Friday, October 3, 2025
Homeಬೆಂಗಳೂರುಬೆಂಗಳೂರಲ್ಲಿ ಆಯುಧ ಪೂಜೆ ಸಡಗರ, ದೇವಾಲಯಗಳಲ್ಲಿ ವಿಶೇಷ ಪೂಜೆ

ಬೆಂಗಳೂರಲ್ಲಿ ಆಯುಧ ಪೂಜೆ ಸಡಗರ, ದೇವಾಲಯಗಳಲ್ಲಿ ವಿಶೇಷ ಪೂಜೆ

Ayudha Puja in Bengaluru, special worship in temples

ಬೆಂಗಳೂರು,ಅ.1– ರಾಜ್ಯಾದಂತ ಇಂದು ಆಯುಧ ಪೂಜೆ ಸಂಭ್ರಮ ಮನೆ ಮಾಡಿದ್ದು, ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಕಾರ್ಯಗಳು ಶ್ರದ್ಧಾ ಭಕ್ತಿಯಿಂದ ನೆರವೇರಿದವು. ನಿನ್ನೆಯಿಂದಲೇ ಸರ್ಕಾರಿ ಕಚೇರಿಗಳು, ಕೈಗಾರಿಕೆಗಳು, ಖಾಸಗಿ ಕಚೇರಿಗಳಲ್ಲಿ ಆಯುಧ ಪೂಜೆ ನೆರವೇರಿದ್ದು, ಇಂದು ಸಹ ಹಲವೆಡೆ ಪೂಜೆಗಳು ನಡೆದವು.

ತಮ ತಮ ವಾಹನಗಳನ್ನು ಶುಚಿಗೊಳಿಸಿ, ಶೃಂಗಾರ ಮಾಡಿ ಕೆಲವರು ಮನೆಗಳ ಬಳಿಯೇ ಪೂಜೆ ಮಾಡಿದರೆ ಇನ್ನೂ ಕೆಲವರು ಪ್ರಮುಖ ದೇವಾಲಯಗಳ ಬಳಿ ವಾಹನಗಳಿಗೆ ಕುಂಬಳಕಾಯಿ ಹೋಡೆಯುವ ಮೂಲಕ ಪೂಜೆ ಮಾಡಲಾಯಿತು. ನಗರದ ಸರ್ಕಲ್‌ ಮಾರಮ, ಗಾಳಿ ಆಂಜನೇಯ ದೇವಾಲಯ, ವಿಜಯನಗರದ ಮಾರುತಿ ಮಂದಿರ, ಬನಶಂಕರಿ ದೇವಾಲಯ, ರಾಜಾಜಿನಗರದ ರಾಮ ಮಂದಿರ, ಗವಿ ಗಂಗಾಧರೇಶ್ವರ, ಕಾಡುಮಲ್ಲೇಶ್ವರ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು, ಮುಂಜಾನೆಯಿಂದಲೇ ಪೂಜಾ ಕಾರ್ಯಗಳು ನೆರವೇರಿದವು.

ಇಂದು ನಾಳೆ ರಜೆ ಇರುವುದರಿಂದ ಬೆಳಗ್ಗೆಯೇ ಜನರು ವಾಹನಗಳಿಗೆ ಪೂಜೆ ಮಾಡಿ ಊರು, ದೇವಾಲಯ, ಪ್ರವಾಸಿ ತಾಣಗಳತ್ತ ಪ್ರಯಾಣ ಮುಂದುವರೆಸಿದರು.

ಸರ್ವಿಸ್‌‍ ಸೆಂಟರ್‌ಗಳಲ್ಲಿ ಸಾಲು:
ಜನರು ತಮ ವಾಹನಗಳನ್ನು ವಾಶ್‌ ಮಾಡಲು ನಗರದ ವಾಟರ್‌ ಸರ್ವಿಸ್‌‍ ಸೆಂಟರ್‌ಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ವಾಹನಗಳನ್ನು ವಾಶ್‌ ಮಾಡಿಸಿಕೊಂಡು ಹೋಗುತ್ತಿದ್ದ ದೃಶ್ಯಗಳು ಕಂಡು ಬಂದವು.

RELATED ARTICLES

Latest News