ಲಿ ನವಜೀತ್ ಸಂಧು ಅವರನ್ನು ಮಾರಣಾಂತಿಕವಾಗಿ ಇರಿದ ಎರಡು ದಿನಗಳ ನಂತರ ನ್ಯೂ ಸೌತ್ ವೇಲ್‌್ಸನ ಗೌಲ್ಬರ್ನ್‌ನಲ್ಲಿ ಅಭಿಜೀತ್ ಮತ್ತು ರಾಬಿನ್ ಗಾರ್ಟನ್ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎನ್‌ಎಸ್‌ಡಬ್ಲ್ಯೂ ಪೊಲೀಸರ ನೆರವಿನೊಂದಿಗೆ ಸಹೋದರರಾದ ಅಭಿಜೀತ್ ಮತ್ತು ರಾಬಿನ್ ಗಾರ್ಟನ್ ಅವರನ್ನು ಗೌಲ್‌ಬರ್ನ್‌ನಲ್ಲಿ ಬಂಧಿಸಲಾಗಿದೆ ಎಂದು ವಿಕ್ಟೋರಿಯಾ ಪೊಲೀಸರು ಅಧಿಕತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹತ್ಯೆಗೀಡಾದ ಸಂಧು ಮತ್ತು ಆರೋಪಿಗಳು ಹರಿಯಾಣದ ಕರ್ನಾಲ್ ನಿವಾಸಿಗಳು.
ಭಾರತೀಯ ವಿದ್ಯಾರ್ಥಿಗಳ ಗುಂಪಿನ ನಡುವಿನ ಬಾಡಿಗೆ ಸಂಬಂಧಿತ ವಿವಾದದಲ್ಲಿ ಘರ್ಷಣೆಗೆ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸುತ್ತಿದ್ದಾಗ ಸಂಧುವನ್ನು ಇನ್ನೊಬ್ಬ ವಿದ್ಯಾರ್ಥಿಯು ಚಾಕುವಿನಿಂದ ಎದೆಗೆ ಮಾರಣಾಂತಿಕವಾಗಿ ಇರಿದಿದ್ದಾನೆ. ಘಟನೆಯಲ್ಲಿ ನವಜೀತ್ ಅವರ 30 ವರ್ಷದ ಸ್ನೇಹಿತನಿಗೂ ಗಾಯಗಳಾಗಿವೆ ಎಂದು ಬಲಿಪಶುವಿನ ಚಿಕ್ಕಪ್ಪ ತಿಳಿಸಿದ್ದಾರೆ.
ನವಜೀತ್‌ನ ಸ್ನೇಹಿತ (ಮತ್ತೊಬ್ಬ ಭಾರತೀಯ ವಿದ್ಯಾರ್ಥಿ) ತನ್ನ ಬಳಿ ಕಾರನ್ನು ಹೊಂದಿದ್ದರಿಂದ ಅವನ ಸಾಮಾನುಗಳನ್ನು ತೆಗೆದುಕೊಳ್ಳಲು ಅವನ ಮನೆಗೆ ಹೋಗುವಂತೆ ಕೇಳಿದ್ದನು. ಅವನ ಸ್ನೇಹಿತ ಒಳಗೆ ಹೋದಾಗ, ನವಜೀತ್ ಕೆಲವು ಕೂಗುಗಳನ್ನು ಕೇಳಿದನು ಮತ್ತು ಜಗಳವಾಡುವುದನ್ನು ನೋಡಿದನು.
ನವಜೀತ್ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಜಗಳವಾಡಬೇಡಿ ಎಂದು ಹೇಳಿ ಎದೆಗೆ ಚಾಕುವಿನಿಂದ ಮಾರಣಾಂತಿಕವಾಗಿ ಇರಿದಿದ್ದಾರೆ ಎಂದು ಸಂಧು ಅವರ ಚಿಕ್ಕಪ್ಪ ಯಶ್ವೀರ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.ನವಜೀತ್ ಒಂದೂವರೆ ವರ್ಷಗಳ ಹಿಂದೆ ಅಧ್ಯಯನ ವೀಸಾದ ಮೇಲೆ ಆಸ್ಟ್ರೇಲಿಯಾಕ್ಕೆ ತೆರಳಿದ್ದರು ಮತ್ತು ಅವರ ತಂದೆ, ಕಷಿಕರು ತಮ ಒಂದೂವರೆ ಎಕರೆ ಜಮೀನನ್ನು ಮಾರಾಟ ಮಾಡಿದ್ದು, ಅವರ ಶಿಕ್ಷಣಕ್ಕೆ ಹಣ ನೀಡಿದ್ದರು.