ಬೆಂಗಳೂರು: ಪೊಲಿಟಿಕಲ್ ಆಕ್ಷನ್ ಕಮಿಟಿ (ಬಿ.ಪ್ಯಾಕ್) ವತಿಯಿಂದ ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ ಇರುವವರಿಗಾಗಿ ಬಿ.ಪ್ಯಾಕ್ ನಾಗರಿಕ ನಾಯಕತ್ವ ತರಬೇತಿ (ಬಿ.ಕ್ಲಿಪ್) ಕಾರ್ಯಕ್ರಮದ 10ನೇ ಆವೃತ್ತಿಗೆ ಅರ್ಜಿ ಆಹ್ವಾನಿಸಿದೆ. ರಾಜಕೀಯ, ನಗರ ಆಡಳಿತ, ನೀತಿ ನಿರೂಪಣೆ, ನಾಯಕತ್ವ, ಚುನಾವಣಾ ಕಾರ್ಯತಂತ್ರ, ಮಾಧ್ಯಮ ನಿರ್ವಹಣೆ ಸೇರಿದಂತೆ ನಾಗರಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಬೇಕಾದ ಎಲ್ಲಾ ರೀತಿಯ ಅರ್ಹತೆಯನ್ನು ಈ ತರಬೇತಿಯಲ್ಲಿ ನೀಡಲಾಗುತ್ತದೆ.
ಬಿ.ಕ್ಲಿಪ್ ಕಾರ್ಯಕ್ರಮದ ಮುಖ್ಯಸ್ಥ ರಾಘವೇಂದ್ರ ಪೂಜಾರಿ ಹೆಚ್.ಎಸ್ ಮಾತನಾಡಿ, ಬೆಂಗಳೂರಿನ ತಳಮಟ್ಟದಲ್ಲಿ ನಾಗರಿಕರ ಜವಾಬ್ದಾರಿಯನ್ನು ಯಶಸ್ವಿಯಾಗಿ ಮುನ್ನಡೆಸುವ ಮತ್ತು ದಕ್ಷ ಆಡಳಿತದ ಮೂಲಕ ಸಮಾಜದಲ್ಲಿ ಬದಲಾವಣೆ ಸೃಷ್ಟಿಸುವ ನಾಯಕರನ್ನು ರೂಪಿಸುವುದೇ ಈ ತರಬೇತಿಯ ಮೂಲ ಉದ್ದೇಶ. ಕಳೆದ ಒಂಬತ್ತು ವರ್ಷಗಳಲ್ಲಿ, 400 ಕ್ಕೂ ಹೆಚ್ಚು ನಾಗರಿಕರಿಗೆ ತರಬೇತಿ ನೀಡಲಾಗಿದ್ದು, 10ನೇ ಆವೃತ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಏಪ್ರಿಲ್ 10ರವರೆಗೂ ಅರ್ಜಿ ಸಲ್ಲಿಸಲು ಮುಕ್ತವಾಗಿದೆ. ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿದ್ದು, ಈ ಚುನಾವಣೆಯಲ್ಲಿ ಸ್ಪರ್ಧಿಸುವವರು ಸಹ ಇಲ್ಲಿ ತರಬೇತಿ ಪಡೆದು, ಸೂಕ್ತ ರೀತಿಯಲ್ಲಿ ಆಡಳಿತ ನಡೆಸಲು ಅನುಭವ ಪಡೆದುಕೊಳ್ಳಬಹುದು.
ಆಸಕ್ತರ ಬೆಂಗಳೂರಿನ ನಾಗರಿಕರು www.bpac.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ, +91- 63648 56147, 080-41521797 ಸಂಪರ್ಕಿಸಿ ಅಥವಾ bclip@bpac.in ವೆಬ್‌ಸೈಟ್‌ಗೆ ಭೇಟಿ ನೀಡಿ.