Thursday, July 3, 2025
Homeರಾಜಕೀಯ | Politicsಯೂ ಟರ್ನ್‌ ಹೊಡೆದ ಬಿ.ಆರ್‌.ಪಾಟೀಲ್‌

ಯೂ ಟರ್ನ್‌ ಹೊಡೆದ ಬಿ.ಆರ್‌.ಪಾಟೀಲ್‌

B.R.Patil makes a U-turn

ಬೆಂಗಳೂರು,ಜು.2- ಸಿದ್ದರಾಮಯ್ಯ ಅವರಿಗೆ ಸೋನಿಯಾಗಾಂಧಿಯವರನ್ನು ಭೇಟಿ ಮಾಡಿಸಿದ್ದು ನಾನೇ ಎಂದು ಹೇಳಿಕೊಂಡಿದ್ದ ಶಾಸಕ ಬಿ.ಆರ್‌.ಪಾಟೀಲ್‌ ಯೂ-ಟರ್ನ್‌ ಪಡೆದಿದ್ದು, ಸಿದ್ದರಾಮಯ್ಯ ಹಾಗೂ ಸೋನಿಯಾಗಾಂಧಿಯವರನ್ನು ಭೇಟಿ ಮಾಡುವಾಗ ನಾನು ಜೊತೆಯಲ್ಲಿ ಹೋಗಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ಬಿ.ಆರ್‌. ಪಾಟೀಲ್‌ರ ಹೇಳಿಕೆಗಳು ತೀವ್ರ ವಿವಾದಕ್ಕೀಡಾಗುತ್ತಿದ್ದು, ಪಕ್ಷಕ್ಕೆ ಭಾರಿ ಮುಜುಗರ ಉಂಟು ಮಾಡುತ್ತಿದೆ.ವಸತಿ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಬಿ.ಆರ್‌.ಪಾಟೀಲ್‌ರ ಆಡಿಯೊ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅನಂತರವೂ ಅವರು ತಮ ಹೇಳಿಕೆಯನ್ನು ಪುನರುಚ್ಚರಿಸುವ ಮೂಲಕ ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರ ಉಂಟುಮಾಡಿದ್ದರು.

ಈ ನಡುವೆ ಬಿ.ಆರ್‌.ಪಾಟೀಲ್‌ ತಮ ಆತೀಯರೊಂದಿಗಿನ ಸಮಾಲೋಚನೆಯೊಂದಿಗೆ ಸಿದ್ದರಾಮಯ್ಯನವರಿಗೆ ಸೋನಿಯಾಗಾಂಧಿಯವರನ್ನು ಮೊದಲು ಭೇಟಿ ಮಾಡಿಸಿದ್ದು ನಾನು. ಆಗ ಅದೃಷ್ಟ ಚೆನ್ನಾಗಿತ್ತು. ಲಕ್ಕಿ ಲಾಟರಿ ಹೊಡೆದು ಮುಖ್ಯಮಂತ್ರಿಯಾದರು. ನನಗೆ ಗಾಡು ಇಲ್ಲ, ಗಾಡ್‌ಫಾದರ್‌ ಇಲ್ಲ ಎಂದು ವಿಷಾದಿಸಿದರು. ಇದು ಮತ್ತಷ್ಟು ಚರ್ಚೆಗಳನ್ನು ಹುಟ್ಟುಹಾಕಿತ್ತು. ಪಕ್ಷಕ್ಕೂ ಮುಜುಗರ ಉಂಟುಮಾಡಿತ್ತು. ಖುದ್ದು ಸಿದ್ದರಾಮಯ್ಯನವರೇ ಹೇಳಿಕೆಯಿಂದ ಇರಿಸುಮುರಿಸಿಗೆ ಒಳಗಾಗಿದ್ದರು.

ಹೀಗಾಗಿ ಬಿ.ಆರ್‌.ಪಾಟೀಲ್‌ ಮತ್ತೊಂದು ವಿಡಿಯೋ ಮಾಡಿ ಸ್ಪಷ್ಟನೆ ನೀಡಿದ್ದಾರೆ.
ನನ್ನ ಮತ್ತು ಸಿದ್ದರಾಮಯ್ಯನವರ ನಡುವಿನ ಸಂಬಂಧ ಹಾಳು ಮಾಡಲು ಷಡ್ಯಂತ್ರಗಳು ನಡೆದಿವೆ ಎಂದು ಅಳಲು ತೋಡಿಕೊಂಡಿದ್ದಾರೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನನ್ನ ತೇಜೋವಧೆ ಮಾಡುವ ಪ್ರಯತ್ನಗಳಾಗುತ್ತಿವೆ ಎಂದು ಆರೋಪಿಸಿದ್ದಾರೆ.

ಕೆ.ಆರ್‌.ಪೇಟೆಯ ಸ್ನೇಹಿತರೊಂದಿಗೆ ಮಾತನಾಡುವಾಗ ಸಿದ್ದರಾಮಯ್ಯ ಅವರಿಗೆ ಅದೃಷ್ಟವಿತ್ತು, ಸಿಎಂ ಆದರು ಎಂದಿದ್ದೇನೆ. ಸೋನಿಯಾಗಾಂಧಿಯವರನ್ನು ನಾನೇ ಭೇಟಿ ಮಾಡಿಸಿದ್ದೆ ಎಂದಿರುವುದು ಸಂಪೂರ್ಣ ತಪ್ಪು. ಭೇಟಿಯ ವೇಳೆ ಸಿದ್ದರಾಮಯ್ಯನವರ ಜೊತೆ ನಾನು ಹೋಗಿದ್ದೆ. ಈ ಬಾರಿ ಸೋನಿಯಾಗಾಂಧಿಯವರನ್ನು ಭೇಟಿ ಮಾಡುವುದು ಬೇಡ ಎಂದು ಸಿದ್ದರಾಮಯ್ಯನವರು ಹೇಳಿದ್ದು, ನಾನೇ ಬಲವಂತ ಮಾಡಿ ಕರೆದುಕೊಂಡು ಹೋಗಿದ್ದೆ ಎಂದಿದ್ದಾರೆ.

ಸಿದ್ದರಾಮಯ್ಯ ಸಮೂಹ ನಾಯಕ. ಅವರನ್ನು ಮುಖ್ಯಮಂತ್ರಿ ಮಾಡುವ ಶಕ್ತಿ ನನಗಿಲ್ಲ. ನನ್ನ ಮತ್ತು ಅವರ ಆತೀಯ ಸಂಬಂಧವನ್ನು ಹಾಳು ಮಾಡಲು ಕೆಲವರು ಉದ್ದೇಶಪೂರಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಜನತಾದಳದ 9 ಮಂದಿ ಶಾಸಕರು ಕಾಂಗ್ರೆಸ್‌‍ ಸೇರಿದ್ದರು. ಕಾಂಗ್ರೆಸ್‌‍ ಪಕ್ಷ ಸಿದ್ದರಾಮಯ್ಯನವರ ಜನಬೆಂಬಲ ನೋಡಿ ಮುಖ್ಯಮಂತ್ರಿ ಮಾಡಿದೆ. ನಾನು ಹೇಳಿದ್ದರಿಂದ ಮುಖ್ಯಮಂತ್ರಿ ಮಾಡಲಾಯಿತು ಎಂಬುದು ಸರಿಯಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

RELATED ARTICLES

Latest News